Ind vs Eng: ಪಂದ್ಯ ಗೆದ್ದರೂ ಕುಲದೀಪ್ ವಿರುದ್ಧ ಕೋಪಗೊಂಡ ರೋಹಿತ್ ಶರ್ಮಾ

ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ಬಹುತೇಕ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಭಾನುವಾರ ಲಕ್ನೋದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 100 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಜೇಯ ಓಟವನ್ನು ಮುಂದುವರೆಸಿದೆ.

ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದ ಟೀಂ ಇಂಡಿಯಾ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 229 ರನ್ ಗಳಿಸಿದರೂ, ಬಾರಿ ಅಂತರದಲ್ಲಿ ಜಯ ಸಾಧಿಸಿತು. ಶಮಿ, ಬುಮ್ರಾ, ಕುಲದೀಪ್ ಯಾದವ್ ಮತ್ತು ಜಡೇಜಾ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು.

kuldeep-yadav-and-rohit-sharma

ಶಮಿ 4 ವಿಕೆಟ್ ಪಡೆದರೆ, ಬುಮ್ರಾ 3 ವಿಕೆಟ್ ಪಡೆದು ಮಿಂಚಿದರು, ಕುಲದೀಪ್ ಯಾದವ್ 2 ವಿಕೆಟ್ ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದುಕೊಂಡರು. ಕುಲದೀಪ್ ಯಾದವ್ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರನ್ನು ಬೌಲ್ಡ್ ಮಾಡಿದ ಎಸೆತವನ್ನು ಬಾಲ್ ಆಫ್ ದಿ ಟೂರ್ನಮೆಂಟ್ ಎಂದು ಬಿಂಬಿಸಲಾಗಿದೆ.

ರೋಹಿತ್ ಶರ್ಮಾ ಕೋಪಗೊಂಡಿದ್ಯಾಕೆ?

ಮೈದಾನದಲ್ಲಿ ಅಂಪೈರ್ ಗಳು ಕೊಡುವ ನಿರ್ಣಯವನ್ನು ಮೂರನೇ ಅಂಪೈರ್ ಗೆ ಮರುಪರೀಶಲನೆ ಮಾಡಲು ಮನವಿ ಸಲ್ಲಿಸುವ ಅವಕಾಶ ನೀಡಲಾಗಿದೆ. ಇದನ್ನು ಡಿಆರ್ ಎಸ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಈ ಡಿಆರ್ ಎಸ್ ಪಂದ್ಯದ ಫಲಿತಾಂಶವನ್ನೇ ಬದಲಾಯಿಸುತ್ತವೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೂಡ ಕುಲದೀಪ್ ಯಾದವ್ ಡಿಆರ್ ಎಸ್ ಮನವಿ ಸಲ್ಲಿಸದೇ ಇರುವುದು ರೋಹಿತ್ ಶರ್ಮಾ ಅವರ ಕೋಪಕ್ಕೆ ಕಾರಣವಾಯಿತು. ಇನಿಂಗ್ಸ್‌ನ 22 ನೇ ಓವರ್‌ನಲ್ಲಿ, ಲಿಯಾಮ್ ಲಿವಿಂಗ್‌ಸ್ಟೋನ್ ಕುಲದೀಪ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದಿದ್ದರೆ, ಆದರೆ ಮೈದಾನದ ಅಂಪೈರ್ ಔಟ್ ನೀಡಲಿಲ್ಲ, ಕುಲದೀಪ್ ಯಾದವ್ ಕೂಡ ಜೋರಾಗಿ ಮನವಿ ಮಾಡಲೇ ಇಲ್ಲ.

ಈ ಸಂದರ್ಭದಲ್ಲಿ ಭಾರತಕ್ಕೆ ಎರಡು ಡಿಆರ್ ಎಸ್ ಆಯ್ಕೆ ಇದ್ದರೂ ಸುಮ್ಮನಾದರೂ, ನಂತರ ಮರುಪ್ರಸಾರದ ಸಂದರ್ಭದಲ್ಲಿ ಬಾಲ್ ವಿಕೆಟ್‌ಗೆ ಬಡಿಯುತ್ತಿದ್ದದ್ದು ಸ್ಪಷ್ಟವಾಗಿ ತೋರಿಸಿತು, ಕಾಮೆಂಟರಿ ಮಾಡುತ್ತಿದ್ದವರು ಕೂಡ ಕುಲದೀಪ್ ಯಾಕೆ ರಿವ್ಯೂ ತೆಗೆದುಕೊಳ್ಳಲಿಲ್ಲ ಎಂದು ಅಚ್ಚರಿ ಪಟ್ಟರು.

ಓವರ್ ಮುಗಿದ ನಂತರ, ಕುಲದೀಪ್ ರೋಹಿತ್ ಅವರೊಂದಿಗೆ ಮರುಪರಿಶೀಲನೆಯ ನಿರ್ಧಾರದ ಬಗ್ಗೆ ತೀವ್ರ ವಾಗ್ವಾದ ನಡೆಸಿದರು. ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು ಕುಲದೀಪ್ ಮತ್ತು ರೋಹಿತ್ ಅವರ ವಾದದ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಕಾಮೆಂಟೇಟರ್‌ಗಳಲ್ಲಿ ಒಬ್ಬರು ಏನು ಹೇಳಿದ್ದಾರೆಂದು ಸಹ ಹಂಚಿಕೊಂಡಿದ್ದಾರೆ. "ತಂಡವನ್ನು ಆಯ್ಕೆ ಮಾಡುವ ನಾಯಕನೊಂದಿಗೆ ನೀವು ಜಾಗರೂಕರಾಗಿರಬೇಕು" ಎಂದು ಕಾಮೆಂಟೇಟರ್ ಒಬ್ಬರು ಹೇಳುವುದನ್ನು ಕೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+