India vs Afghanistan: ತಾಳ್ಮೆ ಕಳೆದುಕೊಂಡ ಕೋಚ್ ರಾಹುಲ್ ದ್ರಾವಿಡ್

ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಗುರುವಾರ ಭಾರತ ಅಫ್ಘಾನಿಸ್ತಾನದ ವಿರುದ್ಧ ಸೆಣೆಸಲು ಸಜ್ಜಾಗಿದೆ. ಪಂದ್ಯಕ್ಕೂ ಮುನ್ನ ತಂಡದ ಕೋಚ್ ರಾಹುಲ್ ದ್ರಾವಿಡ್ ಮಾಧ್ಯಮದವರ ಜೊತೆ ಮಾತನಾಡುವಾಗ ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ.

ಅಫ್ಘಾನಿಸ್ತಾನ ವಿರುದ್ಧದ ಟಿ 20 ವಿಶ್ವಕಪ್ 2024 ಪಂದ್ಯದ ಮೊದಲು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದಾಗ ಕೆಲವು ಕಹಿ ನೆನಪುಗಳನ್ನು ನೆನಪಿಸಿಕೊಂಡರು.

Rahul Dravid s Tense Exchange with Reporter Over Past Performance

ವರದಿಗಾರರು ಅನವಶ್ಯಕವಾಗಿ ಪ್ರಶ್ನೆ ಕೇಳಿದ್ದು ರಾಹುಲ್ ದ್ರಾವಿಡ್ ಅವರ ಕೋಪಕ್ಕೆ ಕಾರಣವಾಯಿತು. ವೆಸ್ಟ್ ಇಂಡೀಸ್‌ನ ಬಾರ್ಬಡೋಸ್‌ನಲ್ಲಿ ಅವರು ಆಟಗಾರರಾಗಿ ಉತ್ತಮ ಪ್ರದರ್ಶನ ನೀಡಿಲ್ಲ, ವರದಿಗಾರರು ಬಾರ್ಬಡೋಸ್‌ನಲ್ಲಿ ನಿಮ್ಮ ಅಂಕಿ ಅಂಶಗಳನ್ನು ನೆನಪಿಸುತ್ತಿದ್ದಂತೆ ದ್ರಾವಿಡ್ ಕೋಪ ಮಾಡಿಕೊಂಡರು, ತಾಳ್ಮೆಯನ್ನು ಕಳೆದುಕೊಂಡರು.

ವರದಿಗಾರ ಕೇಳಿದ್ದೇನು?

ವರದಿಗಾರನಿಗೆ ಖಡಕ್ ಆಗಿ ಉತ್ತರ ಕೊಟ್ಟ ಅವರು, ನಾನು ಅದೆಲ್ಲವನ್ನು ಮರೆತಿದ್ದೇನೆ. ಈಗ ತರಬೇತುದಾರನಾಗಿ ಮಾತ್ರ ಕೆಲಸ ಮಾಡುತ್ತಿದ್ದೇನೆ, ಆಟಗಾರನಾಗಿ ಹಿಂದೆ ಹೇಗೆ ಪ್ರದರ್ಶನ ನೀಡಿದ್ದರ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು ಹೇಳಿದರು.

ವರದಿಗಾರ, ನೀವು ಆಟಗಾರನಾಗಿ ಇಲ್ಲಿ ಆಡಿದ್ದೀರಿ. 1997ರಲ್ಲಿ ಟೆಸ್ಟ್‌ನ ಅತ್ಯುತ್ತಮ ನೆನಪುಗಳಲ್ಲವೇ? ಎಂದು ಕೇಳಿದರು. ಅದಕ್ಕೆ ರಾಹುಲ್ ದ್ರಾವಿಡ್, ತುಂಬಾ ಧನ್ಯವಾದಗಳು ಗೆಳೆಯ, ನಾನು ಇಲ್ಲಿ ಇತರೆ ಕೆಲವು ಉತ್ತಮ ನೆನಪುಗಳನ್ನು ಹೊಂದಿದ್ದೇನೆ ಎಂದರು.

1997ರಲ್ಲಿ ಭಾರತ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ದ್ರಾವಿಡ್ ಬಾರ್ಬಡೋಸ್‌ನಲ್ಲಿ ಆಡಿದ್ದರು. ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತ ತಂಡ 38 ರನ್‌ಗಳಿಂದ ಸೋಲನುಭವಿಸಿತ್ತು. ದ್ರಾವಿಡ್ 78 ಮತ್ತು 2 ರನ್ ಗಳಿಸಿದರು. ಈಗ ಭಾರತ ತಂಡದ ಕೋಚ್, ಲೆಜೆಂಡರಿ ಕ್ರಿಕೆಟಿಗ ಕೇವಲ ಈಗ ಮಾಡಬೇಕಿರುವ ಕೆಲಸದ ಬಗ್ಗೆ ಯೋಚಿಸುತ್ತಿದ್ದಾರೆಯೇ ಹೊರತು 25 ವರ್ಷಗಳ ಹಿಂದೆ ನಡೆದದ್ದಲ್ಲ ಎಂದು ಹೇಳಿದರು.

"ನಾನು ಇನ್ನು ಮುಂದೆ ಆಟಗಾರನಾಗಿ ನನ್ನ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನಾಳೆಯತ್ತ ಗಮನಹರಿಸಿ ಮತ್ತು ನಾಳೆ ಉತ್ತಮ ಫಲಿತಾಂಶವನ್ನು ಪಡೆಯಲು ಪ್ರಯತ್ನಿಸಿ" ಎಂದು ಹೇಳಿದರು.

ಭಾರತ ಅಫ್ಘಾನಿಸ್ತಾನ ಪಂದ್ಯ

ಲೀಗ್ ಹಂತದಲ್ಲಿ ಅಜೇಯವಾಗಿ ಉಳಿದು ಸೂಪರ್ 8 ಹಂತಕ್ಕೆ ಪ್ರವೇಶಿಸಿದ ಭಾರತ, ಇಂದು ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಬಾರ್ಬಡೋಸ್‌ನ ಕೆನ್ಸಿಂಗ್ಟ್‌ನ ಓವಲ್‌ನಲ್ಲಿ ರೋಹಿತ್ ಶರ್ಮಾ ಪಡೆ ಅಫ್ಘಾನಿಸ್ತಾವನ್ನು ಎದುರಿಸಲಿದೆ.

ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಯುಎಸ್‌ಎನಲ್ಲಿ ಆಡಿರುವ ಭಾರತಲಕ್ಕೆ ಈಗ ವೆಸ್ಟ್ ಇಂಡೀಸ್‌ನ ಪಿಚ್‌ಗಳಿಗೆ ಹೊಂದಿಕೊಳ್ಳುವುದು ಸವಾಲಾಗಿದೆ. ಅಫ್ಘಾನಿಸ್ತಾನ ಅತ್ಯುತ್ತಮ ಸ್ಪಿನ್ ದಾಳಿಯನ್ನು ಹೊಂದಿದ ತಂಡವಾಗಿದ್ದು, ಭಾರತ ಅವರನ್ನು ಹೇಗೆ ಎದುರಿಸಲಿದೆ ಎನ್ನುವುದು ಕುತೂಹಲಕಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+