Get Updates
Get notified of breaking news, exclusive insights, and must-see stories!

WPL RCB: ಕ್ರಿಕೆಟ್‌ ಆಟಗಾರ್ತಿಯರ ಪರ್ಫಾಮೆನ್ಸ್‌ಗೆ ತಿರುಪತಿ ಬಾಲಾಜಿ, ಯೇಸು ಕ್ರಿಸ್ತನನ್ನು ಎಳೆದು ತಂದರೆ ಹೇಗೆ: ಪ್ರಕಾಶ್ ರಾಜ್

WPL RCB 2026: ಡಬ್ಲ್ಯೂಪಿಎಲ್ 2026 ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಟ್ರೋಫಿಗೆ ಮುತ್ತಿಟ್ಟಿತು. ಈ ಹಿನ್ನೆಲೆ ಆರ್‌ಸಿಬಿ ತಂಡ ಹಾಗೂ ನಾಯಕಿ ಸ್ಮೃತಿ ಮಂಧಾನಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬಂದವು. ಇದರ ನಡುವೆಯೇ ಇದೀಗ ಈ ಜಯಕ್ಕೆ ಧಾರ್ಮಿಕ ಅರ್ಥ ನೀಡಿರುವ ಪೋಸ್ಟ್‌ವೊಂದು ವಿವಾದ ಸೃಷ್ಟಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್ ಅವರು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮಹಿಳಾ ಪ್ರೀಮಿಯರ್ ಲೀಗ್‌ (ಡಬ್ಲ್ಯೂಪಿಎಲ್) 2026ರ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿ ಎರಡನೇ ಬಾರಿ ಚಾಂಪಿಯನ್ ಆಗಿದೆ. ಈ ಐತಿಹಾಸಿಕ ಗೆಲುವಿನ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ತಂಡ ಹಾಗೂ ನಾಯಕಿ ಸ್ಮೃತಿ ಮಂಧನಾ ಅವರ ನಾಯಕತ್ವವನ್ನು ಶ್ಲಾಘಿಸುವ ಸಂದೇಶಗಳು ವ್ಯಾಪಕವಾಗಿ ಹರಿದಾಡಿದವು.

Prakash Raj Reacts Sharply to Religious Interpretation of RCB Win Under Smriti Mandhana Leadership

ವಿವಾದ ಸೃಷ್ಟಿಸಿದ ಪೋಸ್ಟ್‌: ಟ್ವಿಟರ್ ಬಳಕೆದಾರರೊಬ್ಬರು ಆರ್‌ಸಿಬಿ ಜಯಕ್ಕೆ ಧಾರ್ಮಿಕ ಅರ್ಥ ನೀಡಿರುವ ಪೋಸ್ಟ್‌ ಪ್ರಕಟಿಸಿದ್ದು ವಿವಾದಕ್ಕೆ ಕಾರಣವಾಯಿತು. ಆ ಪೋಸ್ಟ್‌ನಲ್ಲಿ "ಸ್ಮೃತಿ ಮಂಧನಾ ಅವರ ಗೆಲುವಿಗೆ ತಿರುಪತಿ ಬಾಲಾಜಿಯ ಆಶೀರ್ವಾದ ಕಾರಣ. ಜೆಮಿಮಾ ರೊಡ್ರಿಗಸ್‌ಗೆ ಯೇಸು ಸಹಾಯ ಮಾಡಲಿಲ್ಲ," ಎಂದು ಉಲ್ಲೇಖಿಸಲಾಗಿತ್ತು. ಈ ಪೋಸ್ಟ್‌ ಅನ್ನು ರಿಪೋಸ್ಟ್‌ ಮಾಡಿ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ರಾಜ್ ಆಕ್ರೋಶ: ಈ ಪೋಸ್ಟ್ ಅನ್ನು ರಿಪೋಸ್ಟ್ ಮಾಡಿದ ನಟ ಹಾಗೂ ನಿರ್ದೇಶಕ ಪ್ರಕಾಶ್ ರಾಜ್, ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರಕಾಶ್ ರಾಜ್ ತಮ್ಮ ಪ್ರತಿಕ್ರಿಯೆಯಲ್ಲಿ, ಇಂತಹ ಪೋಸ್ಟ್‌ಗಳನ್ನು ಮಾಡುವುದು ಅಸಹ್ಯಕರವಾಗಿದೆ ಎಂದು ಹೇಳಿ, "ಕೊಳೆತ ಮನಸ್ಸು ಮಾತ್ರ ಹೀಗೆ ಯೋಚಿಸಬಲ್ಲದು. ನಾವು ಈ ಮಟ್ಟಕ್ಕೆ ಇಳಿದಿದ್ದೇವೆಯೇ?," ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡನೇ ಬಾರಿ ಟ್ರೋಫಿಗೆ ಮುತ್ತಿಟ್ಟ ಆರ್‌ಸಿಬಿ: ವಡೋದರದ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನ ಮಾಡಿ ನಿಗದಿತ 20 ಓವರ್‌ಗಳಲ್ಲಿ 203 ರನ್‌ಗಳನ್ನು ಕಲೆಹಾಕಿತು. ಬಳಿಕ ಬ್ಯಾಟ್‌ ಬೀಸಿದ ಆರ್‌ಸಿಬಿ 19.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ ಎರಡನೇ ಬಾರಿ ಟ್ರೋಫಿಗೆ ಮುತ್ತಿಟ್ಟಿತು. ಟ್ರೋಫಿ ಗೆಲ್ಲುತ್ತಿದ್ದಂತೆ ಆರ್‌ಸಿಬಿ ತಂಡ ಹಾಗೂ ಸ್ಮೃತಿ ಮಂಧಾನಗೆ ಅಭಿನಂದನೆಗಳ ಸುರಿಮಳೆಯೇ ಹರಿದುಬರುತ್ತಿದೆ.

ಆರ್‌ಸಿಬಿ ಪರ ಆರಂಭಿಕರಾಗಿ ಬ್ಯಾಟಿಂಗ್‌ ಮಾಡಿದ ಸ್ಮೃತಿ ಮಂಧನಾ ಅವರು 41 ಎಸೆತಗಳಲ್ಲಿ 87 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದ್ದು, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮತ್ತೊಂದೆಡೆ, ಟೂರ್ನಿಯಲ್ಲಿ ನಿರಂತರ ಉತ್ತಮ ಪ್ರದರ್ಶನ ನೀಡಿದ ಗುಜರಾತ್ ಜೈಂಟ್ಸ್ ತಂಡದ ಸೋಫಿ ಡಿವೈನ್ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಈ ಸಲಾ ಕೂಡ ಕಪ್ ನಮ್ದು ಎಂದ ಮಂಧಾನ: ವಡೋದರದ ಕೋತಾಂಬಿ ಸ್ಟೇಡಿಯಂನಲ್ಲಿ ನಡೆದ ಡಬ್ಲ್ಯೂಪಿಎಲ್ ಫೈನಲ್‌ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಆದ ನಂತರ ಮಂಧನಾ ಟ್ರೋಫಿಯೊಂದಿಗೆ ತೆಗೆದ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ "ಈ ಸಲಾ ಕೂಡ ಕಪ್ ನಮ್ದು" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ನಟಿ ಅನುಷ್ಕಾ ಶರ್ಮಾ ಲೈಕ್ ನೀಡಿ, "ಕ್ವೀನ್" ಎಂಬ ಕಾಮೆಂಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನೂ ಆರ್‌ಸಿಬಿಯ ಭರ್ಜರಿ ಜಯದ ಸಂಭ್ರಮದ ನಡುವೆಯೇ ಉದ್ಭವಿಸಿದ ಈ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+