IPL Auction: ಜ್ಯೂನಿಯರ್ ಧೋನಿಗೆ ₹10 ಕೋಟಿ ನೀಡಲು ಸಿದ್ಧವಿದ್ದ ಡೆಲ್ಲಿ ಕ್ಯಾಪಿಟಲ್ಸ್: ಗಂಗೂಲಿ ನೀಡಿದ್ದ ಭರವಸೆ ಏನು?

ಐಪಿಎಲ್ 2024ರ ಮಿನಿ ಹರಾಜಿನಲ್ಲಿ ಹಲವು ಆಟಗಾರರ ಅದೃಷ್ಟ ಖುಲಾಯಿಸಿದೆ. ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿ ಪಡೆದರೆ, ಪ್ಯಾಟ್ ಕಮ್ಮಿನ್ಸ್ 20.50 ಕೋಟಿ ಪಡೆದ ಹೊಸ ದಾಖಲೆ ಬರೆದರು.

ಇದರ ಜೊತೆಗೆ ಇನ್ನೂ ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡದ ಯುವ ಆಟಗಾರರು ಕೋಟ ಕೋಟ್ಯಧಿಪತಿಗಳಾದರು. ಉತ್ತರ ಪ್ರದೇಶದ ಬ್ಯಾಟರ್ ಸಮೀರ್ ರಿಜ್ವಿ ಅವರನ್ನು 8.40 ಕೋಟಿ ರೂಪಾಯಿ ನೀಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿ ಮಾಡಿತು.

 Kumar Kushagras Dad: Ganguly Vowed DC Bid Up to Rs 10 Crore

ಇನ್ನು ವೇಗದ ಬೌಲರ್ ಯಶ್ ದಯಾಳ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) 5 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತು. ಕುಮಾರ್ ಕುಶಾಗ್ರ ಎನ್ನುವ ವಿಕೆಟ್ ಕೀಪರ್ ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಹಲವು ಫ್ರಾಂಚೈಸಿಗಳು ಭಾರಿ ಪೈಪೋಟಿ ನಡೆಸಿದವು.

ಡೆಲ್ಲಿ ಕ್ಯಾಪಿಟಲ್ಸ್ 7.20 ಕೋಟಿ ರೂಪಾಯಿ ನೀಡಿ ವಿಕೆಟ್-ಕೀಪರ್ ಬ್ಯಾಟರ್ ಕುಮಾರ್ ಕುಶಾಗ್ರಾ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್‌ ಈ ಆಟಗಾರನಿಗೆ ಭಾರಿ ಪೈಪೋಟಿ ನಡೆಸಿದರು ಕೊನೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು.

10 ಕೋಟಿ ರೂ. ನೀಡಲು ಸಿದ್ಧವಾಗಿದ್ದ ಡಿಸಿ

ಕುಮಾರ್ ಕುಶಾಗ್ರ 7.20 ಕೋಟಿ ರೂಪಾಯಿಗೆ ಹರಾಜಾದ ಬಳಿಕ ಮಾತನಾಡಿದ ಅವರ ತಂದೆ, ಡಿಸಿ ಮೆಂಟರ್ ಸೌರವ್ ಗಂಗೂಲಿ ಅವರಿಗೆ ನೀಡಿದ ಭರವಸೆಯ ಬಗ್ಗೆ ಹೇಳಿದ್ದಾರೆ.

"ಈಡನ್ ಗಾರ್ಡನ್ಸ್‌ನಲ್ಲಿನ ಟ್ರಯಲ್‌ ಮಾಡಿದ ನಂತರ, ಗಂಗೂಲಿ ಅವರು ದೆಹಲಿ ಕ್ಯಾಪಿಟಲ್ಸ್‌ಗಾಗಿ ಆಡುವಂತೆ ಕುಶಾಗ್ರಾಗೆ ಹೇಳಿದರು ಮತ್ತು ಫ್ರಾಂಚೈಸಿ ಅವರಿಗೆ 10 ಕೋಟಿ ರೂ.ವರೆಗೆ ಬಿಡ್ ಮಾಡಲಿದೆ" ಎಂದು ಕುಶಾಗ್ರಾ ತಂದೆ ಶಶಿಕಾಂತ್ ಅವರಿಗೆ ಭರವಸೆ ನೀಡಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

"ಟ್ರಯಲ್ಸ್‌ನಲ್ಲಿ, ಗಂಗೂಲಿ ಅವರ ಸಿಕ್ಸ್-ಹೊಡೆಯುವ ಸಾಮರ್ಥ್ಯ ಮತ್ತು ಮೈದಾನದಲ್ಲಿ ಆಡುವ ಸಾಮರ್ಥ್ಯದಿಂದ ಪ್ರಭಾವಿತರಾದರು. ಅವರ ಕೀಪಿಂಗ್ ಕೌಶಲ್ಯವು ಗಂಗೂಲಿಯನ್ನು ಮೆಚ್ಚಿಸಿತು ಮತ್ತು ಅವರು ಬೇಲ್‌ಗಳನ್ನು ಹೊಡೆಯುವಾಗ ಎಂಎಸ್ ಧೋನಿಯಂತೆ ಕಾಣುತ್ತಾರೆ ಎಂದು ಹೇಳಿದರು."

₹ 20 ಲಕ್ಷದ ಮೂಲ ಬೆಲೆಯೊಂದಿಗೆ ಅನ್‌ಕ್ಯಾಪ್ಡ್ ಭಾರತೀಯ ಕುಶಾಗ್ರಾ, ಯುವ ಆಟಗಾರನ ಆಟವನ್ನು ನೋಡಿ ಎಂಎಸ್ ಧೋನಿಯನ್ನು ನೆನಪಿಸಿಕೊಂಡ ಗಂಗೂಲಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸಿದ್ದರು. ಗಂಗೂಲಿ ಅವರ ಭರವಸೆಯ ಹೊರತಾಗಿಯೂ ತನ್ನ ಮಗ ತನ್ನ ಮೂಲ ಬೆಲೆಗೆ ಮಾತ್ರ ಹೋಗಬಹುದು ಎಂದು ಶಶಿಕಾಂತ್ ಭಾವಿಸಿದ್ದರು.

ಹರಾಜಿನ ಮೊತ್ತ ನೋಡಿ ಶಾಕ್

"ಅವರು ಮೂಲ ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆಯಾಗುತ್ತಾರೆ ಎಂದು ನಾನು ಭಾವಿಸಿದೆವು. ಕೆಲವು ನಿಮಿಷಗಳವರೆಗೆ ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಇದು ಪವಾಡದಂತೆ ಅನಿಸಿತು" ಎಂದು ಶಶಿಕಾಂತ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+