Shubman Gill: ಡೆಂಗ್ಯೂನಿಂದ ಆಸ್ಪತ್ರೆ ಸೇರಿದ್ದ ಭಾರತದ ಕ್ರಿಕೇಟಿಗ 'ಶುಭ್ಮನ್ ಗಿಲ್' ಬಿಡುಗಡೆ
ಬೆಂಗಳೂರು, ಅಕ್ಟೋಬರ್ 10: ಡೆಂಗ್ಯೂ ಕಾಯಿಲೆಯಿಂದಾಗಿ ಬಳಲುತ್ತಿರುವ ಬಳಲುತ್ತಿರುವ ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ 'ಶುಭ್ಮನ್ ಗಿಲ್' ಅವರು ಸದ್ಯ ಚೆನ್ನೈ ಪ್ರಸಿದ್ಧ ಮಲ್ಟಿ-ಕೇರ್ ಸ್ಪೆಷಾಲಿಟಿ 'ಕಾವೇರಿ' ಆಸ್ಪತ್ರೆಯಿಂದ ಬಿಡುಗಡೆ (Discharge) ಆಗಿದ್ದಾರೆ. ಡೆಂಗ್ಯೂನಿಂದಾಗಿ ಅವರ ಪ್ಲೇಟ್‌ಲೆಟ್ ಸಂಖ್ಯೆ 100,000 ಕ್ಕಿಂತ ಕಡಿಮೆಯಾದ ಹಿನ್ನೆಲೆ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸದ್ಯ ಪೂರ್ಣ ಚೇತರಿಸಿಕೊಳ್ಳದ ಶುಭ್ಮನ್ ಗಿಲ್ ಅವರು ಮುಂದೆ ಅಹಮದಾಬಾದ್‌ನಲ್ಲಿ ಅಕ್ಟೋಬರ್ 14 ರಂದು ನಡೆಯಲಿರುವ ಇಂಡಿಯಾ-ಪಾಕಿಸ್ತಾನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಟದಿಂದ ಹೊರ ಗುಳಿಯುವ ಸಾಧ್ಯತೆಗಳು ಇವೆ.

ಕಳೆದ ವಾರ ಚೆನ್ನೈಗೆ ಆಗಮಿಸಿದ್ದ ಕ್ರಿಕೇಟಿಗ ಗಿಲ್ ಅವರಿಗೆ ಆರೋಗ್ಯ ತಪಾಸಣೆ ಮಾಡಲಾಗಿತ್ತ. ಈ ವೇಳೆ ಅವರಿಗೆ ಡೆಂಗ್ಯೂ ವರದಿಯಲ್ಲಿ ಪಾಸಿಟಿವ್ ಇರುವುದು ಗೊತ್ತಾಗಿದೆ. ಅವರ ದೇಹದಲ್ಲಿ ಪ್ಲೇಟ್ ಲೆಟ್ಸ್ ಸಂಖ್ಯೆ ತೀರಾ ಕಡಿಮೆ ಇರುವುದು ತಿಳಿದು ಬಂದಿದೆ. ಡೆಂಗ್ಯೂ ಧನಾತ್ಮಕ ಪರೀಕ್ಷೆಯಿಂದಾಗಿ ಗಿಲ್ ಕಳೆದ ವಾರದಿಂದ ಬಳಲುತ್ತಿದ್ದರು. ಈ ಕಾರಣದಿಂದಲೇ ಅವರು ನಾಳೆ ಬುಧವಾರ ಅಫ್ಘಾನಿಸ್ತಾನ ವಿರುದ್ಧದ ಭಾರತದ ಎರಡನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಗಿಲ್ ಪ್ಲೇಟ್‌ಲೆಟ್ ಸಂಖ್ಯೆ 70,000ಕ್ಕೆ ಇಳಿಕೆ
ಕಳೆದ ಎರಡು ದಿನಗಳಿಂದ ಶುಭ್ಮನ್ ಗಿಲ್ ಚೆನ್ನೈ ತಂಡದ ಹೋಟೆಲ್‌ನಲ್ಲಿ ತಂಗಿದ್ದರು. ಅವರ ಪ್ಲೇಟ್‌ಲೆಟ್ ಸಂಖ್ಯೆ 70,000ಕ್ಕೆ ಇಳಿಕೆ ಆಗಿದೆ. ಇದು ಡೆಂಗ್ಯೂ ರೋಗಿಗಳ ಪ್ರಕರಣವಾಗಿರುವುದರಿಂದ ಪ್ಲೇಟ್ ಲೆಟ್ಸ್ ಸಂಖ್ಯೆ 1,00,000 ಕ್ಕಿಂತ ಕಡಿಮೆ ಇದ್ದರೆ ಅವರ ಆರೋಗ್ಯ ಸುರಕ್ಷತೆಯಿಂದಾಗಿ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಬೇಕಾಗುತ್ತದೆ.
ಭಾನುವಾರ ರಾತ್ರಿ ಭಾರತ-ಆಸ್ಟ್ರೇಲಿಯ ಮಧ್ಯೆ ಪಂದ್ಯ ಸಂದರ್ಭದಲ್ಲಿ ಗೀಲ್ ಅವರಿಗೆ ಎಲ್ಲಾ ಆರೋಗ್ಯ ಪರೀಕ್ಷೆಗಳಿಗೆ ನಡೆಸಲಾಯಿತು. ಸೋಮವಾರ ಸಂಜೆಗೆ ಅವರನ್ನು ಚೆನ್ನೈ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.

ಬಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಾವಳಿಗೆ ಇನ್ನೂ 96 ಗಂಟೆ ಸಮಯ ಇದೆ. ಇಂತಹ ಸಮಯದಲ್ಲಿ ಆರಂಭಿಕ ಆಟಗಾರರಾದ ಗಿಲ್ ಅವರು ಶೇಕಡಾ 100 ರಷ್ಟು ಫಿಟ್ ಆಗಿ ಆರೋಗ್ಯಯುತವಾಗಿರುವುದು ಭಾರತದ ತಂಡಕ್ಕೆ ಮಹತ್ವದ್ದಾಗಿದೆ.
ಗಿಲ್ ಗುಣಮುಖರಾಗಲು ಹಾರೈಸಿದ ಟೀಂ ನಾಯಕ
ಆರೋಗ್ಯವಂತನ ದೇಹಕ್ಕೆ ಡೆಂಗ್ಯೂ ದಾಳಿ ಮಾಡಿದರೆ ದೇಹವು ಗಣನೀಯವಾಗಿ ದುರ್ಬಲಗೊಳ್ಳುತ್ತದೆ. ಅಥ್ಲೆಟ್‌ಗಳಿಗೆ ಸಹ ವಿಶ್ವಕಪ್‌ನಂತಹ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನಕ್ಕೆ ಈ ರೋಗ್ಯ ಸಾಕಷ್ಟು ಅಡ್ಡಿಪಡಿಸುತ್ತದೆ ಎನ್ನಲಾಗಿದೆ. ಇನ್ನು ಮುಂದೆ ಗಿಲ್ ಅವರು ಅನಾರೋಗ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕಿದೆ. ಆರೋಗ್ಯ ಕಡೆಗೆ ಹೆಚ್ಚು ಒತ್ತು ನೀಡಬೇಕಿದೆ.
ಸದ್ಯ ಶುಭ್ಮನ್ ಗಿಲ್ ಅವರು ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಮೊದಲು ಗುಣಮುಖರಾಗಬೇಕು. ನಾವು ಆಟಗಾರರು ಅದಕ್ಕಿಂತ ಮೊದಲು ಮನುಷ್ಯರು. ಗಿಲ್ ಅವರು ನಾಳಿನ ಪಂದ್ಯಗಳಲ್ಲಿ ಆಡಬೇಕು ಎಂಬ ಆಸೆ ಇದೆ. ಅದಕ್ಕಿಂತಲೂ ಅವರು ಗುಣಮುಖರಾಗಬೇಕು ಎಂದು ನಾನು ಬಯಸುತ್ತೇನೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೂ ಮೊದಲು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications