IPL 2023: ದಾಖಲೆಯ ಮೇಲೆ ದಾಖಲೆ, ಧೋನಿಯ ಇನ್ನೊಂದು ಮೈಲಿಗಲ್ಲು
ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಿಸರ್ವ್ ದಿನದಲ್ಲಿ ಫೈನಲ್ ಆರಂಭವಾಗಿದೆ. ಆ ಮೂಲಕ, ಯಶಸ್ವೀ ನಾಯಕ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ.
ಹದಿನಾರನೇ ಇಂಡಿಯನ್ ಪ್ರೀಮಿಯರ್ ಲೀಗಿನ ಫೈನಲ್ ಪಂದ್ಯ ಭಾನುವಾರದಂದು ನಡೆಯಬೇಕಿತ್ತು. ಆದರೆ, ಮಳೆಯ ಕಾರಣ ಸೋಮವಾರದಂದು (ಮೇ 29) ಆಡಲಾಗುತ್ತಿದೆ. ಲೀಗ್ ಹಿಸ್ಟರಿಯಲ್ಲಿ 250ನೇ ಪಂದ್ಯವನ್ನು ಆಡುತ್ತಿರುವ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 240 ಪಂದ್ಯವನ್ನು ಆಡಿದ್ದರು. ಈಗ, ಮಹೇಂದ್ರ ಸಿಂಗ್ ಧೋನಿ ಆ ದಾಖಲೆಯನ್ನು ಮುರಿದಿದ್ದಾರೆ.
ಇದುವರೆಗೆ ಆಡಲಾದ ಪ್ರತೀ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಧೋನಿ ಆಡಿದ್ದಾರೆ. 2008ರಲ್ಲಿ ಚೆನ್ನೈ ತಂಡದ ಸಾರಥ್ಯವಹಿಸಿದ್ದ ಧೋನಿ, 2015ರ ತನಕ ಆ ತಂಡದ ಪರವಾಗಿ ಆಡಿದ್ದರು.
My dear Thala, pic.twitter.com/NMo70bi7B6
— Chennai Super Kings (@ChennaiIPL) May 28, 2023
ಇದಾದ ನಂತರ 2016 ಮತ್ತು 2017ರ ಐಪಿಎಲ್ ಸೀಸನ್ ನಲ್ಲಿ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ತಂಡದ ಪರವಾಗಿ ಆಡಿದ್ದರು. 2018ರಲ್ಲಿ ಚೆನ್ನೈ ತಂಡ ಮತ್ತೆ ಐಪಿಎಲ್ ನಲ್ಲಿ ಭಾಗವಹಿಸಲು ಅವಕಾಶ ಸಿಕ್ಕ ನಂತರ ಧೋನಿ ಮತ್ತು ಚೆನ್ನೈ ತಂಡದ ಪರವಾಗಿ ಆಡಲು ಆರಂಭಿಸಿದರು.
2022ರ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ತಂಡದ ಸದಸ್ಯರಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ರವೀಂದ್ರ ಜಡೇಜಾ ಆ ವೇಳೆ ಚೆನ್ನೈ ತಂಡವನ್ನು ಮುನ್ನಡೆಸಿದ್ದರು.
ಇದು, ಅದು ಎರಡೂ ಚೆನ್ನೈ ಫ್ಯಾನ್ಸ್ ಫೋಟೊಗಳಲ್ಲ; ಧೋನಿ ಕ್ರೇಜ್ ಹೆಸರಲ್ಲಿ ಹರಿದಾಡ್ತಿವೆ ನಕಲಿ ಪೋಟೊಸ್!
ಆದರೆ, ನಾಯಕನಾಗಿ ಜಡೇಜ್ ವಿಫಲವಾದ ನಂತರ ಮತ್ತೆ ಚೆನ್ನೈ ತಂಡದ ನಾಯಕತ್ವನ್ನು ಧೋನಿ ವಹಿಸಿಕೊಂಡರು. ಮುಂದಿನ ಐಪಿಎಲ್ ಗೆ ಮುನ್ನ ಕ್ರಿಕೆಟ್ ಲೋಕದ ಯಶಸ್ವೀ ಆಟಗಾರ ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications