ಏಕದಿನ ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡ ಪ್ರಕಟ: ವಿರಾಟ್ ಕೊಹ್ಲಿ vs ನವೀನ್ ಉಲ್ ಹಕ್ ಮುಖಾಮುಖಿ ಫಿಕ್ಸ್!
ಐಪಿಎಲ್ 2023ರಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ, ವಿರಾಟ್ ಕೊಹ್ಲಿ vs ನವೀನ್ ಉಲ್ ಹಕ್ ನಡುವಿನ ಸಂಘರ್ಷ ಮತ್ತೆ ನಡೆಯಲು ವೇದಿಕೆ ಸಿದ್ಧವಾಗಿದೆ. ಹೌದು, ವಿರಾಟ್ ಕೊಹ್ಲಿ vs ನವೀನ್ ಉಲ್ ಹಕ್ 2.0 ಎನ್‌ಕೌಂಟರ್ ಮುಂಬರುವ ಐಸಿಸಿ ವಿಶ್ವಕಪ್ 2023 ಪಂದ್ಯಾವಳಿಯಲ್ಲಿ ನಡೆಯಲಿದೆ.
ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದ ನವೀನ್ ಉಲ್ ಹಕ್ ಈಗ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲವಾಗಿದ್ದಾರೆ. ಅಫ್ಘಾನಿಸ್ತಾನವು ವಿಶ್ವಕಪ್‌ಗಾಗಿ ತಮ್ಮ 15 ಸದಸ್ಯರ ತಂಡವನ್ನು ಪ್ರಕಟಿಸಿದೆ, ಮಧ್ಯಮ ವೇಗಿ ನವೀನ್ ಉಲ್ ಹಕ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ನವೀನ್ ಉಲ್ ಹಕ್ ಏಷ್ಯಾಕಪ್‌ಗೆ 17 ಸದಸ್ಯರ ತಂಡದಲ್ಲಿ ವಿಫಲರಾಗಿದ್ದಾರು. ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ಬೇರೆ ಗುಂಪಿನಲ್ಲಿದ್ದ ಕಾರಣ ಭಾರತ ಅಫ್ಘಾನಿಸ್ತಾನ ಮುಖಾಮುಖಿಯಾಗಲಿಲ್ಲ. ಅಫ್ಘಾನಿಸ್ತಾನ ತಂಡದಿಂದ ಕೈಬಿಟ್ಟ ನಂತರ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಹಸ್ಯ ಸಂದೇಶವನ್ನು ಪೋಸ್ಟ್ ಮಾಡಿದ್ದರು.

ಅಕ್ಟೋಬರ್ 11ರಂದು ಭಾರತ-ಅಫ್ಘಾನಿಸ್ತಾನ ಮುಖಾಮುಖಿ
ಸೆಪ್ಟೆಂಬರ್ 13 ರಂದು, ಅಫ್ಘಾನಿಸ್ತಾನವು ತಮ್ಮ ವಿಶ್ವಕಪ್ 2023 ತಂಡವನ್ನು ಘೋಷಿಸಿತು, ಇದು 15 ಸದಸ್ಯರ ತಂಡದಲ್ಲಿ ಯುವ ವೇಗಿಯನ್ನು ಸೇರಿಸಿಕೊಂಡಿತು. ಇದು ಮತ್ತೊಮ್ಮೆ ವಿರಾಟ್ ಕೊಹ್ಲಿ ಜೊತೆಗಿನ ಪೈಪೋಟಿಯನ್ನು ನೋಡಲು ಸಾಧ್ಯವಾಗಿಸಿದೆ. ಐಸಿಸಿ ವಿಶ್ವಕಪ್ 2023 ರಲ್ಲಿ ದೆಹಲಿಯಲ್ಲಿ ಅಕ್ಟೋಬರ್ 11 ರಂದು ಭಾರತವು ಅಫ್ಘಾನಿಸ್ತಾನದ ವಿರುದ್ಧ ಆಡಲಿದೆ.
ವಿರಾಟ್ ಕೊಹ್ಲಿ vs ನವೀನ್ ಉಲ್ ಹಕ್
ಐಪಿಎಲ್ 2023 ರಲ್ಲಿ ಆರ್ ಸಿಬಿಯ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ನವೀನ್ ಉಲ್ ಹಕ್ ಮಾತಿನ ಸಮರದಲ್ಲಿ ತೊಡಗಿದ್ದರು. ಇತರ ಆಟಗಾರರ ಮಧ್ಯಸ್ಥಿಕೆಯಿಂದ ಹೋರಾಟವು ಸ್ಥಗಿತಗೊಂಡ ನಂತರ, ಇಬ್ಬರೂ ಸಾಮಾಜಿಕವಾಗಿ ಪೋಸ್ಟ್‌ಗಳ ಮೂಲಕ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿತ್ತು.
ಕೊಹ್ಲಿ ಅಭಿಮಾನಿಗಳು ಇವರಿಬ್ಬರ ನಡುವಿನ ಹೋರಾಟ ನೋಡಲು ಕಾಯುತ್ತಿದ್ದಾರೆ. ಈಗ ವಿಶ್ವಕಪ್‌ನಲ್ಲಿ ಇಬ್ಬರು ಮುಖಾಮುಖಿಯಾಗಲಿದ್ದು, ಭರ್ಜರಿ ಮನರಂಜನೆ ಪಡೆಯಲು ಅಭಿಮಾನಿಗಳು ಸಿದ್ಧವಾಗಿದ್ದಾರೆ.
ಬಲಿಷ್ಠ ತಂಡ ಪ್ರಕಟ
ನವೀನ್ ಉಲ್ ಹಕ್ ಭಾರತದಲ್ಲಿ ವಿಶ್ವಕಪ್‌ಗೆ ಎರಡು ವರ್ಷಗಳ ಅಂತರದ ನಂತರ ಅಫ್ಘಾನಿಸ್ತಾನ ಏಕದಿನ ತಂಡಕ್ಕೆ ಮರಳಿದರು, ಆದರೆ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಹಿರಿಯ ಆಲ್‌ರೌಂಡರ್ ಗುಲ್ಬದಿನ್ ನೈಬ್ ತಂಡದಿಂದ ಹೊರಗುಳಿದಿದ್ದಾರೆ.
ಅಜ್ಮತುಲ್ಲಾ ಒಮರ್ಜಾಯ್ ಅವರು ಗಾಯದಿಂದ ಹಿಂದಿರುಗಿದ್ದಾರೆ, ಗಾಯದ ಕಾರಣ ಅವರು ಏಷ್ಯಾಕಪ್‌ನಲ್ಲಿ ಆಡಿರಲಿಲ್ಲ. 2021 ರಲ್ಲಿ ಕೊನೆಯ ಬಾರಿಗೆ ಲಿಸ್ಟ್ ಎ ಪಂದ್ಯವನ್ನು ಆಡಿದ ನವೀನ್ ಕೂಡ ತಂಡಕ್ಕೆ ಮರಳಿದ್ದಾರೆ. ನವೀನ್ ಇಲ್ಲಿಯವರೆಗೆ ಕೇವಲ ಏಳು ಏಕದಿನ ಪಂದ್ಯಗಳನ್ನು ಆಡಿದ್ದು, 25.42 ಸರಾಸರಿಯಲ್ಲಿ 14 ವಿಕೆಟ್ ಪಡೆದಿದ್ದಾರೆ.
ಅಫ್ಘಾನಿಸ್ತಾನ ವಿಶ್ವಕಪ್ ತಂಡ
ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಶಾ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹಮದ್, ನವೀನ್ ಉಲ್ ಹಕ್, ಫಜಲಕ್ ಫಾರೂಕಿ, ಅಬ್ದುಲ್ ರಹಮಾನ್.












Click it and Unblock the Notifications