Get Updates
Get notified of breaking news, exclusive insights, and must-see stories!

ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಶ್ರೀಲಂಕಾ ಕ್ರಿಕೆಟ್ ತಂಡ!

ಕ್ರಿಕೆಟ್ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡೆ, ಫುಟ್‌ಬಾಲ್ ಬಿಟ್ಟರೆ ಕ್ರಿಕೆಟ್ ಆಟದಲ್ಲೇ ಹೆಚ್ಚು ದುಡ್ಡು ಇದೆ ಅನ್ನೋದು ಜಗತ್ತಿಗೇ ಗೊತ್ತು. ಆದರೆ ಈ ದುಡ್ಡಿನ ಜೊತೆ ಕ್ರಿಕೆಟ್ ಆಟದಲ್ಲಿ ಕ್ರೇಜ್ ಇದೆ, ಖುಷಿ ಇದೆ, ದಾಖಲೆಗಳ ದೊಡ್ಡ ಇತಿಹಾಸವೇ ಇದೆ. ಹೀಗಿದ್ದಾಗಲೇ, ನಿನ್ನೆ ಶ್ರೀಲಂಕಾ ಕ್ರಿಕೆಟ್ ತಂಡ ಭಾರತದ ಎದುರು ಹೀನಾಯವಾಗಿ ಸೋತು ಹಲವು ಇತಿಹಾಸ ಸೃಷ್ಟಿ ಮಾಡಿ ಹೋಗಿದೆ ಗೊತ್ತಾ?

ಕ್ರಿಕೆಟ್ ಭಾಷೆಯಲ್ಲಿ 'ಡಕ್ ಔಟ್' ಎಂಬ ಪದವು, ಸೊನ್ನೆಯನ್ನು ಸೂಚಿಸುತ್ತದೆ. ಅಂದ್ರೆ ಯಾವುದೇ ಒಬ್ಬ ಆಟಗಾರ ಒಂದು ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ರನ್ ಕೂಡ ಬಾರಿಸದೆ ಸೊನ್ನೆಗೆ ಔಟ್ ಆಗಿದ್ರೆ ಅದನ್ನ ಡಕ್ ಔಟ್ ಅಂತಾ ಕರೆಯುತ್ತಾರೆ. ಹೀಗೆ ಸಾಮಾನ್ಯವಾಗಿ ಒಂದು ಪಂದ್ಯದಲ್ಲಿ ಒಬ್ಬರು ಅಥವಾ ಇಬ್ಬರು, ಅಬ್ಬಬ್ಬಾ ಅಂದ್ರೆ ಮೂವರು ಡಕ್ ಔಟ್ ಆಗುವುದು ಮಾಮೂಲು ಬಿಡಿ. ಆದರೆ ಈ ವಿಚಾರದಲ್ಲೂ ನಿನ್ನೆ ಶ್ರೀಲಂಕಾ ಕ್ರಿಕೆಟ್ ತಂಡ ವಿಶ್ವದಾಖಲೆ ಮಾಡಿದೆ!

Most Duck In The History Of ODI Cricket Format And Sri Lanka Joins At This Place

ಶ್ರೀಲಂಕಾಗೆ ಟೈಂ ಸರಿ ಇರಲಿಲ್ವಾ?

ಹೌದು, ಅದ್ಯಾವ ಘಳಿಗೆಯಲ್ಲಿ ಶ್ರೀಲಂಕಾ ಆಟಗಾರರು ನಿನ್ನೆ ಮುಂಬೈನ ಕ್ರಿಕೆಟ್ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದರೋ ಗೊತ್ತಿಲ್ಲ. ಬರ್ತಿದ್ದಂತೆ ಸೋಲಿನ ಮುನ್ಸೂಚನೆ ಸಿಕ್ಕಿತ್ತು. ಮೊದಲ ವಿಕೆಟ್ ರೋಹಿತ್ ಶರ್ಮಾ ಬಹುಬೇಗ ಔಟಾಗಿದ್ದು ಬಿಟ್ಟರೆ ಭಾರತದ ವಿರುದ್ಧದ ಮ್ಯಾಚ್ ವೇಳೆ ಶ್ರೀಲಂಕಾ ತಂಡಕ್ಕೆ ಯಾವುದೇ ಖುಷಿ ಸಿಗಲಿಲ್ಲ. ಅದ್ರಲ್ಲೂ ಶ್ರೀಲಂಕಾ ತಂಡದವರು ಆಡಿದ ಬ್ಯಾಟಿಂಗ್, ಇಡೀ ಕ್ರಿಕೆಟ್ ಇತಿಹಾಸದಲ್ಲೇ ಮತ್ತೊಂದು ಕಳಪೆ ಪ್ರದರ್ಶನ ಆಗಿತ್ತು. ಶ್ರೀಲಂಕಾ ತಂಡದ ಅರ್ಧಕರ್ಧ ದಾಂಡಿಗರು ಒಂದೂ ರನ್ ಗಳಿಸಿದೆ ಸೊನ್ನೆಯನ್ನು ಸುತ್ತಿ ಡಕ್ ಔಟ್ ಆದರು. ಈ ಮೂಲಕ ಶ್ರೀಲಂಕಾ, 'ಡಕ್ ಔಟ್' ವಿಚಾರದಲ್ಲಿ ಕೂಡ ಹೊಸ ಇತಿಹಾಸ ನಿರ್ಮಿಸಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 'ಡಕ್ ಔಟ್' ದಾಖಲೆ!

ದೇಶ ಡಕ್ ಔಟ್ ಸಂಖ್ಯೆ ಎದುರಾಳಿ ತಂಡ ಒಟ್ಟು ರನ್ ವರ್ಷ

24) ಶ್ರೀಲಂಕಾ 5 ಭಾರತ 55 2023

01) ಪಾಕಿಸ್ತಾನ 6 ಇಂಗ್ಲೆಂಡ್ 213 1987

02) ಪಾಕಿಸ್ತಾನ 6 ವೆಸ್ಟ್ ಇಂಡೀಸ್ 43 1993

03) ದ.ಆಫ್ರಿಕಾ 6 ಆಸ್ಟ್ರೇಲಿಯಾ 106 2002

04) ಜಿಂಬಾಬ್ವೆ 6 ಶ್ರೀಲಂಕಾ 127 2008

05) ಪಾಕಿಸ್ತಾನ 6 ಶ್ರೀಲಂಕಾ 199 2012

06) ಇಂಗ್ಲೆಂಡ್ 5 ವೆಸ್ಟ್ ಇಂಡೀಸ್ 194 1979

07) ಇಂಗ್ಲೆಂಡ್ 5 ಜಿಂಬಾಬ್ವೆ 118 1997

08) ವೆಸ್ಟ್ ಇಂಡೀಸ್ 5 ಪಾಕಿಸ್ತಾನ 103 1997

09) ದ.ಆಫ್ರಿಕಾ 5 ಪಾಕಿಸ್ತಾನ 101 2000

10) ವೆಸ್ಟ್ ಇಂಡೀಸ್ 5 ಜಿಂಬಾಬ್ವೆ 91 2001

Most Duck In The History Of ODI Cricket Format And Sri Lanka Joins At This Place

ಒಟ್ನಲ್ಲಿ ಹೀಗೆ, ಅತಿಹೆಚ್ಚು ಆಟಗಾರರು ಒಂದೇ ಪಂದ್ಯದಲ್ಲಿ ಡಕ್ ಔಟ್ ಆಗರುವ ಪಟ್ಟಿ ನೋಡಿದರೆ ಟಾಪ್-10ನಲ್ಲಿ ಪಾಕಿಸ್ತಾನದ ಹೆಸರು ರಾರಾಜಿಸುತ್ತಿದೆ. ಇದೀಗ ಲಂಕಾ ಕೂಡ ಅದೇ ರೀತಿಯ ದಾಖಲೆ ಮಾಡಿದ್ದು, ಶ್ರೀಲಂಕಾದ ಬರೋಬ್ಬರಿ ಐವರು ನಿನ್ನೆ ಡಕ್ ಔಟ್ ಆಗಿ ಗೂಡು ಸೇರಿದ್ದರು. ಶ್ರೀಲಂಕಾ ತಂಡದ ಸ್ಕೋರ್ ಬೋರ್ಡ್ ಲ್ಯಾಂಡ್‌ಲೈನ್ ನಂಬರ್ ರೀತಿ ಇತ್ತು ಅಂತಾ ನಿನ್ನೆ ಕ್ರಿಕೆಟ್ ಅಭಿಮಾನಿಗಳು ಜೋಕ್ ಮಾಡುತ್ತಿದ್ದರು.

ಭಾರತದ ಎದುರು ಶರಣಾದ ಲಂಕಾ!

ನಿನ್ನೆ ಭಾರತ ನೀಡಿದ್ದ ಬೃಹತ್ ಗುರಿಯನ್ನು ಬೆನ್ನುಹತ್ತಲು ಬಂದ ಶ್ರೀಲಂಕಾ ಟೀಂ ದಾಂಡಿಗರು ಒಬ್ಬರ ನಂತರ ಒಬ್ಬರು ಪೆವಿಲಿಯನ್ ಸೇರಿದರು. ಹೀಗಾಗಿ ಲಂಕಾ ತಂಡ ಹೀನಾಯ ಸೋಲು ಕಂಡಿತು. ಹಾಗೇ, ಲಂಕಾ ಬ್ಯಾಟ್ಸ್‌ಮನ್‌ಗಳು ಗಳಿಸಿದ ಸ್ಕೋರ್ ಕೂಡ ವಿಚಿತ್ರ ಎನಿಸುತ್ತಿತ್ತು. ಒಪನರ್ ಆಗಿದ್ದ ಪಾತುಮ್ ನಿಸಾಂಕ & ದಿಮುತ್ ಕರುಣರತ್ನೆ ಸೊನ್ನೆ ಸುತ್ತಿ 'ಡಕ್ ಔಟ್' ಬಿರುದು ಪಡೆದು ಹೋದರು. ನಂತರ ಬಂದ ಆಟಗಾರರು ಈ ಆಟಗಾರರನ್ನೇ ಫಾಲೋ ಮಾಡಿ ಗೂಡು ಸೇರಿದರು.

ಇಲ್ಲಿದೆ ನೋಡಿ ಶ್ರೀಲಂಕಾ ಸ್ಕೋರ್ ಬೋರ್ಡ್!

ನಿನ್ನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡದ ಮೊದಲ ಬ್ಯಾಟ್ಸ್‌ಮನ್‌ನಿಂದ ಹಿಡಿದು ಕೊನೇ ತನಕ ಸ್ಕೋರ್ ನೋಡುವುದಾದರೆ, 0, 0, 1, 0, 1, 12, 0, 0, 12, 14, 5 ಆಗಿತ್ತು. ಹೀಗೆ, ಭಾರತ ನೀಡಿದ್ದ 358 ರನ್ ಬೃಹತ್ ಗುರಿ ಬೆನ್ನುಹತ್ತಿದ ಲಂಕಾ ತಂಡ, ಕೇವಲ 55 ರನ್ ಗಳಿಸಿ ಆಲೌಟ್ ಆಗಿ ವಿಶ್ವಕಪ್ ಅಖಾಡದಿಂದ ಮನೆ ಕಡೆಗೆ ಹೆಜ್ಜೆ ಹಾಕಿದೆ. ಹಾಗೇ, ಭಾರತ ತಂಡ 302 ರನ್‌ಗಳ ಬೃಹತ್ ಅಂತರದ ಗೆಲುವು ದಾಖಲಿಸಿ ಸೆಮೀಸ್ ಅಖಾಡದಲ್ಲಿ ತನ್ನ ಸ್ಥಾನ ಗ್ಯಾರಂಟಿ ಮಾಡಿಕೊಂಡಿದೆ. ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಭಾರತ ತಂಡ ಈಗ ಹೊರಹೊಮ್ಮುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+