ಮುಂಬೈ ಇಂಡಿಯನ್ಸ್‌ಗೆ ಬೇಡವಾದ ನಾಯಕ ರೋಹಿತ್, ಟೀಮ್ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ
ಟೀಮ್ ಇಂಡಿಯಾ ಈಗ ಟಿ20 ವಿಶ್ವ ಚಾಂಪಿಯನ್.. ಈ ತಂಡ ಸತತ ಫೈನಲ್‌ನಲ್ಲಿ ನಿರಾಸೆ ಕಂಡು ಕೊನೆಗೆ ಫಲ ಕಂಡಿದೆ. ಟಿ20 ವಿಶ್ವಕಪ್ (T20 world cup) ಭರ್ಜರಿ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಟ್ರೋಫಿ ಎತ್ತಿ ಸಂಭ್ರಮಿಸಿದೆ. ಈ ವೇಳೆ ಎಲ್ಲರು ರೋಹಿತ್ ಶರ್ಮಾ (Roshit Sharma) ಅವರ ಕ್ಯಾಪ್ಟನ್ ಶಿಪ್ ಬಗ್ಗೆ ಮಾತನಾಡುತ್ತಿದ್ದಾರೆ.
ಗುರುವಾರ ವಿಶ್ವ ವಿಜೇತ ಭಾರತ ತಂಡ ತವರಿಗೆ ಆಗಮಿಸಿದೆ. ಈದೇ ವೇಳೆ ಟೀಮ್ ಇಂಡಿಯಾ ಆಟಗಾರರು ದೇಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಮುಂಬೈಗೆ ಬಂದರು. ಮುಂಬೈನಲ್ಲಿ ಚಾಂಪಿಯನ್ ತಂಡಕ್ಕೆ ಭರ್ಜರಿ ಸ್ವಾಗತ್ ನೀಡಲಾಯಿತು. ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು. ಎಲ್ಲಿ ನೋಡಿದರೂ ಜನ ಸಾಗರವೇ ಹರಿದು ಬಂದಿತ್ತು. ಅಭಿಮಾನಿಗಳು ಘೋಷಣೆಗಳ ನಡುವೆ ರೋಡ್ ಶೋ ಆರಂಭವಾಯಿತು.

ಜನ ಸಾಗರ
ಅಭಿಮಾನಿಗಳು ರೋಡ್ ಶೋನಲ್ಲಿ ಮುಂಬೈ ಕಾ ರಾಜಾ ರೋಹಿತ್ ಶರ್ಮಾ ಎಂದು ಘೋಷಣೆಗಳನ್ನು ಕೂಗಿದರು. ಅಬ್ಬ ಒಂದು ಕಡೆ ಸಮುದ್ರದ ಸೌಂದರ್ಯ.. ಇದನ್ನು ನಾಚಿಸುವಂತೆ ಅಭಿಮಾನಿಗಳ ದಂಡು ಮರೀನ್ ಡ್ರೈವ್‌ಗೆ ಬಂದಿತ್ತು. ಟೀಮ್ ಇಂಡಿಯಾ ವಿಶ್ವ ಚಾಪಿಯನ್ ಪಟ್ಟಕ್ಕೇರಿಸುವಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವ ಅಮೋಘ..
ಹೌದು.. ರೋಹಿತ್ ಶರ್ಮಾ ಒಬ್ಬ ಬೆಸ್ಟ್ ಕ್ಯಾಪ್ಟನ್ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ಮುಂಬೈ ಇಂಡಿಯನ್ಸ್ (Mumbai Indians) ಭವಿಷ್ಯದ ಬಗ್ಗೆ ಯೋಚಿಸಿತು. ಆಗ ಗುಜರಾತ್ ಟೈಟನ್ಸ್ ತಂಡದಿಂದ ಟ್ರೇಡ್ ಮಾಡಿದ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ತಂಡದ ನಾಯಕರನ್ನಾಗಿ ಮಾಡಿತು. ಕಳೆದ ಬಾರಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿ ಲೀಗ್ ಹಂತದಲ್ಲೇ ಟೂರ್ನಿಗೆ ಗುಡ್ ಬೈ ಹೇಳಿತು.

ಹಾರ್ದಿಕ್ ನಾಯಕ
ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕರನ್ನಾಗಿ ಮಾಡಿತು. ಇದೇ ತಂಡಕ್ಕೆ ಐದು ಬಾರಿ ಐಪಿಎಲ್ ಟ್ರೋಫಿ ತೊಡಿಸಿದ ನಾಯಕ ರೋಹಿತ್ ಶರ್ಮಾ ಅವರನ್ನು ಕಡೆಗಣನೆ ಮಾಡಲಾಯಿತು. ಹೀಗಾಗಿ ರೋಹಿತ್ ಶರ್ಮಾ ಹಾಗೂ ಅವರ ಅಭಿಮಾನಿಗಳಲ್ಲಿ ಒಂದು ಬೇಸರ ಇತ್ತು. ಇದೇ ಛಲ ರೋಹಿತ್ ಶರ್ಮಾ ಅವರಿಗೆ ಬಹುವಾಗಿ ಕಾಡಿತ್ತು.
ಫೈನಲ್ ನಿರಾಸೆ
ಅಲ್ಲದೆ ಪದೆ ಪದೇ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ್ದ ರೋಹಿತ್ ಶರ್ಮಾಗೆ ತನ್ನನ್ನು ತಾನು ಸಾಬೀತು ಪಡಿಸಿಕೊಳ್ಳಲು ಒಂದು ವೇದಿಕೆ ಬೇಕಿತ್ತು. ಇದಕ್ಕೆಲ್ಲದಕ್ಕೂ ರೋಹಿತ್ ಮೈಂಡ್‌ಲ್ಲೇ ಕ್ಯಾಲ್‌ಕ್ಯೂಷನ್ ಮಾಡಿಕೊಂಡಿದ್ದರು. ಐಪಿಎಲ್ ಮುಗಿದ ಬಳಿಕ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಇವರೇ ತಂಡವನ್ನು ಮುನ್ನಡೆಸುವುದು ಎಂಬುದು ಅದಾಗಲೇ ಘೋಷಿಸಿ ಆಗಿತ್ತು. ಇದನ್ನು ಅಸ್ತ್ರವನ್ನಾಗಿಸಿಕೊಂಡ ರೋಹಿತ್ ಭರ್ಜರಿ ಬ್ಲ್ಯೂ ಪ್ಲ್ಯಾನ್ ಸಿದ್ಧ ಪಡಿಸಿಕೊಂಡರು.

ಕೈ ಹಿಡಿದ ಪ್ಲ್ಯಾನ್ ಬಿ
ಪ್ಲಾನ್ ಎ ಅಹಮದಾಬಾದ್‌ನಲ್ಲಿ ಕೈ ಹಿಡಿಯದಿದ್ದಾಗ ಪ್ಲ್ಯಾನ್ ಬಿ ಬಾರ್ಬಡೋಸ್ ರಣ ತಂತ್ರ ಫಿಕ್ಸ್ ಆಗಿತ್ತು. ತಂಡವನ್ನು ಹೇಗೆ ಮುನ್ನಡೆಸಬೇಕು. ಯಾರಿಗೆಲ್ಲಾ ತಂಡದಲ್ಲಿ ಸ್ಥಾನ ನೀಡಬೇಕು ಎಂಬ ಸ್ಪಷ್ಟ ಚಿತ್ರಣ ಅವರಿಗಿತ್ತು. ಹೀಗಾಗಿಯೇ ರೋಹಿತ್ ಟಿ20 ವಿಶ್ವಕಪ್‌ನಲ್ಲಿ ಹಂತ ಹಂತವಾಗಿ ಭರ್ಜರಿ ಪ್ರದರ್ಶನ ನೀಡುತ್ತಾ ಬಂದರು. ಅಲ್ಲದೆ ತಂಡದ ಆಟಗಾರರಿಗೆ ಪ್ರೋತ್ಸಾಹ ನೀಡಿದರು. ಇದರ ಫಲವಾಗಿ ಟೀಮ್ ಇಂಡಿಯಾ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿತು.
ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ, ಪ್ರಶಸ್ತಿ ಸುತ್ತು ಪ್ರವೇಶಿಸಿದ್ದ ರೋಹಿತ್ ಪಡೆ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟಕೇರಿಸಿದರು. ಅಂದು ಮುಂಬೈ ಇಂಡಿಯನ್ಸ್‌ಗೆ ಬೇಡವಾಗಿದ್ದ ರೋಹಿತ್ ಶರ್ಮಾ ಕ್ಯಾಪ್ಟನ್ಸಿ, ಟೀಮ್ ಇಂಡಿಯಾಕ್ಕೆ ವರದಾನವಾಯಿತು.












Click it and Unblock the Notifications