IPL 2024: ಬೆಂಗಳೂರಿನಲ್ಲಿ ನಡೆಯುವ ಐಪಿಎಲ್‌ ಪಂದ್ಯಗಳಿಗೆ ನೀರಿನ ಕೊರತೆ ಭೀತಿ! ಆರ್‌ಸಿಬಿ ಪಂದ್ಯಗಳ ಸ್ಥಳಾಂತರ?

ಬೆಂಗಳೂರು ಪ್ರಸ್ತುತ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಟ್ಯಾಂಕರ್ ನೀರಿನ ಬೆಲೆ ಗಗನಕ್ಕೇರಿದೆ. ನೀರಿನ ಸಮಸ್ಯೆ ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಮೇಲೂ ಪರಿಣಾಮ ಬೀರಿದೆ. ಐಪಿಎಲ್ 2024ರ ಬೆಂಗಳೂರಿನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆರ್ ಸಿಬಿ ಪಂಜಾಬ್ ಕಿಂಗ್ಸ್‌ ವಿರುದ್ಧ ಸೆಣೆಸಲಿದೆ.

ನಗರದ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಭೆ ಕರೆದಿದೆ. ಐಪಿಎಲ್ ಪಂದ್ಯಕ್ಕಾಗಿ ಪಿಚ್ ಸಿದ್ಧಪಡಿಸಲು ಅಪಾರ ಪ್ರಮಾಣದ ನೀರು ಬೇಕಾಗುತ್ತದೆ. ಇಂತಹ ಭೀಕರ ನೀರಿನ ಸಮಸ್ಯೆ ನಡುವೆ ಎರಡು ವಾರಗಳಲ್ಲಿ ಮೂರು ಪಂದ್ಯಗಳನ್ನು ಆಯೋಜಿಸಲು ನಗರವು ಹೇಗೆ ಸಜ್ಜಾಗುತ್ತದೆ ಎನ್ನುವುದನ್ನು ನೋಡಬೇಕಿದೆ.

KSCA Calls Special Meeting on Bengaluru Water Crisis Ahead of IPL 2024

ಕೆಎಸ್‌ಸಿಎ ಸದಸ್ಯರೊಬ್ಬರು, ಕೆಎಸ್‌ಸಿಎ ಸಭೆಯ ನಂತರ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದು. ಸಭೆಯ ನಂತರ ಮಂಡಳಿಯು ಹೇಳಿಕೆಯನ್ನು ನೀಡಲಿದೆ ಎಂದು ಮೂಲಗಳು ಹೇಳಿರುವುದಾಗಿ ಇನ್ಸೈಡ್‌ಸ್ಪೋರ್ಟ್‌ ವರದಿ ಮಾಡಿದೆ.

ಈ ವಿಷಯದ ಬಗ್ಗೆ ಸಭೆ ನಡೆಸಲಾಗುವುದು. ಅಲ್ಲಿಯವರೆಗೆ, ಆ ವಿಷಯದ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಲಾಗುವುದಿಲ್ಲ ಎಂದು ಕೆಎಸ್‌ಸಿಎ ಮೂಲವು ಇನ್‌ಸೈಡ್‌ಸ್ಪೋರ್ಟ್‌ಗೆ ತಿಳಿಸಿದ್ದು, ಈ ವಿಷಯದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಐಪಿಎಲ್ ಪಂದ್ಯಗಳು ಸ್ಥಳಾಂತರ

ನಗರದ ನೀರಿನ ಸಮಸ್ಯೆ ನಡುವೆ ಐಪಿಎಲ್ ಪಂದ್ಯಗಳ ಸ್ಥಳಾಂತರಕ್ಕೆ ನಾಗರಿಕರು ಒತ್ತಾಯಿಸಿದ್ದಾರೆ. ಹಲವು ನೆಟ್ಟಿಗರು ನಗರದಲ್ಲಿ ನೀರಿನ ಕೊರತೆ ಇದ್ದು, ಐಪಿಎಲ್ ಪಂದ್ಯಗಳನ್ನು ಬೇರೆ ನಗರಕ್ಕೆ ಸ್ಥಳಾಂತಿರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಳೆಯ ಕೊರತೆಯಿಂದಾಗಿ ಬೆಂಗಳೂರು ನೀರಿನ ಬಿಕ್ಕಟ್ಟಿನಲ್ಲಿ ತತ್ತರಿಸಿದೆ. ಕಳೆದ ಕೆಲವು ವಾರಗಳಿಂದ ನಗರದಾದ್ಯಂತ ನೀರಿನ ಟ್ಯಾಂಕರ್‌ಗಳ ಬೇಡಿಕೆ ಬಹುಪಟ್ಟು ಹೆಚ್ಚಾಗಿದೆ.

ನೀರಿನ ಟ್ಯಾಂಕರ್‌ನ ಶುಲ್ಕ ಈ ಹಿಂದೆ 700-800 ರೂ ಆಗಿದ್ದರೆ ಅದು ಈಗ 1500-1800 ರೂ.ಗೆ ಏರಿದೆ. ಮುಂದಿನ ಐದು ತಿಂಗಳಿಗೆ ಬೇಡಿಕೆಯನ್ನು ಪೂರೈಸುವಷ್ಟು ಪೂರೈಕೆ ಇದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಭರವಸೆ ನೀಡಿದ್ದರೂ, ನಗರದ ಜನರಲ್ಲಿ ಭೀತಿ ಆವರಿಸಿದೆ.

ಐಪಿಎಲ್‌ ವೇಳಾಪಟ್ಟಿಯ ಉತ್ತರಾರ್ಧವನ್ನು ಇನ್ನೂ ಪ್ರಕಟಿಸಲಾಗಿಲ್ಲ. ಲೋಕಸಭೆ ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಇಸಿಐ ಘೋಷಿಸಿದ ನಂತರ ಅದನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.

ನೀರಿನ ಮರುಬಳಕೆ ವ್ಯವಸ್ಥೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆನೀರು ಕೊಯ್ಲು ಮತ್ತು ಕೊಳಚೆನೀರಿನ ಸಂಸ್ಕರಣಾ ಘಟಕವನ್ನು ಒಳಗೊಂಡಿರುವ ಸಮಗ್ರ ನೀರಿನ ನಿರ್ವಹಣಾ ವ್ಯವಸ್ಥೆ ಇದೆ. ಮೈದಾನಕ್ಕೆ, ತೋಟಗಾರಿಕೆಗಾಗಿ ಒಳಚರಂಡಿ ನೀರನ್ನು ಮರುಬಳಕೆ ಮಾಡಲಾಗುತ್ತದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಹಯೋಗದೊಂದಿಗೆ ಈ ವ್ಯವಸ್ಥೆ ಮಾಡಲಾಗಿದೆ.

ದಿನಕ್ಕೆ ಸರಾಸರಿ 15,000 ಲೀಟರ್ ನೀರು ಪಂದ್ಯಕ್ಕೆ ಮೈದಾನ ಸಿದ್ಧಪಡಿಸಲು ಬೇಕಾಗುತ್ತದೆ. ಜಲಮಂಡಳಿ, ಬೋರ್‌ವೆಲ್‌ಗಳು ಅಥವಾ ಟ್ಯಾಂಕರ್‌ಗಳನ್ನು ಅವಲಂಬಿಸದ ಕಾರಣ ಕೆಎಸ್‌ಸಿಎ ನೀರಿನ ಮೇಲಿನ ಖರ್ಚು ಶೂನ್ಯವಾಗಿದೆ. ಆದ್ದರಿಂದ ಐಪಿಎಲ್ ಪಂದ್ಯಗಳನ್ನು ಬೇರೆ ನಗರಕ್ಕೆ ಸ್ಥಳಾಂತರಿಸುವ ಯಾವುದೇ ಸಾಧ್ಯತೆ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+