ಕನ್ನಡಿಗನಿಗೆ ಅವಕಾಶ ಕೊಟ್ಟಿದ್ದಕ್ಕೆ ಗೌತಮ್ ಗಂಭೀರ್ ವಿರುದ್ಧ ಕಿಡಿ ಕಾರಿದ ಮಾಜಿ ಕ್ರಿಕೆಟಿಗ
ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆದ ಬಳಿಕ ತಂಡವು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತ ಬಳಿಕ, ನ್ಯೂಜಿಲೆಂಡ್ ವಿರುದ್ಧ ಅವಮಾನಕರ ಟೆಸ್ಟ್ ಸರಣಿ ಸೋಲು ಕಂಡಿದೆ. 10 ವರ್ಷಗಳ ಬಳಿಕ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಸೋತಿದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ಗೌತಮ್ ಗಂಭೀರ್ ವಿರುದ್ಧ ಈಗಾಗಲೇ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಇದೀಗ ಗೌತಮ್ ಗಂಭೀರ್ ಸಹ ಆಟಗಾರರಾಗಿದ್ದ ಮನೋಜ್ ತಿವಾರಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗೌತಮ್ ಗಂಭೀರ್ ಒಬ್ಬ ಕಪಟಿ, ಆತ ಹೇಳುವುದನ್ನು ಮಾಡುವುದಿಲ್ಲ ಎಂದು ಟೀಕಿಸಿದ್ದಾರೆ.

ಗೌತಮ್ ಗಂಭೀರ್ ಮತ್ತು ಮನೋಜ್ ತಿವಾರಿ ಭಾರತ ತಂಡದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗೌತಮ್ ಗಂಭೀರ್ ಜೊತೆ ಆಡಿದ್ದಾರೆ. ಅಲ್ಲದೆ ದೆಹಲಿ ರಾಜ್ಯ ತಂಡಕ್ಕೂ ಸಹ ಜೊತೆಯಾಗಿ ಆಡಿದ್ದಾರೆ.
ಕನ್ನಡಿಗನಿಗೆ ಅವಕಾಶ ಕೊಟ್ಟಿದ್ದಕ್ಕೆ ಟೀಕೆ
ಇತ್ತೀಚೆಗೆ ಮನೋಜ್ ತಿವಾರಿ ಗೌತಮ್ ಗಂಭೀರ್ ಬೇಕೆಂದೆ ಹರ್ಷಿತ್ ರಾಣಾಗೆ ಅವಕಾಶ ನೀಡಿದ್ದಾರೆ. ಆಕಾಶ್ ದೀಪ್‌ರನ್ನು ಕಡೆಗಣಿಸಲಾಗಿದೆ ಎಂದು ಹೇಳಿದ್ದರು. ಇದಕ್ಕೆ ಹರ್ಷಿತ್ ರಾಣಾ ಸಮರ್ಥನೆ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಗಂಭೀರ್ ಅವರನ್ನು ಸಮರ್ಥನೆ ಮಾಡಿಕೊಳ್ಳುವುದರಿಲ್ಲ ಅಚ್ಚರಿಯೇನಿಲ್ಲ ಎಂದರು.
ಪರ್ತ್‌ನಲ್ಲಿ ಆಕಾಶ್ ದೀಪ್ ಬದಲಾಗಿ ಹರ್ಷಿತ್ ರಾಣಾ ಯಾಕೆ ಆಡಿದರು, ಅದು ಹೇಗೆ ಸಾಧ್ಯವಾಯಿತು. ಆಕಾಶ್ ದೀಪ್ ಏನು ತಪ್ಪು ಮಾಡಿದ್ದರು. ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ವೇಗದ ಬೌಲರ್ ಆಗಿ ಆಸ್ಟ್ರೇಲಿಯಾದಲ್ಲಿ ಬೌಲಿಂಗ್ ಮಾಡುವುದು ಕನಸಾಗಿರುತ್ತದೆ. ವೇಗಿಗಳಿಗೆ ಸಹಾಯ ನೀಡುವ ಪಿಚ್‌ಗಳಲ್ಲಿ ಆಕಾಶ್ ದೀಪ್‌ರನ್ನು ಕೂರಿಸಿ ಹರ್ಷಿತ್ ರಾಣಾರನ್ನು ಸೇರಿಸಿಕೊಂಡಿದ್ದೇಕೆ? ಹರ್ಷಿತ್ ರಾಣಾ ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚಾಗಿ ಆಡಿಲ್ಲ, ಆಕಾಶ್ ದೀಪ್ ಉತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಆಕಾಶ್ ದೀಪ್‌ರನ್ನು ಕೈಬಿಟ್ಟಿದ್ದು ಪಕ್ಷಪಾತದ ಧೋರಣೆ, ಅದಕ್ಕಾಗಿಯೇ ಅವರು ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಹೆಚ್‌ಟಿ ಜೊತೆ ಮಾತನಾಡುವ ಸಂದರ್ಭದಲ್ಲಿ ತಿಳಿಸಿದ್ದಾರೆ.
ನಾನು ಯಾವುದೇ ತಪ್ಪಾದ ಮಾತು ಆಡುತ್ತಿಲ್ಲ, ಯಾರಾದರೂ ಇರುವ ವಿಚಾರ ಮಾತನಾಡಿದಾಗ, ವ್ಯಕ್ತಿಗಳನ್ನು ಸಮರ್ಥಿಸಿಕೊಳ್ಳಲು ಬರುತ್ತಾರೆ. ಆದರೆ ಅವರಿಗೆ ನಾನು ಏನು ಎನ್ನುವುದು ತಿಳಿದಿಲ್ಲ, ಸತ್ಯಗಳನ್ನು ಮಾತ್ರ ಮಾತನಾಡುತ್ತೇನೆ ಎಂದರು.
ಕುಟುಂಬವನ್ನು ನಿಂದಿಸಿದ್ದಾರೆ
ಗಂಭೀರ್ ಜೊತೆಗಿನ ತಮ್ಮ ಹಳೆಯ ಸಂಬಂಧವನ್ನು ಕೂಡ ನೆನಪಿಸಿಕೊಂಡರು. ಗಂಭೀರ್ ನನ್ನ ಕುಟುಂಬವನ್ನು ನಿಂದಿಸಿದ್ದಾರೆ. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿದರು.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಗಂಭೀರ್ ನಿರ್ಧಾರಗಳ ಬಗ್ಗೆ ಕೂಡ ಪ್ರಶ್ನೆ ಮಾಡಿದ್ದಾರೆ. ಹರ್ಷಿತ್ ರಾಣಾ ಮತ್ತು ದೇವದತ್ ಪಡಿಕ್ಕಲ್‌ರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿದ ಅವರು, ಅಭಿಮನ್ಯು ಈಶ್ವರನ್ ಅಂತಹ ಬ್ಯಾಟರ್ ಇದ್ದಾಗ ದೇವದತ್ ಪಡಿಕ್ಕಲ್‌ಗೆ ಅವಕಾಶ ನೀಡಿದ್ದೇಕೆ ಎಂದಿದ್ದಾರೆ.
-
ಶುಭ್ಮನ್ ಗಿಲ್ ಭೇಟಿಯಾದ ಅನನ್ಯಾ ಬಿರ್ಲಾ; ಆರ್ಸಿಬಿ ಹೊಸ ಮಾಲೀಕನ ಸಹೋದರಿಗೆ ಗುಜರಾತ್ ಜೆರ್ಸಿನಾ ಎಂದ ನೆಟ್ಟಿಗರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ











Click it and Unblock the Notifications