T20 World Cup: ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನ; ಭಾರತ, ಯುಎಸ್‌ಎ ಸೂಪರ್ 8 ಹಂತಕ್ಕೆ
ಕಳೆದ ಬಾರಿ ಟಿ20 ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಆಗಿದ್ದ ಪಾಕಿಸ್ತಾನ ಈ ಬಾರಿಯ ಪಂದ್ಯಾವಳಿಯಲ್ಲಿ ಲೀಗ ಹಂತದಲ್ಲೇ ಹೊರಬಿದ್ದಿದ್ದು, ಭಾರಿ ಮುಖಭಂಗ ಅನುಭವಿಸಿದೆ.
ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಸೋತ ಪಾಕಿಸ್ತಾನ, ಬಳಿಕ ಭಾರತದ ವಿರುದ್ಧವೂ ಸೋಲನುಭವಿಸಿತ್ತು. ಆದರೆ ಯುಎಸ್‌ಎ ತಂಡ ಪಾಕ್ ವಿರುದ್ಧ ಗೆದ್ದ ಬಳಿಕ ಕೆನಡಾ ವಿರುದ್ಧ ಗೆದ್ದು 4 ಅಂಕಗಳನ್ನು ಗಳಿಸಿತ್ತು.

ಪಾಕಿಸ್ತಾನ ಮೊದಲ ಎರಡು ಪಂದ್ಯಗಳಲ್ಲಿ ಸೋತ ಬಳಿಕ ಕೆನಡಾ ವಿರುದ್ಧ ಗೆದ್ದು 2 ಅಂಕ ಪಡೆದುಕೊಂಡಿತ್ತು. ಇಂದಿನ ಪಂದ್ಯದಲ್ಲಿ ಯುಎಸ್‌ಎ ಏನಾದರೂ ಕೆನಡಾ ವಿರುದ್ಧ ಸೋತಿದ್ದರೆ ಪಾಕಿಸ್ತಾನಕ್ಕೆ ಮುಂದಿನ ಪಂದ್ಯದಲ್ಲಿ ಗೆದ್ದು ರನ್‌ರೇಟ್ ಆಧಾರದಲ್ಲಿ ಸೂಪರ್ 8 ತಲುಪುವ ಅವಕಾಶ ಇರುತ್ತಿತ್ತು.
ಆದರೆ, ಶುಕ್ರವಾರ ನಡೆಯಬೇಕಿದ್ದ ಯುಎಸ್‌ಎ ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದು, ಎರಡೂ ತಂಡಗಳಿಗೂ ತಲಾ ಒಂದೊಂದು ಅಂಕ ಹಂಚಿಕೆ ಮಾಡಲಾಗಿದೆ. ಈ ಮೂಲಕ 5 ಅಂಕಗಳನ್ನು ಪಡೆದ ಯುಎಸ್‌ಎ ಎ ಗುಂಪಿನಲ್ಲಿ ಎರಡನೇ ತಂಡವಾಗಿ ಸೂಪರ್ 8 ಪ್ರವೇಶಿಸಿದೆ.
ಪಾಕಿಸ್ತಾನಕ್ಕೆ ಮುಖಭಂಗ
ಕಳೆದ ಬಾರಿ ಟಿ20 ವಿಶ್ವಕಪ್‌ನಲ್ಲಿ ಕೂಡ ಲೀಗ ಹಂತದಲ್ಲೇ ಹೊರ ಬೀಳುವ ಆತಂಕದಲ್ಲಿದ್ದ ಪಾಕಿಸ್ತಾನಕ್ಕೆ ಅದೃಷ್ಟ ಕೈಹಿಡಿದಿತ್ತು. ದಕ್ಷಿಣ ಆಫ್ರಿಕಾ ನೆದರ್ಲ್ಯಾಂಡ್ಸ್ ವಿರುದ್ಧ ಸೋತ ಬಳಿಕ ಸೆಮಿಫೈನಲ್ ತಲುಪಿದ್ದ ಪಾಕಿಸ್ತಾನ, ಬಳಿಕ ಫೈನಲ್ ಕೂಡ ತಲುಪಿತ್ತು. ಆದರೆ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಬಾರಿ ಕೂಡ ಅದೃಷ್ಟ ಕೈಹಿಡಿಯುತ್ತದೆ ಎಂದು ಕಾಯುತ್ತಿದ್ದ ಪಾಕಿಸ್ತಾನಕ್ಕೆ ಮಳೆ ಆಘಾತ ಕೊಟ್ಟಿದೆ.
ಯುಎಸ್‌ಎ ಸೂಪರ್ 8 ಹಂತಕ್ಕೆ
ಇನ್ನು ಆಡುತ್ತಿರುವ ಮೊದಲ ವಿಶ್ವಕಪ್‌ನಲ್ಲೇ ಟೆಸ್ಟ್ ಆಡದ ತಂಡವೊಂದು ಸೂಪರ್ 8 ಹಂತಕ್ಕೆ ಪ್ರವೇಶಿಸುವ ಮೂಲಕ ಯುಎಸ್‌ಎ ದಾಖಲೆ ಮಾಡಿದೆ. ಅಸೋಸಿಯೇಟ್ ರಾಷ್ಟ್ರದ ತಂಡವೊಂದು ಸೂಪರ್ 8 ಹಂತಕ್ಕೆ ಪ್ರವೇಶ ಮಾಡಿದ್ದು ಇದು 7ನೇ ಬಾರಿಯಾಗಿದೆ.
ನ್ಯೂಜಿಲೆಂಡ್, ಶ್ರೀಲಂಕಾ ಹೊರಕ್ಕೆ
ಸಿ ಗುಂಪಿನಲ್ಲಿ ಆಡುತ್ತಿರುವ ನ್ಯೂಜಿಲೆಂಡ್ ಕೂಡ ಲೀಗ್ ಹಂತದಲ್ಲೇ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ನ್ಯೂಜಿಲೆಂಡ್ ಆಡಿರುವ ಎರಡೂ ಪಂದ್ಯಗಳನ್ನು ಸೋತಿದೆ. ಇನ್ನೂ ಎರಡು ಪಂದ್ಯಗಳನ್ನು ಆಡಲಿದ್ದು, ಗೆದ್ದರೂ, ಸೋತರೂ ಅವರ ಟಿ20 ವಿಶ್ವಕಪ್ ಅಭಿಯಾನ ಮುಕ್ತಾಯವಾಗಿದೆ. ಸಿ ಗುಂಪಿಯನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿವೆ.












Click it and Unblock the Notifications