Rishabh Pant: ಆರ್‌ಸಿಬಿ ವಿರುದ್ಧ ಶತಕ ಬಾರಿಸಿ ಸಂಭ್ರಮಿಸಿದ ರಿಷಬ್ ಪಂತ್
ಐಪಿಎಲ್ 2025ರ ಇಡೀ ಆವೃತ್ತಿಯಲ್ಲಿ ಬ್ಯಾಟಿಂಗ್ ಮಾಡಲು ತಡಕಾಡುತ್ತಿದ್ದ ರಿಷಬ್ ಪಂತ್ ಕೊನೆಯ ಪಂತ್ ಕೊನೆಯ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದರು. ಆರ್ ಸಿಬಿ ರಣತಂತ್ರವನ್ನು ತಲೆಕೆಳಗೆ ಮಾಡಿದ ರಿಷಬ್ ಪಂತ್ ಅಮೋಘ ಶತಕ ಸಿಡಿಸಿದ ಬಳಿಕ ಪಲ್ಟಿ ಹೊಡೆದು ಸಂಭ್ರಮಾಚರಣೆ ಮಾಡಿದ್ದಾರೆ. ಆರ್ ಸಿಬಿ ಅಭಿಮಾನಿಗಳಿಗೆ ಪಂತ್ ಆಟ ಬೇಸರ ತಂದರೆ, ಎಲ್‌ಎಸ್‌ಜಿ ಮತ್ತು ಟೀಂ ಇಂಡಿಯಾ ಅಭಿಮಾನಿಗಳಿಗೆ ಪಂತ್ ಆಟ ಖುಷಿ ಕೊಟ್ಟಿದೆ.
ಇಂಗ್ಲೆಂಡ್ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೆ ಮುನ್ನ ಪಂತ್ ಫಾರ್ಮ್ ಕಂಡುಕೊಂಡರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಅವರು ಕೊನೆಯವರೆಗೂ ಬ್ಯಾಟಿಂಗ್ ಮಾಡುವ ಮೂಲಕ ಆರ್ ಸಿಬಿ ಬೌಲರ್ ಗಳನ್ನು ಕಾಡಿದರು.

ಅಮೋಘ ಶತಕ ಸಿಡಿಸಿದ ಪಂತ್
ಕ್ವಾಲಿಫೈಯರ್ 1 ಪಂದ್ಯ ಆಡಲು ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 227 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಏಡೆನ್ ಮಾಕ್ರಂ ಅವರ ಅನುಪಸ್ಥಿತಿಯಲ್ಲಿ ಮ್ಯಾಥ್ಯೂ ಬ್ರೀಟ್ಜ್ಕೆ ಮಿಚೆಲ್ ಮಾರ್ಷ್ ಅವರ ಜೊತೆ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಮೊದಲ ಪಂದ್ಯದಲ್ಲೇ 14 ರನ್ ಗಳಿಸಿ ಔಟಾದರು. ನುವಾನ್ ತುಷಾರ ಅವರ ಮಾರಕ ಬೌಲಿಂಗ್‌ಗೆ ಕ್ಲೀನ್ ಬೌಲ್ಡ್ ಆದರು. ಮೊದಲ ವಿಕೆಟ್ ಪತನದ ಬಳಿಕ ಅಚ್ಚರಿ ಎನ್ನುವಂತೆ ಮೂರನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ರಿಷಬ್ ಪಂತ್ ಅಬ್ಬರಿಸಿದರು. ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದ ಅವರು ಕೊನೆಯ ಓವರ್ ವರೆಗೂ ನಿಲ್ಲಿಸಲೇ ಇಲ್ಲ.
61 ಎಸೆತಗಳಲ್ಲಿ 11 ಬೌಂಡರಿ 8 ಅಮೋಘ ಸಿಕ್ಸರ್ ಸಹಿತ ಅಜೇಯ 118 ರನ್ ಗಳಿಸಿದರು. ಮೊದಲ 13 ಪಂದ್ಯಗಳಲ್ಲಿ ರಿಷಬ್ ಒಂತ್ ಒಟ್ಟಾರೆಯಾಗಿ 107.09 ಸ್ಟ್ರೈಕ್‌ರೇಟ್‌ನಲ್ಲಿ 151 ರನ್ ಗಳಿಸಿದ್ದರೆ, ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ 193.44 ಸ್ಟ್ರೈಕ್‌ರೇಟ್‌ನಲ್ಲಿ ಶತಕ ಗಳಿಸಿದರು.
ಮಿಚೆಲ್ ಮಾರ್ಷ್ ಕೂಡ ರಿಷಬ್ ಪಂತ್ ಅವರಿಗೆ ಸರಿಯಾಗಿ ಜೊತೆಯಾದರು, 37 ಎಸೆತಗಳಲ್ಲಿ 4 ಬೌಂಡರಿ 5 ಸಿಕ್ಸರ್ ಸಹಿತ 67 ರನ್ ಗಳಿಸಿದರು. ನಿಕೋಲಸ್ ಪೂರನ್ 10 ಎಸೆತಗಳಲ್ಲಿ 13 ರನ್ ಗಳಿಸಿದರು.












Click it and Unblock the Notifications