Get Updates
Get notified of breaking news, exclusive insights, and must-see stories!

MS Dhoni: ಐಪಿಎಲ್‌ನಿಂದಲೇ ಹೊರಬಿದ್ದ ರುತುರಾಜ್; ನಾಯಕನಾಗಿ ವಾಪಸ್ ಆದ ಎಂಎಸ್ ಧೋನಿ

ಐಪಿಎಲ್ 2025ರ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 1 ಪಂದ್ಯ ಗೆದ್ದು ನಾಲ್ಕು ಪಂದ್ಯಗಳಲ್ಲಿ ಸೋತಿರುವ ಸಿಎಸ್‌ಕೆ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ರುತುರಾಜ್ ನಾಯಕತ್ವದ ಬಗ್ಗೆ, ತಂಡದ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಅಸಮಧಾನಗೊಂಡಿದ್ದರು. ಗೆಲುವಿಗೆ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ದಿಢೀರ್ ಎಂದು ತಂಡದ ನಾಯಕತ್ವ ಬದಲಾವಣೆ ಮಾಡಲಾಗಿದೆ.

ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಮೊಣಕೈ ಗಾಯದಿಂದ ಐಪಿಎಲ್ 2025ರ ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದಾರೆ. ಐದು ಬಾರಿ ಚಾಂಪಿಯನ್‌ನತ್ತ ಮುನ್ನಡೆಸಿದ್ದ ನಾಯಕ ಎಂಎಸ್ ಧೋನಿ ಮತ್ತೆ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ, ಏಪ್ರಿಲ್ 11ರಂದು ನಡೆಯಲಿರುವ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಿಂದ ಧೋನಿ ನಾಯಕರಾಗಿ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

Ms dhoni returns csk captain ipl 2025

ಮ್ಯಾಜಿಕ್ ಮಾಡ್ತಾರಾ ಧೋನಿ?

ಎಂಎಸ್ ಧೋನಿ ಸಿಎಸ್‌ಕೆ ನಾಯಕತ್ವ ತ್ಯಜಿಸಿ ಮತ್ತೆ ನಾಯಕತ್ವ ವಹಿಸಿಕೊಂಡಿರುವುದು ಇದೇ ಮೊದಲಲ್ಲ. 2022ರಲ್ಲಿ ಅವರು ನಾಯಕತ್ವ ತ್ಯಜಿಸಲು ನಿರ್ಧರಿಸಿದ್ದರು. ರವೀಂದ್ರ ಜಡೇಜಾರನ್ನು ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಜಡೇಜಾ ನಾಯಕರಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ವಿಫಲವಾದ ಬಳಿಕ ಪಂದ್ಯಾವಳಿಯ ಮಧ್ಯದಲ್ಲೇ ಅವರು ನಾಯಕತ್ವವನ್ನು ತ್ಯಜಿಸಿದ್ದರಿಂದ ಮತ್ತೊಮ್ಮೆ ಧೋನಿ ನಾಯಕತ್ವ ವಹಿಸಿಕೊಂಡರು.

2022ರ ಐಪಿಎಲ್‌ನಲ್ಲಿ ಸಿಎಸ್‌ಕೆ ಪ್ಲೇಆಫ್ ತಲುಪುವಲ್ಲಿ ವಿಫಲವಾಯಿತು. ಜಡೇಜಾ ನಾಯಕತ್ವ ತ್ಯಜಿಸುವ ಸಂದರ್ಭದಲ್ಲಿ ಸಿಎಸ್‌ಕೆ ಅಂಕಟಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದರು, ಕೆಲವೇ ಪಂದ್ಯ ಉಳಿದಿದ್ದ ಕಾರಣ ಎಂಎಸ್ ಧೋನಿ ಏನೂ ಮಾಡಲು ಆಗಲಿಲ್ಲ.

ಆದರೆ 2023ರಲ್ಲಿ ಮೊದಲ ಪಂದ್ಯದಿಂದಲೇ ನಾಯಕರಾಗಿ ಮರಳಿದ ಬಳಿಕ ಸಿಎಸ್‌ಕೆ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದರು. ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಕೊನೆಯ ಓವರ್ ನಲ್ಲಿ ಅಮೋಘ ಬ್ಯಾಟಿಂಗ್ ಮಾಡುವ ಮೂಲಕ ಸಿಎಸ್‌ಕೆ ತಂಡಕ್ಕೆ ಐದನೇ ಬಾರಿ ಪ್ರಶಸ್ತಿ ಗೆಲ್ಲುವಂತೆ ಮಾಡಿದರು.

2024 ರಲ್ಲಿ ಅವರು ಮತ್ತೊಮ್ಮೆ ನಾಯಕತ್ವ ತ್ಯಜಿಸಿದರು. ಧೋನಿ ತಮ್ಮ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್‌ನತ್ತ ಗಮನ ಹರಿಸಲು ನಿರ್ಧರಿಸಿದರು. ರುತುರಾಜ್ ಗಾಯಕ್ವಾಡ್ ಅವರಿಗೆ ತಂಡದ ನಾಯಕತ್ವ ವಹಿಸಲಾಯಿತು. ರುತುರಾಜ್ ನಾಯಕತ್ವದಲ್ಲಿ 2024ರ ಆವೃತ್ತಿಯಲ್ಲಿ ಸಿಎಸ್‌ಕೆ ಪ್ಲೇಆಫ್ ತಲುಪುವಲ್ಲಿ ವಿಫಲವಾಯಿತು. 2025ರಲ್ಲೂ ಸಿಎಸ್‌ಕೆ ತಂಡದ ಕಳಪೆ ಪ್ರದರ್ಶನ ಮುಂದುವರೆದಿದ್ದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದೀಗ ಮೊಣಕೈ ಗಾಯದಿಂದ ರುತುರಾಜ್ ಗಾಯಕ್ವಾಡ್ ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ ಎಂಎಸ್ ಧೋನಿ ಮತ್ತೆ ಸಿಎಸ್‌ಕೆ ತಂಡದ ನಾಯಕರಾಗಿ ಮರಳಿದ್ದಾರೆ. ಸಿಎಸ್‌ಕೆ ಇದೀಗ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ, ಇನ್ನಾದರೂ ತಂಡ ಗೆಲುವಿನ ಹಾದಿಗೆ ಮರಳುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+