ಪಾಕ್ ವಿರುದ್ಧ ಕೇಳಿ ಬರುತ್ತಿರುವ ನಿರಂತರ ಟೀಕೆ: ಬದಲಾವಣೆಯ ಗಾಳಿ
ಪಾಕಿಸ್ತಾನ ಕ್ರಿಕೆಟ್ ತಂಡ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿದೆ. ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲೂ ಪಾಕ್ ಚೇತೋಹಾರಿ ಪ್ರದರ್ಶನ ನೀಡುವಲ್ಲಿ ಎಡವಿತ್ತು. ಈ ಬಾರಿ ಸಹ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರ ನಡೆದಿದೆ. ಈ ಬಗ್ಗೆ ಈಗ ಟೀಕೆಗಳು ಕೇಳಿ ಬರುತ್ತಿವೆ. ಅಲ್ಲದೆ ತಂಡದಲ್ಲಿ ಭಿನ್ನಾಭಿಪ್ರಾಯ ಇದ್ದ ಬಗ್ಗೆ ವರದಿ ಆಗಿದ್ದು, ತಂಡದಲ್ಲಿ ಬದಲಾವಣೆಗ ಗಾಳಿ ಕೇಳಿ ಬರುತ್ತಿದೆ.
ಪಾಕ್ ಟಿ20 ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನವನ್ನು ನೀಡಿತ್ತು. ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಸೋಲನ್ನು ಕಂಡಿತು. ಇದಾದ ಬಳಿಕ ಭಾರತ ವಿರುದ್ಧದ ಪಂದ್ಯದಲ್ಲೂ 6 ರನ್‌ಗಳಿಂದ ಸೋತಿತ್ತು. ಈ ನಾಚಿಕೆಗೇಡಿನ ಪ್ರದರ್ಶನದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗಾಗಲೇ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ ಹೇಳಿಕೆಯನ್ನು ನೀಡಿದ್ದರೆ, ಇದೀಗ ತಂಡದಲ್ಲಿ ಗುಂಪುಗಾರಿಕೆಯ ಸುದ್ದಿಯೂ ಹೊರಬಿದ್ದಿದೆ.

ಮೂರು ಆಟಗಾರರ ಗುಂಪು
2024 ರ ಟಿ 20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನದ ನಂತರ, ತಂಡದಲ್ಲಿ ಗುಂಪುಗಾರಿಕೆ ಇರುವುದಾಗಿ ತಿಳಿದು ಬಂದಿದೆ. ಪ್ರಸ್ತುತ ತಂಡದಲ್ಲಿ ಮೂರು ಬಣಗಳಿವೆ, ಅದರಲ್ಲಿ ಒಂದು ಬಣವು ನಾಯಕ ಬಾಬರ್ ಅಜಮ್, ಇನ್ನೊಂದು ಬಣ ಶಾಹೀನ್ ಅಫ್ರಿದಿ ಅವರದ್ದು. ಮತ್ತು ಮೂರನೇ ಬಣವು ಮೊಹಮ್ಮದ್ ರಿಜ್ವಾನ್ ನೇತೃತ್ವದ್ದಾಗಿದೆ.
ಅನುಭವದ ಕೊರತೆ
ಇದೆಲ್ಲದರ ನಡುವೆ ಮೊಹಮ್ಮದ್ ಅಮೀರ್, ಇಮಾದ್ ವಾಸಿಂ ಅವರಂತಹ ಹಿರಿಯ ಆಟಗಾರರು ಮರಳಿದ್ದರಿಂದ ತಂಡದ ಪ್ರದರ್ಶನ ಮತ್ತೆ ಹೀನಾಯವಾಯಿತು. ಈ ಹಿರಿಯ ಆಟಗಾರರು ದೇಶೀಯ ಟೂರ್ನಿಗಳಲ್ಲಿ ಆಡಿದ್ದು ಬಿಟ್ಟರೆ, ಬಹುದಿನಗಳಿಂದ ಅಂತಾರಾಷ್ಟ್ರೀಯ ಟೂರ್ನಿಗಳನ್ನು ಆಡಿದ ಅನುಭವ ಅವರಿಗಿಲ್ಲ. ಕೆಲವು ಆಟಗಾರರು ಪರಸ್ಪರ ಮಾತನಾಡದ ನಿದರ್ಶನಗಳೂ ಇವೆ ಮತ್ತು ಅವರಲ್ಲಿ ಕೆಲವರು ತಂಡದ ಮೂರು ಶಿಬಿರಗಳನ್ನು ಮುನ್ನಡೆಸುವ ಆಟಗಾರರನ್ನು ಮೆಚ್ಚಿಸಲು ಪ್ರಯತ್ನಿಸಿದರು ಎಂದು ತಿಳಿದು ಬಂದಿದೆ.

ಮೊದಲೇ ತಿಳಿದಿತ್ತಾ?
ಪ್ರಸ್ತುತ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪಾಕಿಸ್ತಾನಿ ತಂಡದಲ್ಲಿ ನಡೆಯುತ್ತಿರುವ ಗುಂಪುಗಾರಿಕೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಪಡೆದಿದ್ದರು. ಈ ಬಗ್ಗೆ ಪಿಸಿಬಿಯ ಹಿರಿಯ ಅಧಿಕಾರಿಯೊಬ್ಬರು, ನಖ್ವಿ ಎಲ್ಲಾ ಆಟಗಾರರೊಂದಿಗೆ ಖಾಸಗಿಯಾಗಿ ಮಾತನಾಡಿದ್ದಾರೆ ಮತ್ತು ವೈಯಕ್ತಿಕ ಹಿತಾಸಕ್ತಿಗಳಿಗೆ ಬದಲಾಗಿ ವಿಶ್ವಕಪ್ ಗೆಲ್ಲುವತ್ತ ಗಮನ ಹರಿಸುವಂತೆ ಹೇಳಿದ್ದರು.
ನಾನು ಬಾಬರ್‌ನನ್ನು ಸಮರ್ಥಿಸುತ್ತಿಲ್ಲ, ಆದರೆ ನಿಮ್ಮ ಪ್ರಮುಖ ಬೌಲರ್ ದುರ್ಬಲ USA ನಂತಹ ತಂಡದ ವಿರುದ್ಧ ಕೊನೆಯ ಓವರ್‌ನಲ್ಲಿ 15 ರನ್‌ಗಳಲ್ಲಿ ಶಿಸ್ತು ಬದ್ಧ ದಾಳಿಯನ್ನು ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಜಯ, ಎರಡು ಸೋಲು ಕಂಡಿದ್ದು, ಎರಡು ಅಂಕಗಳೊಂದಿಗೆ ಮೂರನೇ ಸ್ಥಾನದಲಿದೆ. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿದೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ಸೂಪರ್ 8 ಹಂತಕ್ಕೆ ಪ್ರವೇಶ ಪಡೆಯುತ್ತವೆ. ಪಾಕ್ ಈ ಅವಕಾಶವನ್ನು ತಪ್ಪಿಸಿಕೊಂಡಿದೆ.












Click it and Unblock the Notifications