ಎರಡು ಹೊಸ ಎಂಐ ಟಿ20 ಫ್ರಾಂಚೈಸಿ ಘೋಷಿಸಿದ ರಿಲಯನ್ಸ್
ಮುಂಬೈ, ಆಗಸ್ಟ್ 10: ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಮಾಲೀಕತ್ವ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಎರಡು ಹೊಸ ಫ್ರಾಂಚೈಸಿಗಳ ಹೆಸರುಗಳು ಮತ್ತು ಬ್ರ್ಯಾಂಡ್ ಅನಾವರಣ ಮಾಡಿದೆ. ಯುಎಇ ಇಂಟರ್‌ನ್ಯಾಷನಲ್ ಲೀಗ್ ಟಿ20 ಯಲ್ಲಿ ಎಂಐ ಎಮಿರೇಟ್ಸ್ ಮತ್ತು ಕ್ರಿಕೆಟ್ ಸೌಥ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಎಂಐ ಕೇಪ್ ಟೌನ್ ಹೆಸರುಗಳನ್ನು ಅನಾವರಣಗೊಳಿಸಲಾಗಿದೆ.
ಈ ಹೊಸ ತಂಡಗಳು ಕೂಡಾ ಎಂಐನಂತೆ ನೀಲಿ ಮತ್ತು ಸ್ವರ್ಣ ಬಣ್ಣವನ್ನು ಹೊಂದಿರಲಿವೆ. ಈ ಹೆಸರುಗಳು ಅವು ಪ್ರತಿನಿಧಿಸುವ ಸ್ಥಳಗಳನ್ನೂ ಹೊಂದಿವೆ. ಎಂಐ ಎಮಿರೇಟ್ಸ್ ಅನ್ನು ಮೈ ಎಮಿರೇಟ್ಸ್ (MY Emirates)ಎಂದೂ ಎಂಐ ಕೇಪ್ ಟೌನ್ ಅನ್ನು ಮೈ ಕೇಪ್ ಟೌನ್(MY Cape Town) ಎಂದು ಕರೆಯಲಾಗುತ್ತದೆ.
ಈ ಬಗ್ಗೆ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕಿ ನೀತಾ ಎಂ ಅಂಬಾನಿ ''ಒನ್ ಫ್ಯಾಮಿಲಿಯ ಹೊಸ ಸೇರ್ಪಡೆಗಳಾದ ಮೈ ಎಮಿರೇಟ್ಸ್ ಮತ್ತು ಮೈ ಕೇಪ್‌ಟೌನ್ ಅನ್ನು ಸ್ವಾಗತಿಸಲು ನನಗೆ ಹೆಮ್ಮೆಯಾಗುತ್ತಿದೆ. ನಮಗೆ ಎಂಐ ಎಂಬುದು ಬರಿ ಕ್ರಿಕೆಟ್ ಅಲ್ಲ. ಇದು ಕನಸು ಕಾಣಲು, ನಿರ್ಭೀತವಾಗಿರಲು ಮತ್ತು ಧನಾತ್ಮಕ ವರ್ತನೆಯನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಮೈ ಎಮಿರೇಟ್ಸ್ ಮತ್ತು ಮೈ ಕೇಪ್ ಟೌನ್ ಕೂಡ ಇದೇ ಧ್ಯೇಯವನ್ನು ಹೊಂದಿರುತ್ತವೆ ಎಂದು ನನಗೆ ಖಚಿತವಿದೆ'' ಎಂದು ಹೇಳಿದರು.

ಎಂಐ ಎಮಿರೇಟ್ಸ್ ಮತ್ತು ಎಂಐ ಕೇಪ್‌ಟೌನ್‌ನ ಹೆಸರನ್ನು ಅನಾವರಣಗೊಳಿಸುವುದರ ಜೊತೆಗೆ ಫಿಲಂ ಅನ್ನೂ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಕ್ರಿಕೆಟ್ ಫ್ರಾಂಚೈಸಿಗಳನ್ನು ಖರೀದಿ ಮಾಡುವುದು, ಫುಟ್‌ಬಾಲ್ ಲೀಗ್ ನಡೆಸುವುದು, ಕ್ರೀಡೆಯ ಪ್ರಾಯೋಜಕತ್ವ, ಕನ್ಸಲ್ಟನ್ಸಿ ಹಾಗೂ ಅಥ್ಲೀಟ್ ಪ್ರತಿಭಾ ನಿರ್ವಹಣೆ ಮತ್ತು ಉದ್ಯಮದ ಉತ್ತಮ ಅಭ್ಯಾಸಗಳನ್ನು ಅಳವಡಿಸುವುದೂ ಸೇರಿದಂತೆ ಕ್ರೀಡಾ ವಲಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಹತ್ವದ ಪಾತ್ರ ವಹಿಸುತ್ತದೆ.
ದೇಶದ ವಿವಿಧೆಡೆಯ ಅಥ್ಲೀಟ್‌ಗಳು ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್ ಆಗಲಿ ಇದು ಅವಕಾಶ ಒದಗಿಸುತ್ತಿದೆ ಮತ್ತು ಜಾಗತಿಕ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸಲು ಪ್ರಯತ್ನಿಸುತ್ತಿವೆ. ಈ ವರ್ಷದ ಆರಂಭದಲ್ಲಿ, 40 ವರ್ಷಗಳ ನಂತರದಲ್ಲಿ 2023 ರಲ್ಲಿ ಮುಂಬೈನಲ್ಲಿ ಇಂಟರ್‌ನ್ಯಾಷನಲ್ ಒಲಿಂಪಿಕ್ ಕಮಿಟಿ ಸೆಷನ್ ಅನ್ನು ನಡೆಸಲು ಯಶಸ್ವಿಯಾಗಿ ಪ್ರಯತ್ನ ನಡೆಸಿದೆ.
ಕ್ರಿಕೆಟ್ ಸೌತ್ ಆಫ್ರಿಕಾ ಆರು ತಂಡಗಳನ್ನು ಒಳಗೊಂಡ ಟಿ20 ಆಯೋಜನೆ ಮಾಡುವುದಾಗಿ ಘೋಷಿಸಿದೆ. ಮೊದಲ ಟೂರ್ನಮೆಂಟ್ 2023 ಜನವರಿಯಲ್ಲಿ ನಡೆಯಲಿದೆ. ಟೂರ್ನಮೆಂಟ್‌ನಲ್ಲಿ ಆರು ತಂಡಗಳು ಇರಲಿವೆ. ರೌಂಡ್ ರಾಬಿನ್ ಹಂತದಲ್ಲಿ ಪರಸ್ಪರ ಎರಡು ಬಾರಿ ಆಟ ಆಡಲಿವೆ. ನಂತರ ಅಗ್ರ ಮೂರು ತಂಡಗಳು ಪ್ಲೇಆಫ್‌ಗೆ ಹೋಗಲಿವೆ. ಮೂರರಿಂದ ನಾಲ್ಕು ವಾರಗಳಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ.

ವಿಶ್ವಾದ್ಯಂತ 29 ಘಟಕಗಳಿಂದ ಬಿಡ್‌ಗಳನ್ನು ಆಕರ್ಷಿಸಿದ ಮುಕ್ತ ಪ್ರಕ್ರಿಯೆ ನಡೆದಿದೆ ಎಂದು CSA ಹೇಳಿದೆ. ಮುಂಬೈ ಇಂಡಿಯನ್ಸ್‌ನ ಮಾಲೀಕರಾದ ರಿಲಯನ್ಸ್ ಇಂಡಸ್ಟ್ರೀಸ್ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಮೂಲದ ತಂಡವನ್ನು ಹೊಂದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ತಂಡದ ಹಕ್ಕುಗಳನ್ನು ಗೆದ್ದಿದೆ.
ಡೆಲ್ಲಿ ಕ್ಯಾಪಿಟಲ್ಸ್‌ನ ಮಾಲೀಕರು ಸೆಂಚುರಿಯನ್‌ನಲ್ಲಿ ತಂಡವನ್ನು ಹೊಂದಿದ್ದು, ಡರ್ಬನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ Gqeberha (ಹಿಂದಿನ ಪೋರ್ಟ್ ಎಲಿಜಬೆತ್) ಮತ್ತು ರಾಜಸ್ಥಾನ್ ರಾಯಲ್ಸ್ ಪಾರ್ಲ್‌ನಲ್ಲಿ ತಂಡವನ್ನು ಹೊಂದಿರುತ್ತಾರೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
-
IPL 2026 Full Schedule: ಐಪಿಎಲ್ 2026ರ ಸಂಪೂರ್ಣ ವೇಳಾಪಟ್ಟಿ ಪ್ರಕಟ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ












Click it and Unblock the Notifications