Matthew Hayden: ವೈಭವ್ ಸೂರ್ಯವಂಶಿ ಮೇಲಿನ ಟೀಕೆಗಳಿಗೆ ಮ್ಯಾಥ್ಯೂ ಹೇಡನ್ ತಿರುಗೇಟು, ಅಚ್ಚರಿ ಭವಿಷ್ಯ ಭಾರಿ ವೈರಲ್

Vaibhav Sooryavanshi: ಭಾರತೀಯ ಕ್ರಿಕೆಟ್‌ನ ಯುವ ಆಟಗಾರ 15 ವರ್ಷದ ವೈಭವ್ ಸೂರ್ಯವಂಶಿ ಅವರು ಸ್ಪೋಟಕ ಬ್ಯಾಟಿಂಗ್ ಶೈಲಿಯಿಂದಲೇ ಹೆಸರುವಾಸಿಯಾಗಿದ್ದಾರೆ. ಇದೀಗ ಅವರ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಅಚ್ಚರಿ ಭವಿಷ್ಯವನ್ನು ನುಡಿದಿದ್ದಾರೆ. ಇದು ಸದ್ಯ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರ ಅದ್ಭುತ ಆಟ ಮತ್ತು ಭವಿಷ್ಯದ ಕುರಿತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಮ್ಯಾಥ್ಯೂ ಹೇಡನ್ ಮಹತ್ವದ ಹೇಳಿಕೆ ನೀಡಿದ್ದಾರೆ. ವೈಭವ್ ಸಾಮರ್ಥ್ಯದ ಬಗ್ಗೆ ಹರಿದಾಡುತ್ತಿರುವ ಕೆಲವು ವಾದಗಳನ್ನು ನೇರವಾಗಿ ತಳ್ಳಿಹಾಕಿರುವ ಅವರು, ಈ ಯುವ ಆಟಗಾರನಲ್ಲಿರುವ ನೈಜ ಪ್ರತಿಭೆಯನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.

Matthew Hayden Backs Vaibhav Sooryavanshi Predicts Bright Future for India s Young Cricket Star

ಮ್ಯಾಥ್ಯೂ ಹೇಡನ್ ಹೇಳಿದ್ದೇನು?

ಇತ್ತೀಚಿನ ದಿನಗಳಲ್ಲಿ ವೈಭವ್ ಸೂರ್ಯವಂಶಿ ಅವರ ಸಣ್ಣ ವಯಸ್ಸು ಮತ್ತು ಅನುಭವದ ಕೊರತೆಯಿದೆ. ಅವರು ಟೆಸ್ಟ್‌ ಕ್ರಿಕೆಟ್‌ಗೆ ಇನ್ನು ಸಿದ್ಧರಾಗಿಲ್ಲ ಎನ್ನುವ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದ್ದವು. ಈ ಕುರಿತು ಪ್ರತಿಕ್ರಿಯಿಸಿದ ಹೇಡನ್, 'ವೈಭವ್ ಸೂರ್ಯವಂಶಿ ಬಗ್ಗೆ ವ್ಯಕ್ತವಾಗುತ್ತಿರುವ ಅಂತಹ ಅಭಿಪ್ರಾಯಗಳನ್ನು ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ,' ಎಂದು ನೇರವಾಗಿಯೇ ಹೇಳಿ ಗಮನ ಸೆಳೆದಿದ್ದಾರೆ.

ವೈಭವ್ ಸೂರ್ಯವಂಶಿ ಆಟಕ್ಕೆ ಹೇಡನ್ ಫಿದಾ

ಯುವ ಆಟಗಾರರಲ್ಲಿರುವ ಸಕಾರಾತ್ಮಕ ಅಂಶಗಳನ್ನು ಕಾಣದೆ, ಕೇವಲ ವಯಸ್ಸಿನ ಆಧಾರದ ಮೇಲೆ ಅವರನ್ನು ಅಳೆಯುವುದು ಸರಿಯಲ್ಲ ಎಂಬುದು ಹೇಡನ್‌ ಅವರ ಅಭಿಪ್ರಾಯವಾಗಿದೆ. ಮುಂದುವರೆದು ಮಾತನಾಡಿದ ಅವರು, ವೈಭವ್ ಅವರಲ್ಲಿನ ನಿರ್ಭಯ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ನಡೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ವಿಶ್ವದರ್ಜೆ ಬೌಲರ್‌ಗಳನ್ನು ಎದುರಿಸುವ ಧೈರ್ಯ ಈ ಬಾಲಕನಲ್ಲಿದೆ. ಅವರ ಬಳಿ ಅತ್ಯುತ್ತಮ ಟೈಮಿಂಗ್ ಹಾಗೂ ಯಾವುದೇ ಒತ್ತಡವಿಲ್ಲದೆ ಸಿಕ್ಸರ್-ಬೌಂಡರಿಗಳನ್ನು ಸಿಡಿಸುವ ಸಾಮರ್ಥ್ಯವಿದೆ ಎಂದು ಶ್ಲಾಘಿಸಿದ್ದಾರೆ.

ಮ್ಯಾಥ್ಯೂ ಹೇಡನ್ ಮಹತ್ವದ ಸಲಹೆ

ವೈಭವ್ ಸೂರ್ಯವಂಶಿ ಅವರು 14ನೇ ವಯಸ್ಸಿನಲ್ಲೇ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರೀ ಮೊತ್ತಕ್ಕೆ ಆಯ್ಕೆಯಾಗುವ ಮೂಲಕ ಇತಿಹಾಸ ಬರೆದಿದ್ದರು. ಈ ಕುರಿತು ಮಾತನಾಡಿದ ಹೇಡನ್, 'ಭಾರತೀಯ ಕ್ರಿಕೆಟ್‌ನ ಬೆಂಚ್ ಸ್ಟ್ರೆಂತ್ ಎಷ್ಟು ಬಲವಾಗಿದೆ ಎಂಬುದಕ್ಕೆ ವೈಭವ್ ಅವರಂತಹ ಆಟಗಾರರೇ ಸಾಕ್ಷಿ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಇಂತಹ ದೊಡ್ಡ ವೇದಿಕೆಯಲ್ಲಿ ಆಡುವ ಅವಕಾಶ ಸಿಗುತ್ತಿರುವುದು ಆಟಗಾರನ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ,' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಈ ಯುವ ಆಟಗಾರನ ಭವಿಷ್ಯದ ನಿರ್ವಹಣೆಯ ಬಗ್ಗೆಯೂ ಹೇಡನ್ ಮಹತ್ವದ ಸಲಹೆ ನೀಡಿದ್ದಾರೆ. 'ಇಷ್ಟು ಚಿಕ್ಕ ವಯಸ್ಸಿನಲ್ಲೇ ಸಿಗುವ ಅತಿಯಾದ ಪ್ರಚಾರ, ಹಣ ಮತ್ತು ಸಾರ್ವಜನಿಕರ ನಿರೀಕ್ಷೆಗಳು ಯುವ ಆಟಗಾರರ ಮೇಲೆ ಒತ್ತಡ ಹೇರಬಹುದು. ಆದ್ದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ರಾಜಸ್ಥಾನ್ ರಾಯಲ್ಸ್ ಆಡಳಿತ ಮಂಡಳಿಯು ಅವರ ವೃತ್ತಿಜೀವನವನ್ನು ಬಹಳ ಎಚ್ಚರಿಕೆಯಿಂದ ರೂಪಿಸಬೇಕು. ಅವರಿಗೆ ಅಗತ್ಯವಿರುವ ಮಾರ್ಗದರ್ಶನ ಮತ್ತು ರಕ್ಷಣೆ ನೀಡಿದರೆ, ವೈಭವ್ ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಆಗುವುದರಲ್ಲಿ ಅನುಮಾನವಿಲ್ಲ,' ಎಂದು ಭವಿಷ್ಯ ನುಡಿದಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಮ್ಯಾಥ್ಯೂ ಹೇಡನ್ ಯುವ ಆಟಗಾರನ ಬೆಂಬಲಕ್ಕೆ ನಿಂತು ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+