ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

India vs Australia; ಅತಿಥಿ ಜೊತೆ ಟೆಸ್ಟ್‌ ವೀಕ್ಷಿಸಲಿದ್ದಾರೆ ಮೋದಿ!

ಪ್ರಧಾನಿ ನರೇಂದ್ರ ಮೋದಿ ವಿಶೇಷ ಅತಿಥಿ ಜೊತೆ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ವೀಕ್ಷಣೆ ಮಾಡುವ ನಿರೀಕ್ಷೆ ಇದೆ.

|
Google Oneindia Kannada News

ಅಹಮದಾಬಾದ್, ಫೆಬ್ರವರಿ 03; ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಫೆಬ್ರವರಿ 9ರಿಂದ ಆರಂಭವಾಗಲಿದೆ. ಮಾರ್ಚ್‌ನಲ್ಲಿ ನಡೆಯುವ ಅಂತಿಮ ಪಂದ್ಯವನ್ನು ಪ್ರಧಾನಿ ನರೇಂದ್ರ ಮೋದಿ ವಿಶೇಷ ಅತಿಥಿಯೊಂದಿಗೆ ವೀಕ್ಷಣೆ ಮಾಡುವ ನಿರೀಕ್ಷೆ ಇದೆ.

4ನೇ ಟೆಸ್ಟ್ ಪಂದ್ಯ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮಾರ್ಚ್ 9 ರಿಂದ 13ರ ತನಕ ಪಂದ್ಯ ನಡೆಯಲಿದ್ದು, ಅಂತಿಮ ದಿನದ ಪಂದ್ಯವನ್ನು ಪ್ರಧಾನಿ ಮೋದಿ ವೀಕ್ಷಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

Rishabh Pant: ಆಸ್ಪತ್ರೆಗೆ ಬರುವುದನ್ನು ನಿಲ್ಲಿಸಿ ಎಂದು ರಿಷಬ್ ಅಭಿಮಾನಿಗಳಿಗೆ ಕ್ರಿಕೆಟ್ ಸಂಸ್ಥೆ ಮನವಿRishabh Pant: ಆಸ್ಪತ್ರೆಗೆ ಬರುವುದನ್ನು ನಿಲ್ಲಿಸಿ ಎಂದು ರಿಷಬ್ ಅಭಿಮಾನಿಗಳಿಗೆ ಕ್ರಿಕೆಟ್ ಸಂಸ್ಥೆ ಮನವಿ

ಅಹಮದಾಬಾದ್‌ನ ಮೊಟೆರಾ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರು ನಾಮಕರಣ ಮಾಡಲಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಇದರದ್ದು, ಸ್ಟೇಡಿಯಂಗೆ ನಾಮಕರಣ ಮಾಡಿದ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸಲಿದ್ದಾರೆ.

ಗಂಧದಗುಡಿ: ಕುಂಬ್ಳೆ, ಶ್ರೀನಾಥ್‌ ಸೇರಿ ಕ್ರಿಕೆಟ್‌ ದಿಗ್ಗಜರಿಂದ ಶುಭ ಹಾರೈಕೆಗಂಧದಗುಡಿ: ಕುಂಬ್ಳೆ, ಶ್ರೀನಾಥ್‌ ಸೇರಿ ಕ್ರಿಕೆಟ್‌ ದಿಗ್ಗಜರಿಂದ ಶುಭ ಹಾರೈಕೆ

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಗೆದ್ದಿರುವ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಆಡಲಿದೆ. ನಾಲ್ಕು ಪಂದ್ಯಗಳು ಭಾರತದಲ್ಲಿಯೇ ನಡೆಯಲಿದ್ದು, ಭಾರತ ತಂಡ ಈಗಾಗಲೇ ಅಭ್ಯಾಸ ಆರಂಭಿಸಿದೆ.

ಕ್ರಿಕೆಟ್ ನೋಡುವುದಿಲ್ಲ, ಅವರು ಯಾರೆಂದು ಗೊತ್ತಾಗಲಿಲ್ಲ: ರಿಷಬ್ ಪಂತ್‌ರನ್ನು ರಕ್ಷಿಸಿದ ಬಸ್ ಚಾಲಕ ಹೇಳಿದ್ದೇನು? ಕ್ರಿಕೆಟ್ ನೋಡುವುದಿಲ್ಲ, ಅವರು ಯಾರೆಂದು ಗೊತ್ತಾಗಲಿಲ್ಲ: ರಿಷಬ್ ಪಂತ್‌ರನ್ನು ರಕ್ಷಿಸಿದ ಬಸ್ ಚಾಲಕ ಹೇಳಿದ್ದೇನು?

ಆಸ್ಟ್ರೇಲಿಯಾ ಪಿಎಂ ಜೊತೆ ಪಂದ್ಯ ವೀಕ್ಷಣೆ

ಆಸ್ಟ್ರೇಲಿಯಾ ಪಿಎಂ ಜೊತೆ ಪಂದ್ಯ ವೀಕ್ಷಣೆ

ಮಾರ್ಚ್ 9 ರಿಂದ 13ರ ತನಕ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 4ನೇ ಟೆಸ್ಟ್‌ ಪಂದ್ಯ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಈ ಸಮಯದಲ್ಲಿಯೇ ಆಸ್ಟ್ರೇಲಿಯಾ ಪ್ರಧಾನಿಗಳು ಸಹ ಭಾರತ ಪ್ರವಾಸದಲ್ಲಿರುತ್ತಾರೆ. ಆದ್ದರಿಂದ ಟೆಸ್ಟ್ ಪಂದ್ಯದ ಕೊನೆಯ ದಿನ ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರಧಾನಿಗಳ ಜೊತೆ ಟೆಸ್ಟ್ ಪಂದ್ಯ ವೀಕ್ಷಣೆ ಮಾಡುವ ಸಾಧ್ಯತೆ ಇದೆ.

ಎಲ್ಲೆಲ್ಲಿ ನಡೆಯಲಿದೆ ಟೆಸ್ಟ್ ಪಂದ್ಯ

ಎಲ್ಲೆಲ್ಲಿ ನಡೆಯಲಿದೆ ಟೆಸ್ಟ್ ಪಂದ್ಯ

ಭಾರತ-ಆಸ್ಟ್ರೇಲಿಯಾ ನಡುವೆ 4 ಟೆಸ್ಟ್ ಪಂದ್ಯ ನಿಗದಿಯಾಗಿದೆ. ಫೆಬ್ರವರಿ 9 ರಿಂದ 13ರ ತನಕ ಮೊದಲ ಪಂದ್ಯ ನಾಗ್ಪುದ ವಿದರ್ಭ ಸ್ಟೇಡಿಯಂನಲ್ಲಿ ಇದೆ. ಫೆಬ್ರವರಿ 17 ರಿಂದ 21ರ ತನಕ 2ನೇ ಟೆಸ್ಟ್ ದೆಹಲಿಯಲ್ಲಿ ನಡೆಯಲಿದೆ.

ಮಾರ್ಚ್ 1 ರಿಂದ 5ರ ತನಕ 3ನೇ ಟೆಸ್ಟ್ ಪಂದ್ಯ ಹಿಮಾಚಲ ಪ್ರದೇಶದ ಧರ್ಮಶಾಲಾ ಸ್ಟೇಡಿಯಂನಲ್ಲಿ ನಡೆಯಲಿದೆ. ಮಾರ್ಚ್ 9 ರಿಂದ 13ರ ತನಕ 4ನೇ ಟೆಸ್ಟ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಟೆಸ್ಟ್‌ಗೆ ಭಾರತ ತಂಡ ಹೀಗಿದೆ

ಟೆಸ್ಟ್‌ಗೆ ಭಾರತ ತಂಡ ಹೀಗಿದೆ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಘೋಷಣೆ ಮಾಡಲಾಗಿದೆ. ರೋಹಿತ್ ಶರ್ಮಾ ತಂಡಕ್ಕೆ ನಾಯಕರು. ಕೆ. ಎಲ್. ರಾಹುಲ್ ಉಪ ನಾಯಕ. ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆ. ಎಸ್. ಭರತ್, ಇಶಾನ್ ಕಿಶನ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ತಂಡದಲ್ಲಿದ್ದಾರೆ.

ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ

ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ

ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನ ಎಂದು ಖ್ಯಾತಿ ಪಡೆದಿದೆ. ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂದ್ ಈ ಕ್ರೀಡಾಂಗಣ ಉದ್ಘಾಟನೆ ಮಾಡಿದ್ದರು. ಸ್ಟೇಡಿಯಂ ಉದ್ಘಾಟನೆ ಬಳಿಕ ಭಾರತ-ಇಂಗ್ಲೆಡ್ ನಡುವಿನ ಹಗಲು-ರಾತ್ರಿ ಟೆಸ್ಟ್ ಪಂದ್ಯ ಇಲ್ಲಿ ಮೊದಲು ನಡೆದಿತ್ತು. ಸುಮಾರು 750 ಕೋಟಿ ರೂ. ವೆಚ್ಚದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಆಯೋಜನೆ ಮಾಡುವ ಈ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ.

English summary
Indian prime minister Narendra Modi may watch 4th test between India v/s Australia in the month of March along with Australia PM. 4th test scheduled from March 9 to 14th at Narendra Modi stadium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X