India vs New Zealand: ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಭಾರತಕ್ಕೆ ಬೇಕು 252 ರನ್
ದುಬೈನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 251 ರನ್ ಕಲೆಹಾಕಿದೆ. ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು 252 ರನ್ ಗಳಿಸಬೇಕಾಗಿದೆ. ಉತ್ತಮ ಆರಂಭ ಪಡೆದ ನ್ಯೂಜಿಲೆಂಡ್‌ಗೆ ಭಾರತದ ಸ್ಪಿನ್ನರ್ ಗಳು ಕಡಿವಾಣ ಹಾಕಿದರು.
ರಚಿನ್ ರವೀಂದ್ರ ನ್ಯೂಜಿಲೆಂಡ್‌ಗೆ ಸ್ಫೋಟಕ ಆರಂಭ ನೀಡಿದರು. ಆದರೆ ವರುಣ್ ಚಕ್ರವರ್ತಿ ವಿಲ್ ಯಂಗ್ ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್‌ಗೆ ಮೊದಲ ಆಘಾತ ನೀಡಿದರು. ಬಳಿಕ ಬಂದ ಕುಲದೀಪ್ ಯಾದವ್ 37 ರನ್ ಗಳಿಸಿ ಅಪಾಯಕಾರಿಯಾಗಿದ್ದ ರಚಿನ್ ರವೀಂದ್ರ ವಿಕೆಟ್ ಪಡೆದು ಭಾರತಕ್ಕೆ ದೊಡ್ಡ ರಿಲೀಫ್ ನೀಡಿದರು.

ಭಾರತದ ನಾಲ್ವರು ಸ್ಪಿನ್ನರ್ ಗಳು ನ್ಯೂಜಿಲೆಂಡ್‌ಗೆ ದೊಡ್ಡ ಸ್ಕೋರ್ ಕಲೆಹಾಕಲು ಅವಕಾಶವನ್ನೇ ನೀಡಲಿಲ್ಲ. ಒಬ್ಬರ ಬಳಿಕ ಒಬ್ಬರು ಸತತ ದಾಳಿ ಮಾಡುವ ಮೂಲಕ ನ್ಯೂಜಿಲೆಂಟ್ ಬ್ಯಾಟರ್ ಗಳನ್ನು ಕಟ್ಟಿಹಾಕಿದರು. ಕೇನ್ ವಿಲಿಯಮ್ಸನ್ 11 ರನ್ ಗಳಿಸಿ ಔಟಾದರೆ, ಟಾಮ್ ಲಾಥಮ್ 14 ರನ್ ಗಳಿಸಿ ಔಟಾದರು. ಡೇರಿಲ್ ಮಿಚೆಲ್ ತಾಳ್ಮೆಯಿಂದ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.
101 ಎಸೆತಗಳಲ್ಲಿ 63 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಗ್ಲೆನ್ ಫಿಲಿಪ್ಸ್ 34 ರನ್ ಗಳಿಸಿ ಔಟಾದರು. ಮಿಚೆಲ್ ಬ್ರೇಸ್‌ವೆಲ್ ಕೊನೆಯ ಓವರ್ ಗಳಲ್ಲಿ ವೇಗವಾಗಿ ರನ್ ಗಳಿಸಿದರು. 40 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 53 ರನ್ ಗಳಿಸಿದರು. ವರುಣ್ ಚಕ್ರವರ್ತಿ 10 ಓವರ್ ಗಳಲ್ಲಿ 45 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 10 ಓವರ್ ಗಳಲ್ಲಿ 40 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದುಕೊಂಡರು. ರವೀಂದ್ರ ಜಡೇಜಾ 10 ಓವರ್ ಗಳಲ್ಲಿ ಕೇವಲ 30 ರನ್ ನೀಡಿ 1 ವಿಕೆಟ್ ಪಡೆದರು. ಮೊಹಮ್ಮದ್ ಶಮಿ
ಪಿಚ್ ಸ್ಪಿನ್ನರ್ ಗಳಿಗೆ ಸಹಕಾರಿಯಾಗಿದ್ದು ಭಾರತ ಎಚ್ಚರಿಕೆಯಿಂದ ಈ ಮೊತ್ತವನ್ನು ಚೇಸ್ ಮಾಡಬೇಕಾಗಿದೆ. ನ್ಯೂಜಿಲೆಂಡ್ ತಂಡದಲ್ಲೂ ಉತ್ತಮ ಸ್ಪಿನ್ನರ್ ಬೌಲರ್ ಗಳಿದ್ದು ಭಾರತಕ್ಕೆ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಆದರೆ ಭಾರತದ ಅನುಭವಿ ಬ್ಯಾಟಿಂಗ್ ಪಡೆ ಈ ಸವಾಲವನ್ನು ದಿಟ್ಟವಾಗಿ ಎದುರಿಸಿ ನಿಂತರೆ ಮತ್ತೊಂದು ಐಸಿಸಿ ಟ್ರೋಫಿಯನ್ನು ಎತ್ತಿ ಹಿಡಿಯಬಹುದು.












Click it and Unblock the Notifications