ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಕಿಂಗ್ಸ್ ನಾಯಕ ಸ್ಥಾನದಿಂದ ಕೆಳಗಿಳಿಯಲಿರುವ ಕನ್ನಡಿಗ ಮಯಾಂಕ್: ಯಾರು ಹೊಸ ನಾಯಕ?

|
Google Oneindia Kannada News

2023ರ ಐಪಿಎಲ್‌ಗಾಗಿ ಪಂಜಾಬ್‌ ಕಿಂಗ್ಸ್‌ ಈಗಿನಿಂದಲೇ ತಯಾರಿ ಆರಂಭಿಸಿದ್ದು, ಮುಂದಿನ ಋತುವಿನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕಪ್‌ ಗೆಲ್ಲಲು ತಯಾರಿ ನಡೆಸುತ್ತಿರುವ ಪಂಜಾಬ್ ತಂಡದ ನಾಯಕನನ್ನು ಬದಲಾವಣೆ ಮಾಡಲು ನಿರ್ಧರಿಸಿದೆ.

ಪಂಜಾಬ್ ಕಿಂಗ್ಸ್‌ನ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಕೂಡ ಬದಲಾಗುವ ಸಾಧ್ಯತೆ ಇದೆ ಎನ್ನುವ ವರದಿಗಳ ಬೆನ್ನಲ್ಲೇ, ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಕನ್ನಡಿಗ ಮಯಾಂಕ್ ಅಗರ್ವಾಲ್‌ರನ್ನು ನಾಯಕ ಸ್ಥಾನದಿಂದ ಕೆಳಗಿಸಲು ಪಂಜಾಬ್ ಕಿಂಗ್ಸ್ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ನೂತನ ಮುಖ್ಯ ಕೋಚ್ ಆಗಿ ಚಂದ್ರಕಾಂತ್ ಪಂಡಿತ್ ನೇಮಕಕೋಲ್ಕತ್ತಾ ನೈಟ್ ರೈಡರ್ಸ್ ನೂತನ ಮುಖ್ಯ ಕೋಚ್ ಆಗಿ ಚಂದ್ರಕಾಂತ್ ಪಂಡಿತ್ ನೇಮಕ

ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಜಾನಿ ಬೈರ್ ಸ್ಟೋವ್ ಪಂಜಾಬ್ ಕಿಂಗ್ಸ್‌ನ ನೂತನ ನಾಯಕರಾಗಬಹುದು ಎಂದು ಹೇಳಲಾಗುತ್ತಿದೆ.

"ಇಲ್ಲ ಮಯಾಂಕ್ ಮುನ್ನಡೆಸುವ ಯೋಜನೆಯಲ್ಲಿಲ್ಲ. ಅವರು ಬ್ಯಾಟಿಂಗ್‌ನತ್ತ ಗಮನ ಹರಿಸಬೇಕು. ಮಯಾಂಕ್ ನಮಗೆ ನಿರ್ಣಾಯಕ ಆಟಗಾರರಾಗುತ್ತಾರೆ. ಅನಿಲ್ ಕುಂಬ್ಳೆ ಬಗ್ಗೆ, ನಾವು ಕೆಲವು ಆಯ್ಕೆಗಳನ್ನು ಚರ್ಚಿಸುತ್ತಿದ್ದೇವೆ ಆದರೆ ಯಾವುದೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನೂ ಸಾಕಷ್ಟು ಸಮಯ ಉಳಿದಿದೆ. ನಾವು ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದು ಪಂಜಾಬ್ ಕಿಂಗ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದ ಮಯಾಂಕ್

ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದ ಮಯಾಂಕ್

ಆರಂಭಿಕ ಬ್ಯಾಟರ್ ಆಗಿರುವ ಮಯಾಂಕ್ ಅಗರ್ವಾಲ್, ಪಂಜಾಬ್ ಕಿಂಗ್ಸ್ ನಾಯಕರಾದ ನಂತರ ಆರಂಭಿಕ ಸ್ಥಾನವನ್ನು ಬೇರೆ ಆಟಗಾರರಿಗೆ ಬಿಟ್ಟುಕೊಟ್ಟು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು.

ಆದರೆ ಮಧ್ಯಮ ಕ್ರಮಾಂಕದಲ್ಲಿ ಮಯಾಂಕ್ ಅಗರ್ವಾಲ್ ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಕಳೆದ ಐಪಿಎಲ್ ಸೀಸನ್‌ನಲ್ಲಿ ಮಯಾಂಕ್ ಅಗರ್ವಾಲ್ 13 ಪಂದ್ಯಗಳನ್ನಾಡಿದ್ದು, 16.33 ಸರಾಸರಿ ಮತ್ತು 122.50 ಸ್ಟ್ರೈಕ್‌ ರೇಟ್‌ನಲ್ಲಿ ಕೇವಲ 196 ರನ್ ಗಳಿಸುವ ಮೂಲಕ ನಿರಾಸೆ ಮೂಡಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ಮುನಿಸು: ಮುಂಬೈ ತಂಡ ಸೇರಲಿದ್ದಾರ ರವೀಂದ್ರ ಜಡೇಜಾ?ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ಮುನಿಸು: ಮುಂಬೈ ತಂಡ ಸೇರಲಿದ್ದಾರ ರವೀಂದ್ರ ಜಡೇಜಾ?

 ಸ್ಫೋಟಕ ಬ್ಯಾಟರ್ ಜಾನಿ ಬೈರ್ ಸ್ಟೋ ನಾಯಕ?

ಸ್ಫೋಟಕ ಬ್ಯಾಟರ್ ಜಾನಿ ಬೈರ್ ಸ್ಟೋ ನಾಯಕ?

ಮಯಾಂಕ್ ಅಗರ್ವಾಲ್ ಬದಲಿಗೆ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ, ಸ್ಫೋಟಕ ಬ್ಯಾಟರ್ ಜಾನಿ ಬೈರ್ ಸ್ಟೋ ತಂಡದ ನಾಯಕರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂಗ್ಲೆಂಡ್ ತಂಡದ ಪರವಾಗಿ ಆಡಿದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಪಂಜಾಬ್ ತಂಡದ ಪರವಾಗಿ ಕೂಡ ಕಳೆದ ಋತುವಿನಲ್ಲಿ ಉತ್ತಮ ಆಟವಾಡಿದ್ದರು.

ಜಾನಿ ಬೈರ್ ಸ್ಟೋ ನಾಯಕರನ್ನಾಗಿ ನೇಮಕ ಮಾಡುವ ಮೂಲಕ ಮಯಾಂಕ್ ಅಗರ್ವಾಲ್ ಮೇಲಿನ ಹೊರೆಯನ್ನು ಕಡಿಮೆ ಮಾಡಿ, ಬ್ಯಾಟಿಂಗ್‌ನತ್ತ ಹೆಚ್ಚು ಗಮನ ನೀಡುವಂತೆ ಮಾಡಲು ಪಂಜಾಬ್ ಕಿಂಗ್ಸ್ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

 ಯಾರಾಗ್ತಾರೆ ಪಂಜಾಬ್ ಕಿಂಗ್ಸ್ ನೂತನ ಕೋಚ್?

ಯಾರಾಗ್ತಾರೆ ಪಂಜಾಬ್ ಕಿಂಗ್ಸ್ ನೂತನ ಕೋಚ್?

ಐಪಿಎಲ್ 2023 ಕ್ಕೆ ಆರು ತಿಂಗಳಿಗಿಂತ ಹೆಚ್ಚು ಸಮಯ ಉಳಿದಿರುವಾಗ ಪಂಜಾಬ್ ಕಿಂಗ್ಸ್ ಹೊಸ ಕೋಚ್‌ಗಾಗಿ ತನ್ನ ಹುಡುಕಾಟವನ್ನು ಪ್ರಾರಂಭಿಸಿದೆ. ಅನಿಲ್ ಕುಂಬ್ಳೆಗೆ ಕೋಚ್ ಸ್ಥಾನದಿಂದ ಕೊಕ್ ನೀಡುವ ಸಾಧ್ಯತೆ ದಟ್ಟವಾಗಿದೆ.

ವರದಿಗಳ ಪ್ರಕಾರ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಇಯಾನ್ ಮೋರ್ಗನ್, ಟ್ರೆವರ್ ಬೇಲಿಸ್ ಮತ್ತು ಒಬ್ಬ ಮಾಜಿ ಭಾರತದ ಕೋಚ್ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಆದರೆ ಅಂತಿಮವಾಗಿ ಪಂಜಾಬ್ ತಂಡದ ಕೋಚ್ ಯಾರಾಗಲಿದ್ದಾರೆ ಎನ್ನುವುದು ಸದ್ಯದಲ್ಲೇ ತಿಳಿಯಲಿದೆ.

 ಕೆಕೆಆರ್ ತಂಡಕ್ಕೂ ನೂತನ ಕೋಚ್‌ ನೇಮಕ

ಕೆಕೆಆರ್ ತಂಡಕ್ಕೂ ನೂತನ ಕೋಚ್‌ ನೇಮಕ

ಐಪಿಎಲ್ ಆರಂಭಕ್ಕೆ ಇನ್ನೂ ಆರು ತಿಂಗಳು ಇರುವಂತೆಯೇ ಹಲವು ತಂಡಗಳು ಬದಲಾವಣೆ ಮಾಡಲು ಮುಂದಾಗಿವೆ. ಇತ್ತೀಚೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ರಧಾನ ಕೋಚ್ ಆಗಿ, ಚಂದ್ರಕಾಂತ್ ಪಂಡಿತ್ ಅವರನ್ನು ನೇಮಕ ಮಾಡಿತ್ತು.

ಕಳೆದ ಋತುವಿನಲ್ಲಿ ಬ್ರೆಂಡನ್ ಮೆಕಲಮ್ ಕೆಕೆಆರ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು, ನಂತರ ಅವರು ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನ ಮುಖ್ಯ ಕೋಚ್‌ ಆಗಿ ಆಯ್ಕೆಯಾದ ನಂತರ, ಕೆಕೆಆರ್ ಕೋಚ್ ಸ್ಥಾನವನ್ನು ತೊರೆದಿದ್ದರು. ಅವರ ಜಾಗಕ್ಕೆ ದೇಶೀಯ ಕ್ರಿಕೆಟ್ ದಿಗ್ಗಜ ಚಂದ್ರಕಾಂತ್ ಪಂಡಿತ್ ಅವರನ್ನು ಕರೆತರಲಾಗಿದೆ.

English summary
Mayank Agarwal may be removed from Punjab Kings captaincy. Jonny Bairstow May Lead the punjab kings for next season. Mayank is not in plans to lead. He will need to focus on batting. He will be a crucial player for us, a Punjab Kings official told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X