RCB: ಮುಂಬೈ ತಂಡವನ್ನು ಚಾಂಪಿಯನ್ ಮಾಡಿದ ಓಂಕಾರ್ ಸಾಳ್ವಿ ಈಗ ಆರ್‌ಸಿಬಿ ಬೌಲಿಂಗ್ ಕೋಚ್

ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಶೇಷವಾಗಿ ಸಜ್ಜಾಗುತ್ತಿದೆ. ಐಪಿಎಲ್ ಮೆಗಾ ಹರಾಜಿಗೆ ಮುನ್ನ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್‌ ದಯಾಳ್‌ರನ್ನು ಮಾತ್ರ ಉಳಿಸಿಕೊಂಡಿದ್ದು ಉಳಿದ ಆಟಗಾರರನ್ನು ಬಿಡುಗಡೆ ಮಾಡಿದೆ. ಬಲಿಷ್ಠ ತಂಡವನ್ನು ಕಟ್ಟುವ ಯೋಜನೆಯಲ್ಲಿರುವ ಆರ್‌ಸಿಬಿ ತಂಡದಲ್ಲಿ ಮಾತ್ರವಲ್ಲಿ ಕೋಚಿಂಗ್ ಸಿಬ್ಬಂದಿಯನ್ನು ಕೂಡ ಬದಲಾವಣೆ ಮಾಡುತ್ತಿದೆ. ಇದೀಗ ಓಂಕಾರ್ ಸಾಳ್ವಿ ಅವರನ್ನು 2025 ರ ಐಪಿಎಲ್ ಸೀಸನ್‌ಗೆ ವೇಗದ ಬೌಲಿಂಗ್ ಕೋಚ್ ಆಗಿ ನೇಮಿಸಿದೆ ಎಂದು ವರದಿಯಾಗಿದೆ.

ಓಂಕಾರ್ ಸಾಳ್ವಿ ಮುಂಬೈನ ಹಿರಿಯ ಪುರುಷರ ತಂಡದ ಕೋಚ್ ಆಗಿದ್ದಾರೆ. ಕಳೆದ ಬಾರಿ ಮುಂಬೈ ತಂಡ ಚಾಂಪಿಯನ್ ಆಗಲು ಕೋಚ್ ಓಂಕಾರ್ ಸಾಳ್ವಿ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಸಹಾಯಕ ಕೋಚ್ ಆಗಿ ಕೆಲಸ ಮಾಡಿರುವ ಅನುಭವ ಕೂಡ ಅವರಿಗೆ ಇದೆ.

mumbai omkar salvi appointed rcb bowling coach ipl mega auction 2025

ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಜೊತೆ ಒಪ್ಪಂದ ಮಾಡಿಕೊಂಡಿರುವ ಕಾರಣ ಸಾಳ್ವಿ ಈವರೆಗೂ ಯಾವುದೇ ಫ್ರಾಂಚೈಸಿ ಕ್ರಿಕೆಟ್‌ಗೆ ಕೋಚ್ ಆಗಿ ಕೆಲಸ ಮಾಡಿಲ್ಲ. ಮಾರ್ಚ್ 2025ಕ್ಕೆ ಮುಂಬೈ ಜೊತೆಗಿನ ಅವರ ಒಪ್ಪಂದ ಕೊನೆಯಾಗುತ್ತಿದ್ದ ಬಳಿಕ ಆರ್ ಸಿಬಿ ಪಾಳಯ ಸೇರಿಕೊಳ್ಳಲಿದ್ದಾರೆ.

ಅಧಿಕೃತ ಘೋಷಣೆಯಷ್ಟೇ ಬಾಕಿ

ಐಪಿಎಲ್ 2025ರ ಆವೃತ್ತಿಗಾಗಿ ಆರ್ ಸಿಬಿಗೆ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ ಎಂದು ವರದಿಯಾಗಿದೆ. ಓಂಕಾರ್ ಸಾಳ್ವಿ ಭಾರತ ಮಾಜಿ ವೇಗದ ಬೌಲರ್ ಆವಿಷ್ಕರ್ ಸಾಳ್ವಿ ಅವರ ಸಹೋದರ, ಕಳೆದ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದ ಮುಂಬೈ ತಂಡಕ್ಕೆ ಬೌಲಿಂಗ್ ಕೋಚ್ ಆಗಿದ್ದರು. ಸಾಳ್ವಿ 2005 ರಲ್ಲಿ ಮಧ್ಯಪ್ರದೇಶ ವಿರುದ್ಧ ರೈಲ್ವೇಸ್‌ಗಾಗಿ ಕೇವಲ ಒಂದು ಲಿಸ್ಟ್ ಎ ಪಂದ್ಯದಲ್ಲಿ ಆಡಿದ್ದರು.

ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಕೋಚ್‌

ಮಾಜಿ ಆರ್ ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಮುಂದಿನ ವರ್ಷ ಐಪಿಎಲ್‌ನಲ್ಲಿ ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡಲಿದ್ದಾರೆ. ಕೋಚ್ ಮತ್ತು ಮೆಂಟರ್ ಆಗಿ ಅವರನ್ನು ಆರ್ ಸಿಬಿ ನೇಮಕ ಮಾಡಿತ್ತು. ದಿನೇಶ್ ಕಾರ್ತಿಕ್ ಮತ್ತು ಸಾಳ್ವಿ ಈ ಹಿಂದೆ ಕೆಕೆಆರ್ ತಂಡಕ್ಕಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಹೊಂದಾಣಿಕೆ ಇರಲಿದ್ದು, ತಂಡದ ಪ್ರದರ್ಶನದ ಸುಧಾರಿಸಲು ಸಹಕಾರಿಯಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+