Bengaluru Bulls: ರೋಚಕ ಹಣಾಹಣಿಯಲ್ಲಿ ಯು ಮುಂಬಾ ವಿರುದ್ಧ ಗೆದ್ದ ಬೆಂಗಳೂರು ಗೂಳಿಗಳು

ಭಾನುವಾರ ದೆಹಲಿಯ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಯು ಮುಂಬಾ ವಿರುದ್ಧ 42-37 ಅಂಕಗಳ ಅಂತರದಿಂದ ಮಹತ್ವದ ಗೆಲುವು ಸಾಧಿಸಿತು. ಬೆಂಗಳೂರು ಬುಲ್ಸ್ ಪರ, ಸುಶೀಲ್ ಸೂಪರ್ 10 ಮತ್ತು ಅಕ್ಷಿತ್ 8 ಅಂಕಗಳನ್ನು ಪಡೆದರು, ಯು ಮುಂಬಾ ರೈಡರ್ ಜೈ ಭಗವಾನ್ ಅವರ 10 ಅಂಕಗಳ ಹೊರತಾಗಿಯೂ ಸೋಲೊಪ್ಪಿಕೊಂಡಿತು.

ಯು ಮುಂಬಾ ಭರ್ಜರಿಯಾಗಿಯೇ ಆಟ ಆರಂಭಿಸಿತು, ಆದರೆ ಬೆಂಗಳೂರು ಬುಲ್ಸ್ ಅವರಿಗೆ ಹೆಚ್ಚಿನ ಅವಕಾಶ ನೀಡಲಿಲ್ಲ. ಪಾರ್ಟೀಕ್ ಮತ್ತು ಆಲ್‌ರೌಂಡರ್ ರಾನ್ ಸಿಂಗ್ ಅವರ ಅತ್ಯುತ್ತಮ ಸೂಪರ್ ಟ್ಯಾಕಲ್‌ಗಳ ಮೂಲಕ ಬೆಂಗಳೂರು ಬುಲ್ಸ್ ಎರಡು ಬಾರಿ ಆಲ್-ಔಟ್ ಅವಕಾಶಗಳನ್ನು ತಡೆಯಿತು. ಆದರೆ ಯು ಮುಂಬಾದ ರೈಡರ್ ಜೈ ಭಗವಾನ್ ಬುಲ್ಸ್ ವಿರುದ್ಧ ಮೇಲುಗೈ ಸಾಧಿಸಿ ತಮ್ಮ ತಂಡದ ಮೊದಲ ಆಲ್-ಔಟ್ ಪಡೆದರು.

PKL 10

ಬೆಂಗಳೂರು ಬುಲ್ಸ್ ತಂಡವನ್ನು ದೂರವಿಡಲು ಯು ಮುಂಬಾ ಸಾಕಷ್ಟು ಶ್ರಮಿಸಬೇಕಾಯಿತು. ಅಕ್ಷಿತ್ ಅವರ ಸೂಪರ್ ರೈಡ್ ಬುಲ್ಸ್‌ಗೆ ಆತ್ಮವಿಶ್ವಾಸ ಕೊಟ್ಟಿತು. ಒಂದೇ ರೈಡ್‌ನಲ್ಲಿ 4 ಪಾಯಿಂಟ್ ಪಡೆಯುವ ಮೂಲಕ ಅಂಕಗಳ ಅಂತರ ಕಡಿಮೆ ಮಾಡಿದರು. ನಂತರ ಬೆಂಗಳೂರು ಬುಲ್ಸ್‌ ಯು ಮುಂಬಾವನ್ನು ಆಲ್-ಔಟ್ ಮಾಡಿದರು. ಯು ಮುಂಬಾ ರೈಡರ್‌ಗಳು ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಇದು ತಮ್ಮ ಎದುರಾಳಿಗಳಿಗೆ ರೈಡರ್ ಸುಶೀಲ್ ಮುನ್ನಡೆ ಸಾಧಿಸುವ ಅವಕಾಶವನ್ನು ನೀಡಿತು.

ಕೊನೆಯ 5 ನಿಮಿಷ ಇರುವಾಗ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದವು. ಆದರೆ ಪಂದ್ಯದ ಕೊನೆಯ ಹಂತದಲ್ಲಿ ಬೆಂಗಳೂರು ಬುಲ್ಸ್ ಪಾಯಿಂಟ್‌ಗಳ ಅಂತರವನ್ನು ಹೆಚ್ಚಿಸಿಕೊಂಡಿದ್ದಲ್ಲದೆ, ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಮಾಡು ಇಲ್ಲವೇ ಮಡಿ ಪಂದ್ಯ

ಬೆಂಗಳೂರು ಬುಲ್ಸ್ ಮುಂದಿನ ಹಂತಕ್ಕೆ ಪ್ರವೇಶ ಪಡೆಯಬೇಕಾದರೆ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಸೋಲಿಸಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಮುಂದಿನ ಪಂದ್ಯಲ್ಲಿ ಬೆಂಗಳೂರು ಬುಲ್ಸ್ ಪುಣೇರಿ ಪಲ್ತಾನ್ ತಂಡವನ್ನು ಎದುರಿಸಲಿದೆ. ಫೆಬ್ರವರಿ 7ರಂದು ಈ ಪಂದ್ಯ ನಡೆಯಲಿದೆ. ಇದುವರೆಗೂ ಆಡಿರುವ 18 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಬೆಂಗಳೂರು ಬುಲ್ಸ್ 9 ಪಂದ್ಯಗಳಲ್ಲಿ ಸೋತಿದ್ದು ಎರಡು ಪಂದ್ಯಗಳಲ್ಲಿ ಟೈ ಮಾಡಿಕೊಂಡಿದೆ. 48 ಅಂಕಗಳೊಂದಿದೆ ಅಂಕಪಟ್ಟಿಯಲ್ಲಿ ಸದ್ಯ 7ನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+