Wimbledon 2023: ವಿಂಬಲ್ಡನ್ ಪಂದ್ಯಾವಳಿಯಿಂದ ಹಿಂದೆ ಸರಿದ ಮರಿನ್ ಸಿಲಿಕ್ ಮತ್ತು ಅನ್ನಾ ಕಾಲಿನ್ಸ್ಕಾಯಾ
ಬಹು ನಿರೀಕ್ಷಿತ ವಿಂಬಲ್ಡನ್ 2023 ಆರಂಭಕ್ಕೆ ಮುನ್ನವೇ ಇಬ್ಬರು ಪ್ರಮುಖ ಆಟಗಾರರು ಹೊರಬಿದ್ದಿದ್ದಾರೆ. ದೀರ್ಘಕಾಲದ ಗಾಯದ ಸಮಸ್ಯೆಯಿಂದಾಗಿ ಮರಿನ್ ಸಿಲಿಕ್ ಮತ್ತು ಅನ್ನಾ ಕಾಲಿನ್ಸ್ಕಾಯಾ ಅವರು 2023 ರ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
ಕ್ರೊಯೇಷಿಯಾದ ಮರಿನ್ ಸಿಲಿಕ್, 2017 ರ ವಿಂಬಲ್ಡನ್ ಫೈನಲಿಸ್ಟ್, ಭಾರತದಲ್ಲಿ ನಡೆದ ಪುಣೆ ಓಪನ್ ಸಮಯದಲ್ಲಿ ಬಲ ಮೊಣಕಾಲಿನ ಗಾಯದಿಂದಾಗಿ ಜನವರಿಯಿಂದ ಟೆನ್ನಿಸ್‌ನಿಂದ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದೇ ಕಾರಣಕ್ಕಾಗಿ ಅವರು ಎಟಿಬಿ ಟೂರ್‌ನಲ್ಲಿ ಆಡಲಿಲ್ಲ. ಜೂನ್ 12-18 ರಿಂದ ಲಿಬೆಮಾ ಓಪನ್‌ನಲ್ಲಿ ಆಡಬೇಕಿತ್ತು, ಆದರೆ ಅದರಿಂದಲೂ ಭಾಗವಹಿಸದೇ ಹಿಂದೆ ಸರಿದಿದ್ದಾರೆ.

2023 ರ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ನಂತರ ಟೆನಿಸ್‌ನಲ್ಲಿ ಆಡುತ್ತಿಲ್ಲ ಎಂದು ಸಿಲಿಕ್ ಇತ್ತೀಚೆಗೆ ಘೋಷಿಸಿದರು. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ತರಬೇತಿ ಉತ್ತಮವಾಗಿ ನಡೆಯುತ್ತಿದೆ, ಆದ್ದರಿಂದ ಈ ಬಾರಿ ವಿಂಬಲ್ಡನ್‌ನಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.
ದುಃಖವಾಗಿದೆ ಎಂದ ಮರಿನ್ ಸಿಲಿಕ್
"ವಿಂಬಲ್ಡನ್ ಅನ್ನು ಕಳೆದುಕೊಂಡಿರುವುದಕ್ಕೆ ನನಗೆ ದುಃಖವಾಗಿದೆ; ಇದು ಪ್ರತಿ ಟೆನಿಸ್ ಆಟಗಾರನ ಋತುವಿನ ಪ್ರಮುಖ ಅಂಶವಾಗಿದೆ, ಆದರೆ ನಾನು ಚೇತರಿಸಿಕೊಳ್ಳುವುದು ಮುಖ್ಯ ಎಂದು ನನಗೆ ತಿಳಿದಿದೆ. ಕಳೆದ ಕೆಲವು ದಿನಗಳಲ್ಲಿ ಸಾಮಾನ್ಯವಾಗಿ ವಿಷಯಗಳು ಉತ್ತಮವಾಗಿ ನಡೆಯುತ್ತಿವೆ. ನನ್ನ ಶಸ್ತ್ರಚಿಕಿತ್ಸೆಯ ನಂತರದ ತರಬೇತಿಯೊಂದಿಗೆ ವಾರಗಳವರೆಗೆ ನಾನು ಸುಧಾರಿಸಿಕೊಳ್ಳುತ್ತಿದ್ದೇನೆ. ನನ್ನ ದೀರ್ಘಕಾಲೀನ ಚೇತರಿಕೆಯತ್ತ ಗಮನಹರಿಸುತ್ತಿದ್ದೇನೆ" ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
"ನಾನು ಶೀಘ್ರದಲ್ಲೇ ಸ್ಪರ್ಧಿಸಲಿದ್ದೇನೆ ಎನ್ನುವ ವಿಶ್ವಾಸವಿದೆ. ಸದ್ಯಕ್ಕೆ ಪ್ರವಾಸ, ಪಂದ್ಯಾವಳಿಗಳು ಮತ್ತು ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ, ನಾನು ಸ್ಪರ್ಧಿಸುವ ಥ್ರಿಲ್ ಅನ್ನು ಅನುಭವಿಸಲು ಕಾಯಲು ಸಾಧ್ಯವಿಲ್ಲ. ನಾನು ತರಬೇತಿಯನ್ನು ಮುಂದುವರಿಸುತ್ತೇನೆ ಮತ್ತು ನನ್ನ ಪ್ರೇರಣೆಯನ್ನು ತೀಕ್ಷ್ಣಗೊಳಿಸುತ್ತೇನೆ. ಎಂದಿನಂತೆ ನಿಮ್ಮ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು!," ಎಂದು ಹೇಳಿದರು.
2023 ರ ಪುಣೆ ಓಪನ್, ಸಿಲಿಕ್ ಅವರ ಕೊನೆಯ ಪಂದ್ಯಾವಳಿಯಲ್ಲಿ, ಅವರು ಅಂತಿಮವಾಗಿ ಚಾಂಪಿಯನ್ ಟ್ಯಾಲನ್ ಗ್ರೀಕ್ಸ್‌ಪೂರ್ ವಿರುದ್ಧ ತಮ್ಮ ಎರಡನೇ ಸುತ್ತಿನ ಪಂದ್ಯದಿಂದ ಹಿಂದೆ ಸರಿಯುವ ಮೊದಲು ರಾಬರ್ಟೊ ಕಾರ್ಬಲ್ಸ್ ಬೇನಾ ವಿರುದ್ಧ ತಮ್ಮ ಮೊದಲ ಸುತ್ತಿನ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಕ್ರೊಯೇಷಿಯಾ ಆಟಗಾರ ಪ್ರಸ್ತುತ ವಿಶ್ವ ನಂ. 100 ರ ಶ್ರೇಯಾಂಕದಲ್ಲಿದ್ದಾರೆ.
ಹಿಂದೆ ಸರಿದ ಅನ್ನಾ ಕಾಲಿನ್ಸ್ಕಾಯಾ
ಅನ್ನಾ ಕಾಲಿನ್ಸ್ಕಾಯಾ ಅವರು 2023 ರ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ, ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ, ನೆಚ್ಚಿನ ಪಂದ್ಯಾವಳಿಯಲ್ಲಿ ಆಡಲು ಸಾಧ್ಯವಾಗದ್ದಕ್ಕೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
"ದುರದೃಷ್ಟವಶಾತ್, ನನ್ನ ಗಾಯದಿಂದ ಚೇತರಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ ಮತ್ತು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ನನ್ನ ನೆಚ್ಚಿನ ಪಂದ್ಯಾವಳಿಯನ್ನು ಕಳೆದುಕೊಂಡಿದ್ದೇನೆ," ಎಂದು ಅವರು ಬರೆದಿದ್ದಾರೆ.
ಪ್ರಸ್ತುತ ವಿಶ್ವ ನಂ. 57 ರ ಶ್ರೇಯಾಂಕದಲ್ಲಿರುವ ಕಲಿನ್ಸ್ಕಾಯಾ, ಮೇನಲ್ಲಿ 2023 ರ ಇಟಾಲಿಯನ್ ಓಪನ್‌ನಲ್ಲಿ ಎಲೆನಾ ರೈಬಾಕಿನಾ ವಿರುದ್ಧದ ಮೂರನೇ ಸುತ್ತಿನ ಪಂದ್ಯದಲ್ಲಿ ಎಡ ಮಂಡಿರಜ್ಜು ಗಾಯಗೊಂಡ ನಂತರ ವೃತ್ತಿಪರವ ಟೆನ್ನಿಸ್ ಆಡಲಿಲ್ಲ.












Click it and Unblock the Notifications