ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FIFA World Cup 2022: ಕತಾರ್‌ನಲ್ಲಿ ಝಾಕೀರ್ ನಾಯ್ಕ್‌ರಿಂದ ಉಪನ್ಯಾಸ?

|
Google Oneindia Kannada News

ಕತಾರ್, ನವೆಂಬರ್ 21: ವಿಶ್ವದ ಶ್ರೀಮಂತ ಕ್ರೀಡೆ ಎಂದರೆ ಫಿಫಾ ಪುಟ್ಬಾಲ್‌ ವಿಶ್ವಕಪ್. ಈ ಪುಟ್ಬಾಲ್‌ ವಿಶ್ವಕಪ್‌ 2022ರ ಆವೃತ್ತಿಯು ಗಲ್ಫ್ ದೇಶ ಕತಾರ್‌ನಲ್ಲಿ ನಿನ್ನೆ ಭಾನುವಾರದಿಂದ ಪ್ರಾರಂಭವಾಗಿದೆ. ಇಸ್ಲಾಂ ರಾಷ್ಟ್ರವೊಂದರಲ್ಲಿ ಫಿಫಾ ವಿಶ್ವಕಪ್ ನಡೆಯುತ್ತಿರುವುದು ಇದೇ ಮೊದಲ ಬಾರಿಗೆ. ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ಗೆ ಸಂಬಂಧಿಸಿದಂತೆ ವಿವಾದಗಳು ಮುಂದುವರೆದಿದೆ. ಈ ಹಿಂದೆ ಕ್ರೀಡಾಂಗಣದಲ್ಲಿ ಮದ್ಯಪಾನ ಮತ್ತು ಎಲ್‌ಜಿಬಿಟಿ ನಿಷೇಧದ ಕಾರಣ ಗಲಾಟೆ ನಡೆದಿತ್ತು. ಇದೀಗ ಫಿಫಾ ವಿಶ್ವಕಪ್‌ನಲ್ಲಿ ಇಸ್ಲಾಂ ಧರ್ಮವನ್ನು ಉತ್ತೇಜಿಸುವ ವಿವಾದ ಪ್ರಾರಂಭವಾಗಿದೆ.

ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ ಮತ್ತು ಪೋರ್ಚುಗೀಸ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಕೊನೆಯ ವಿಶ್ವಕಪ್ ಆಡಲಿರುವುದರಿಂದ ಈ ಬಾರಿ ಫಿಫಾ ವಿಶ್ವಕಪ್ ಈ ಆವೃತ್ತಿಯು ಸಾಕಷ್ಟು ವಿಶೇಷವಾಗಲಿದೆ. ಮೊದಲ ದಿನವೇ 45 ಲಕ್ಷಕ್ಕೂ ಅಧಿಕ ಮಂದಿ ಪಂದ್ಯ ವೀಕ್ಷಿಸಿದ್ದಾರೆ. ಇಸ್ಲಾಂ ರಾಷ್ಟ್ರವಾದ ಕತಾರ್ ಇಂತಹ ದೊಡ್ಡ ಕಾರ್ಯಕ್ರಮದ ಸಹಾಯದಿಂದ ತನ್ನ ಇಸ್ಲಾಂ ಧರ್ಮವನ್ನು ಹರಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಸುಮಾರು ಒಂದು ತಿಂಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಕತಾರ್‌ನಿಂದ ಅನೇಕ ಮುಸ್ಲಿಂ ಬೋಧಕರನ್ನು ಕರೆಸಲಾಗಿದ್ದು, ಭಾರತದ ಪರಾರಿಯಾಗಿರುವ ಝಾಕೀರ್ ನಾಯ್ಕ್‌ರನ್ನೂ ಕೂಡ ಕರೆಸಿಕೊಂಡಿದೆ. ಪಂದ್ಯದ ವೇಳೆ ಮುಸ್ಲಿಂ ಧರ್ಮ ಪ್ರಚಾರ ಮಾಡುವ ಕೆಲಸ ಮಾಡಲಿದ್ದಾರೆ.

ಫುಟ್ಬಾಲ್‌ ವಿಶ್ವಕಪ್‌: ಕತಾರ್ ವಿರುದ್ಧದ ಪಂದ್ಯ ಸೋಲಲು ಈಕ್ವೆಡಾರ್ ತಂಡಕ್ಕೆ 60 ಕೋಟಿ ಲಂಚ?ಫುಟ್ಬಾಲ್‌ ವಿಶ್ವಕಪ್‌: ಕತಾರ್ ವಿರುದ್ಧದ ಪಂದ್ಯ ಸೋಲಲು ಈಕ್ವೆಡಾರ್ ತಂಡಕ್ಕೆ 60 ಕೋಟಿ ಲಂಚ?

ಭಾರತದ ಪರಾರಿಯಾಗಿರುವ ಝಾಕೀರ್ ನಾಯ್ಕ್‌

ಭಾರತದ ಪರಾರಿಯಾಗಿರುವ ಝಾಕೀರ್ ನಾಯ್ಕ್‌ರನ್ನು ಕತಾರ್ ಕೂಡ ಕರೆದು ಭಾರತವನ್ನು ಕೆರಳಿಸಿದೆ. ಕತಾರ್‌ನ ಆಹ್ವಾನದ ಮೇರೆಗೆ ಮೂಲಭೂತವಾದಿ ಇಸ್ಲಾಂ ಧಾರ್ಮಿಕ ಮುಖಂಡ ಕೂಡ ಗಲ್ಫ್ ದೇಶವನ್ನು ತಲುಪಿದ್ದಾರೆ. ಝಾಕೀರ್ ನಾಯ್ಕ್‌ ಭಾರತದಲ್ಲಿ ಧಾರ್ಮಿಕ ಮತಾಂತರವನ್ನು ಉತ್ತೇಜಿಸುತ್ತಿದ್ದರು. ಅಷ್ಟೇ ಅಲ್ಲ, ಭಾರತದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಅನೇಕ ಆರೋಪಗಳು ಅವರ ಮೇಲಿವೆ.

Qatar has invited Zakir Naik to give religious lectures ahead of the FIFA World Cup 2022

ಭಾರತದ ವಿರೋಧಿ ಕತಾರ್?

ಕತಾರ್ ಆಗಾಗ್ಗೆ ಭಾರತದ ವಿರೋಧಿಗಳನ್ನು ಬೆಂಬಲಿಸುತ್ತದೆ. ಇದಕ್ಕೂ ಮುನ್ನ ಕತಾರ್ ಭಾರತದ ವಿವಾದಿತ ಚಿತ್ರಕಲಾವಿದ ಎಂಎಫ್ ಹುಸೇನ್ ಅವರಿಗೆ ಆಶ್ರಯ ನೀಡಿದ್ದರು. ಅಷ್ಟೇ ಅಲ್ಲ, ನೂಪುರ್ ಶರ್ಮಾ ಹೇಳಿಕೆ ಮೇರೆಗೆ ಭಾರತೀಯ ರಾಯಭಾರಿಯನ್ನು ಕರೆಸಲಾಗಿತ್ತು. ನೂಪುರ್ ಶರ್ಮಾ ಪ್ರಕರಣದಲ್ಲಿ ಕತಾರ್ ಭಾರತದ ವಿರುದ್ಧ ಸಾಕಷ್ಟು ಹೇಳಿಕೆಗಳನ್ನು ನೀಡಿತ್ತು.

Qatar has invited Zakir Naik to give religious lectures ahead of the FIFA World Cup 2022

ಈಗ ಅವರು ಭಾರತದಿಂದ ಪಲಾಯನವಾದಿ ಎಂದು ಘೋಷಿಸಲ್ಪಟ್ಟಿರುವ ಮೂಲಭೂತವಾದಿ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್‌ ಅವರನ್ನು ಕರೆದಿದ್ದಾರೆ. ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ ಶುರುವಾಗಿದೆ. ಕ್ರೀಡಾಕೂಟದಲ್ಲಿ ಕತಾರ್‌ಗೆ ಮುಸ್ಲಿಂ ಬೋಧಕ ಏಕೆ ಬೇಕು ಎಂದು ಜನರು ಕೇಳಿದರು. ಅದೂ ಝಾಕೀರ್ ನಾಯ್ಕ್ ಇತರ ಧರ್ಮಗಳಿಗೆ ಅಗೌರವ ತೋರಿದ ಇತಿಹಾಸವಿರುವಾಗ ಇಂತಹ ವ್ಯಕ್ತಿಗಳನ್ನು ಜಾಗತಿಕವಾಗಿ ಧಾರ್ಮಿಕ ಪ್ರಚಾರ ಮಾಡುವುದು ಏಕೆಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ.

English summary
Qatar has invited Zakir Naik to give religious lectures ahead of the FIFA World Cup 2022. Zakir Abdul Karim Naik is an Indian Islamic preacher who is facing charges of money laundering and hate speech in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X