PBKS vs RR: ರಾಜಸ್ಥಾನ ರಾಯಲ್ಸ್‌ಗೆ ಪಂಜಾಬ್ ಸವಾಲು; ಫ್ಯಾಂಟಸಿ ತಂಡ, ಪಿಚ್ ವರದಿ
ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಐಪಿಎಲ್ 2024ರ ಆವೃತ್ತಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು, ಒಂದು ಪಂದ್ಯ ಮಾತ್ರ ಸೋತಿರುವ ರಾಜಸ್ಥಾನ ರಾಯಲ್ಸ್, ಐದರಲ್ಲಿ ಎರಡು ಪಂದ್ಯ ಗೆದ್ದಿರುವ ಪಂಜಾಬ್ ಅಂಕಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದೆ.
ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್‌ನಲ್ಲಿ ಈವರೆಗೂ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಪಂಜಾಬ್ ಕಿಂಗ್ಸ್ 11 ಪಂದ್ಯಗಳಲ್ಲಿ ಗೆದ್ದರೆ, ರಾಜಸ್ಥಾನ ರಾಯಲ್ಸ್ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2023ರ ಐಪಿಎಲ್‌ನಲ್ಲಿ ಎರಡೂ ತಂಡಗಳ ನಡುವಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನಾಲ್ಕು ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.

ಪಿಚ್ ವರದಿ
ಮುಲ್ಲಾನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂ ಪಿಚ್ ವೇಗಿಗಳಿಗೆ ಸಹಕಾರಿಯಾಗಿದೆ. ಬೌಂಡರಿ ದೊಡ್ಡದಿರುವ ಕಾರಣ ಬ್ಯಾಟರ್ ಗಳು ಎಚ್ಚರಿಕೆಯಿಂದ ಆಡಬೇಕಿದೆ. ಇಬ್ಬನಿ ಆಟದ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡುವುದು ಸಾಮಾನ್ಯವಾಗಿದೆ.
ಫ್ಯಾಂಟಸಿ ತಂಡ
ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜೋಸ್ ಬಟ್ಲರ್ (ಉಪನಾಯಕ), ಸ್ಯಾಮ್ ಕರ್ರಾನ್, ರಿಯಾನ್ ಪರಾಗ್, ರಾಹುಲ್ ಚಾಹರ್, ಯುಜ್ವೇಂದ್ರ ಚಾಹಲ್, ಶಿಮ್ರಾನ್ ಹೆಟ್ಮೆಯರ್, ಲಿಯಾಮ್ ಲಿವಿಂಗ್‌ಸ್ಟೋನ್, ಸಿಕಂದರ್ ರಜಾ ಮತ್ತು ಟ್ರೆಂಟ್ ಬೌಲ್ಟ್.
ಹವಾಮಾನ ವರದಿ
ಮುಲ್ಲಾನ್‌ಪುರದಲ್ಲಿ ತಾಪಮಾನ ಸುಮಾರು 24 ಡಿಗ್ರಿ ಇರುತ್ತದೆ. ಆರ್ದ್ರತೆಯು ಸುಮಾರು 42 ಪ್ರತಿಶತದಷ್ಟು ಇರುತ್ತದೆ. ಮಳೆಯ ಸಾಧ್ಯತೆ ಕೂಡ ಇದ್ದು, 25 ಪ್ರತಿಶತ ಮಳೆಯ ಮುನ್ಸೂಚನೆ ಇದೆ.
ಎರಡೂ ತಂಡಗಳ ಬಲಾಬಲ ನೋಡಿದಾಗ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ. ಪಂಜಾಬ್ ವಿರುದ್ಧ ಗೆದ್ದರೆ ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.












Click it and Unblock the Notifications