Lok Sabha Election: ಕ್ರಿಕೆಟ್‌ ಮೈದಾನಕ್ಕೂ ರಾಜಕೀಯಕ್ಕೂ ಇದೆ ಸಂಬಂಧ: ಈ ಬಾರಿ ಕಣದಲ್ಲಿರುವ ಕ್ರಿಕೆಟ್ ಆಟಗಾರರು ಎಷ್ಟು?

ಸ್ಟಾರ್ ಕ್ರಿಕೆಟ್‌ ಆಟಗಾರರಿಗೆ ಜನ ಹೆಚ್ಚಾಗಿ ಗುರುತಿಸುತ್ತಾರೆ. ಇವರ ಮೈದಾನದಲ್ಲಿ ಕ್ಲಾಸಿಕ್ ಆಟದ ಮೂಲಕ ಗಮನ ಸೆಳೆದಿದ್ದಾರೆ. ಮೈದಾನದಿಂದ ಹೊರ ಬಂದ ನಂತರ ಎರಡನೇ ಇನ್ನಿಂಗ್ಸ್‌ಗೆ ಪ್ಲ್ಯಾನ್ ಮಾಡುತ್ತಲೇ ಇರುತ್ತರೆ. ಹಲವು ಕ್ರಿಕೆಟ್‌ ಆಟಗಾರರು ಕ್ರಿಕೆಟ್ ಸಂಬಂಧಿತ ಕಾರ್ಯದಲ್ಲಿ ಮುಂದುವರೆದರೆ, ಇನ್ನು ಹಲವು ಕ್ರಿಕೆಟ್‌ ಆಟಗಾರು ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕ್ರಿಕೆಟ್‌ ನಿಂದ ನಿವೃತ್ತಿ ಹೊಂದಿದ ಬಳಿಕ ರಾಜಕೀಯ ಕ್ಷೇತ್ರದಲ್ಲಿ ಅಬ್ಬರಿಸಿರುವ ಆಟಗಾರರ ಪಟ್ಟಿ ಇಲ್ಲಿದೆ.

ಹಲವು ಕ್ರಿಕೆಟ್‌ ಆಟಗಾರರು ಈಗಾಗಲೇ ರಾಜಕೀಯ ರಂಗದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿದ್ದಾರೆ. ಅದರಲ್ಲಿ ಪ್ರಮುಖವಾದವರು 1983 ರ ವಿಶ್ವಕಪ್‌ ವಿಜೇತ ತಂಡದ ಸ್ಟಾರ್ ಆಟಗಾರ ಕೀರ್ತಿ ಆಜಾದ್. ಕ್ರಿಕೆಟ್ ನಂತರ ಚುನಾವಣಾಅಖಾಡದಲ್ಲಿ ಇವರು ಕಾಣಿಸಿಕೊಂಡರು. ಕೀರ್ತಿ ಆಜಾದ್ 1999 ರಲ್ಲಿ ದರ್ಭಾಂಗಾದಿಂದ ಬಿಜೆಪಿ ಟಿಕೆಟ್‌ ಪಡೆದು ಲೋಕಸಭೆಯನ್ನು ಪ್ರವೇಶಿಸಿದ್ದರು. ಆದರೆ, ನಂತರ ಅವರು ಕಾಂಗ್ರೆಸ್‌ ಸೇರಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಇದಾದ ನಂತರ ಅವರು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

Lok Sabha Election Cricket s Influence on Politics - Number of Players in the Field

ಎರಡು ಬಾರಿ ಸಂಸದ್ ಚೇತನ್

ಸುನಿಲ್ ಗವಾಸ್ಕರ್ ಅವರ ಆರಂಭಿಕ ಜೊತೆಗಾರ ಚೇತನ್ ಚೌಹಾಣ್ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರು 1991 ಮತ್ತು 1998 ರಲ್ಲಿ ಅಮ್ರೋಹಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗಳನ್ನು ಸ್ಪರ್ಧಿಸಿ ಗೆದ್ದಿದ್ದಾರೆ. ನಂತರದ ಚುನಾವಣೆಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಚೇತನ್ ಚೌಹಾಣ್ ಅವರು 2020 ರಲ್ಲಿ ಕೋವಿಡ್‌ನಿಂದ ನಿಧನರಾದರು

Lok Sabha Election Cricket s Influence on Politics - Number of Players in the Field

ಸಿಕ್ಸರ್‌ ಸಿಂಗ್‌ ರಾಜಕೀಯಕ್ಕೆ

ಸಿಕ್ಸರ್‌ ಸಿಂಗ್‌ ಎಂದೇ ಖ್ಯಾತಿ ಪಡೆದಿರುವ ನವಜೋತ್ ಸಿಂಗ್ ಸಿಧು ಸಹ ಕ್ರಿಕೆಟ್‌ ಅಂಗಳದಿಂದ ನಿವೃತ್ತಿ ಪಡೆದ ಮೇಲೆ ರಾಜಕೀಯ ರಂಗ ಪ್ರವೇಶಿಸಿದರು. ಇವರು 187 ಪಂದ್ಯಗಳನ್ನು ಭಾರತದ ಪರ ಆಡಿದ್ದಾರೆ. ಇವರು 2004ರಲ್ಲಿ ಕಮಲ ಪಡೆ ಸೇರಿದರು. 2004, 2007 (ಉಪಚುನಾವಣೆ) ಹಾಗೂ 2009ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸದರಾದರು. 2016ರಲ್ಲಿ ರಾಜ್ಯಸಭಾ ಸದಸ್ಯರೂ ಆದರು. ಆದರೆ, ಇತ್ತೀಚಿಗೆ ಅವರು ರಾಜ್ಯಸಭಾ ಸದಸ್ಯತ್ವ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

Lok Sabha Election Cricket s Influence on Politics - Number of Players in the Field

ಉತ್ತಮ ನಾಯಕ ರಾಜಕೀಯಕ್ಕೆ

3 ವಿಶ್ವಕಪ್‌ಗಳಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕದ ಮೊಹಮ್ಮದ್ ಅಜರುದ್ದೀನ್ ರಾಜಕೀಯದಲ್ಲೂ ಅದೃಷ್ಟ ಪರೀಕ್ಷೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. 2009 ರ ಲೋಕಸಭಾ ಚುನಾವಣೆಯಲ್ಲಿ ಮೊರಾದಾಬಾದ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. ಅಜರ್ 2014 ರಲ್ಲಿ ಟೋಂಕ್‌ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

ವಿಶ್ವಕಪ್‌ ವಿಜೇತ ತಂಡದ ಪ್ರಮುಖ ಆಟಗಾರ ಗೌತಮ್‌ ಗಂಭೀರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ. ಇವರು 2007 ರ ಟಿ 20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಟಾಪ್ ಸ್ಕೋರರ್ ಆಗಿದ್ದರು. ಗೌತಮ್ ಗಂಭೀರ್ 2019 ರಲ್ಲಿ ಪೂರ್ವ ದೆಹಲಿಯಿಂದ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದಿದ್ದಾರೆ. ಆದರೆ, 2024ರ ಲೋಕಸಭೆ ಚುನಾವಣೆಗೂ ಮುನ್ನ ಅವರು ರಾಜಕೀಯದಿಂದ ದೂರ ಸರಿದಿರುವುದಾಗಿ ತಿಳಿಸಿದ್ದಾರೆ.

Lok Sabha Election Cricket s Influence on Politics - Number of Players in the Field

ಯೂಸುಫ್‌ ಅದೃಷ್ಟ ಪರೀಕ್ಷೆ

ಆಲ್‌ರೌಂಡರ್ ಯೂಸುಫ್ ಪಠಾಣ್ 2024 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಟಿಎಂಸಿ ಬಹರಂಪುರ ಕ್ಷೇತ್ರದಿಂದ ಯೂಸುಫ್ ಪಠಾಣ್ ಅವರನ್ನು ಕಣಕ್ಕಿಳಿಸಿದೆ. ಇವರು ಸಹ ವಿಶೇಷ ಕ್ಲಬ್ ಸೇರುತ್ತಾರಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+