Mohammed Shami: ಅತ್ಯಾಚಾರ, ಫಿಕ್ಸಿಂಗ್ ಆರೋಪ: ಆತ್ಮಹತ್ಯೆಯ ಯೋಚನೆ ಮಾಡಿದ್ದ ಶಮಿ ಇಂದು ಚಾಂಪಿಯನ್ ಬೌಲರ್!

ಮೊಹಮ್ಮದ್ ಶಮಿ, ಸದ್ಯ ಭಾರತೀಯರ ಪಾಲಿನ ಹೀರೋ, ವಾಂಖೆಡೆ ಅಂಗಳದಲ್ಲಿ ಭಾರತ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 70 ರನ್‌ಗಳ ಗೆಲುವು ಸಾಧಿಸುವಲ್ಲಿ ಶಮಿ ಪಾತ್ರ ಮುಖ್ಯವಾಗಿತ್ತು. ಒಂದು ಹಂತದಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸುವಾಗ ಶಮಿ ಒಂದೇ ಓವರ್ ನಲ್ಲಿ 2 ವಿಕೆಟ್ ಪಡೆದು ಪಂದ್ಯವನ್ನು ತಿರುಗಿಸಿದರು.

ವಿರಾಟ್ ಕೊಹ್ಲಿ 50ನೇ ಶತಕ ಸಿಡಿಸಿ ಸಚಿನ್ ಅವರ ದಾಖಲೆಯನ್ನು ಮುರಿದರು, ಆದರೆ ಶಮಿಯ ಬೆಂಕಿಯ ಬಲಿಂಗ್ ಮುಂದೆ ಕೊಹ್ಲಿಯವರ ಸಾಧನೆ ಕೂಡ ಮಂಕಾಯಿತು. ಶಮಿಯವರ ಈ ಸಾಧನೆ ಹಿಂದೆ, ಅಪಾರ ಶ್ರಮವಿದೆ. ಈ ವಿಶ್ವಕಪ್‌ನ ಆರಂಭದಲ್ಲಿ ಅವರಿಗೆ ತಂಡದಲ್ಲೇ ಅವಕಾಶವೇ ಇರಲಿಲ್ಲ, ಆದರೆ ಈಗ ಶಮಿ ಭಾರತದ ಪಾಲಿನ ಹೀರೋ.

mohammed-shami-overcomes-allegations-and-suicidal-thoughts

ಬೀದಿಗೆ ಬಂದ ವೈಯಕ್ತಿಕ ಜೀವನ, ಅತ್ಯಾಚಾರ ಆರೋಪ, ಮ್ಯಾಚ್ ಫಿಕ್ಸಿಂಗ್ ಆರೋಪ, ಭಾರತ ತಂಡದಲ್ಲಿ ಸಿಗದ ಅವಕಾಶ ಶಮಿ ಇಂದಿನ ಸಾಧನೆ ಹಿಂದೆ ಅಪಾರ ನೋವಿದೆ, ಏಳು ಬೀಳಿನ ಪ್ರಯಾಣವಿದೆ, ಎಲ್ಲವನ್ನೂ ಮೆಟ್ಟಿ ನಿಂತು ಇಂದು ಭಾರತವನ್ನು 12 ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ಗೆ ಕರೆದೊಯ್ದಿದ್ದಾರೆ ಶಮಿ.

ಶಮಿಯ ಕ್ರಿಕೆಟ್ ಜೀವನ

ಉತ್ತರ ಪ್ರದೇಶದವರಾದ ಮೊಹಮ್ಮದ್ ಶಮಿ 2010 ರಲ್ಲಿ ರಣಜಿ ಟ್ರೋಫಿಯಲ್ಲಿ ಪಶ್ಚಿಮ ಬಂಗಾಳದೊಂದಿಗೆ ತಮ್ಮ ಕ್ರಿಕೆಟ್ ಪ್ರಯಾಣವನ್ನು ಆರಂಭಿಸಿದರು. ನಂತರ 2011ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ತಂಡವನ್ನು ಸೇರಿಕೊಂಡರು.

2012 ರಲ್ಲಿ, ಶಮಿ ತನ್ನ ಪತ್ನಿ ಹಸಿನ್ ಜಹಾನ್ ಅವರನ್ನು ಭೇಟಿಯಾದರು, ಹಸಿನ್ ಜಹಾನ್ ಕೆಕೆಆರ್ ತಂಡದ ಚಿಯರ್ ಲೀಡರ್ ಆಗಿ ಕೆಲಸ ಆಡುತ್ತಿದ್ದರು, ಜಹಾನ್ ಜೊತೆ ಶಮಿ ಪ್ರೀತಿಯಲ್ಲಿ ಬಿದ್ದರು. ಎರಡು ವರ್ಷಗಳ ನಂತರ, 2014 ರಲ್ಲಿ, ಶಮಿ-ಜಹಾನ್ ವಿವಾಹವಾದರು ಮತ್ತು 2015 ರಲ್ಲಿ ಐರಾ ಶಮಿ ಎಂಬ ಹೆಣ್ಣು ಮಗು ಜನಿಸಿತು.

ಜೀವನ ಸರಿಯಾಗಿದೆ ಎಂದುಕೊಳ್ಳುವಾಗಲೇ ಹಸಿನ್ ಜಹಾನ್ ಮಾರ್ಚ್ 2018 ರಲ್ಲಿ ಸರಣಿ ಸ್ಕ್ರೀನ್‌ಶಾಟ್‌ಗಳೊಂದಿಗೆ ಶಮಿ ತಮಗೆ ಮೋಸ ಮಾಡಿದ್ದಾರೆ, ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ಅತ್ಯಾಚಾರ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಮಾಡಿದರು.

ಪತ್ನಿಯ ಆರೋಪಕ್ಕೆ ವಿರುದ್ಧವಾಗಿ ಶಮಿ ಕೋರ್ಟ್ ಮೆಟ್ಟಿಲೇರಿದರು, ಈ ಹಂತದಲ್ಲಿ ಶಮಿಯನ್ನು ಅಪರಾಧಿಯಂತೆ ನೋಡಲಾಯಿತು. ತನ್ನ ಪತ್ನಿ ಅವರ ಮೊದಲ ಮದುವೆ ಮತ್ತು ಇಬ್ಬರು ಮಕ್ಕಳ ಇರುವ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ಶಮಿ ಪತ್ನಿ ವಿರುದ್ಧ ಆರೋಪ ಮಾಡಿದ್ದರು.

ಆತ್ಮಹತ್ಯೆ ಯೋಚನೆ ಮಾಡಿದ್ದ ಶಮಿ

ಈ ಎಲ್ಲಾ ಆರೋಪಗಳು ಶಮಿ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಿತು, ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದರಿಂದ, ಭಾರತದ ವೇಗಿ 2020 ರಲ್ಲಿ ಅನೇಕ ಸಂದರ್ಭಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದರು ಎಂದು ಹೇಳಿದ್ದಾರೆ, ಈ ಬಗ್ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ ಲಾಕ್‌ಡೌನ್ ಸಮಯದಲ್ಲಿ ಅಪಘಾತದಲ್ಲಿ ಗಾಯಗೊಂಡರು, ಅದೃಷ್ಟವಶಾತ್ ಬಚಾವಾಗಿದ್ದರು.

ಫೀನಿಕ್ಸ್‌ನಂತೆ ಎದ್ದು ಬಂದ ಶಮಿ

2019ರ ಏಕದಿನ ವಿಶ್ವಕಪ್‌ನಲ್ಲಿ ಶಮಿ 14 ವಿಕೆಟ್ ಪಡೆದಿದ್ದರು, ಅಫ್ಘಾನಿಸ್ತಾನ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಭಾರತ ರೋಚಕ ಗೆಲುವು ಸಾಧಿಸಲು ಕಾರಣವಾಗಿದ್ದರು. ನಂತರ ಅವರು 2022ರ ಏಷ್ಯಾಕಪ್‌ನಲ್ಲಿ ಭಾರತ ತಂಡದಲ್ಲಿ ಅವಕಾಶ ಪಡೆಯಲಿಲ್ಲ, ನಂತರ ನಡೆದ ಟಿ20 ವಿಶ್ವಕಪ್‌ನಲ್ಲಿ ಶಮಿ ಭಾರತ ತಂಡಕ್ಕೆ ಆಯ್ಕೆಯಾದರು.

2023ರ ವಿಶ್ವಕಪ್‌ನಲ್ಲಿ ಶಮಿ ಆಯ್ಕೆಯಾದರು ಕೂಡ ಅವರಿಗೆ ಮೊದಲು ತಂಡದಲ್ಲಿ ಅವಕಾಶವೇ ಇರಲಿಲ್ಲ, ಮೊದಲ ನಾಲ್ಕು ಪಂದ್ಯಗಳು ಅವರು ಬೆಂಚ್ ಕಾದರು, ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ನಂತರ, ಶಮಿ ಧರ್ಮಶಾಲಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು, ಆ ಪಂದ್ಯದಲ್ಲೇ 5 ವಿಕೆಟ್ ಪಡೆದು, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

ಅದಾದ ನಂತರ ಶಮಿ ಹಿಂತಿರುಗಿ ನೋಡಲೇ ಇಲ್ಲ, ಭಾರತ ಸಂಕಷ್ಟದಲ್ಲಿದ್ದಾಗಲೆಲ್ಲ, ರೋಹಿತ್ ಶರ್ಮಾ ಮೊದಲು ನೋಡುವುದು ಶಮಿ ಕಡೆಗೆ, ಅದಕ್ಕೆ ತಕ್ಕಂತೆ ಶಮಿ ಕೂಡ ವಿಕೆಟ್ ತೆಗೆಯುತ್ತಿದ್ದಾರೆ. ಈ ಬಾರಿ ವಿಶ್ವಕಪ್‌ನಲ್ಲಿ ಮೂರು ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ, 6 ಪಂದ್ಯಗಳಲ್ಲಿ ಮೂರು ಬಾರಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದು ಮಿಂಚಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಆಟಗಾರ ಎನ್ನುವ ಸಾಧನೆ ಕೂಡ ಈಗ ಶಮಿ ಹೆಸರಿನಲ್ಲಿದೆ.

ಏಕದಿನ ವಿಶ್ವಕಪ್‌ ಫೈನಲ್‌ ಅಹಮದಾಬಾದ್‌ನಲ್ಲಿ ನಡೆಯಲಿದೆ, ಈ ಪಂದ್ಯದಲ್ಲಿ ಶಮಿ ಪಾತ್ರ ಮುಖ್ಯವಾಗುತ್ತದೆ. ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ಆಡುವ ಶಮಿಗೆ ಅಲ್ಲಿನ ಪಿಚ್‌ ಬಗ್ಗೆ ಗೊತ್ತಿದೆ, ಇದು ಭಾರತಕ್ಕೆ ವರದಾನವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+