KL Rahul: ಆರ್‌ಸಿಬಿ ಅಖಾಡಕ್ಕೆ ಕೆ.ಎಲ್. ರಾಹುಲ್ ಎಂಟ್ರಿ, ಬೆಂಗಳೂರು ತಂಡದ ಅಭಿಮಾನಿಗಳು...

ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಕನ್ನಡ ಕ್ರಿಕೆಟ್ ಅಭಿಮಾನಿಗಳ ರಕ್ತದ ಕಣ ಕಣದಲ್ಲೂ 'ಆರ್‌ಸಿಬಿ' ಅನ್ನೋ ಹೆಸರು ರಾರಾಜಿಸುತ್ತಾ ಇದೆ. ಆರ್‌ಸಿಬಿ ತಂಡವನ್ನು ಕ್ರಿಕೆಟ್ ಟೀಂ ಅನ್ನೋದಕ್ಕಿಂತ ಹೆಚ್ಚಾಗಿ, ಮನೆಯ ಸದಸ್ಯನ ರೀತಿ ಕೋಟಿ ಕೋಟಿ ಅಭಿಮಾನಿಗಳು ಇಷ್ಟಪಡುತ್ತಾರೆ. ಹೀಗಿದ್ದಾಗಲೇ, ಕನ್ನಡಿಗ ಕೆ.ಎಲ್. ರಾಹುಲ್‌ಗೆ ಲಖನೌ ಟೀಂನ ಮಾಲೀಕರು ಅವಮಾನ ಮಾಡಿದ್ದಾರೆ ಎಂಬ ಆರೋಪ ಭುಗಿಲೆದ್ದು ಕನ್ನಡಿಗರು ರೊಚ್ಚಿಗೆದ್ದಿದ್ದರು.

ಕನ್ನಡಿಗ ಕೆ.ಎಲ್. ರಾಹುಲ್ ಒಬ್ಬ ಅದ್ಭುತ ಆಟಗಾರ... ಆದರೆ ಇಂತಹ ಆಟಗಾರನ ಸಣ್ಣ ತಪ್ಪಿಗೆ ಲಖನೌ ತಂಡದ ಮಾಲೀಕರು ಅವಮಾನ ಮಾಡುವ ಹಂತಕ್ಕೆ ಬಂದಿದ್ದರು, ಎಂಬ ಆಕ್ರೋಶ ಕನ್ನಡಿಗರದ್ದಾಗಿತ್ತು. ಈಗಾಗಲೇ ಲಖನೌ ತಂಡ ಬಿಟ್ಟು ಹೊರ ಬಂದಿರುವ ನಮ್ಮ ಕನ್ನಡಿಗ ಕೆ.ಎಲ್. ರಾಹುಲ್ ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದ್ರೆ ನಮ್ಮ ಆರ್‌ಸಿಬಿ ಸೇರಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಇಂತಹ ಸಮಯದಲ್ಲೇ ಕೋಟಿ ಕೋಟಿ ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿಗಳ ಆಸೆ ಫಲಿಸಿದೆ!

KL Rahul Said This About His Entry To RCB Team Before The IPL Auction 2025

ಕೆ.ಎಲ್. ರಾಹುಲ್ ಆರ್‌ಸಿಬಿ ತಂಡಕ್ಕೆ...

ಬೆಂಗಳೂರು ಹುಡುಗ ಕೆ.ಎಲ್. ರಾಹುಲ್ ಅವರು ಬೆಂಗಳೂರು ತಂಡದಲ್ಲೇ ಆಡಬೇಕಾಗಿದೆ ಎಂಬುದು ಸಪ್ತಕೋಟಿ ಕನ್ನಡಿಗರ ಆಸೆ. ಆದರೆ ಅದು ಸಾಧ್ಯವೇ ಆಗಿರಲ್ಲಿ, ಹೀಗಾಗಿ ನಮ್ಮ ಆರ್‌ಸಿಬಿ ತಂಡದ ಅಭಿಮಾನಿಗಳು ಸಾಕಷ್ಟು ನೋವಿನಲ್ಲಿ ಇದ್ದರು. ಆದರೆ ಇದೀಗ ಆ ಆಸೆ ಈಡೇರುವ ಸಮಯ ಬಂದೇ ಬಿಟ್ಟಿದೆ, ಕೆ.ಎಲ್. ರಾಹುಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಟ ಆಡಲು....

ಕೆ.ಎಲ್. ರಾಹುಲ್ ಬೆಂಗಳೂರಿಗೆ ಬಾ ಗುರೂ!

ಹೌದು, ಆಸ್ಟ್ರೇಲಿಯಾ & ಭಾರತ ತಂಡದ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಮ್ಯಾಚ್ ಸಮಯದಲ್ಲಿ ಕೆ.ಎಲ್. ರಾಹುಲ್ ಫೀಲ್ಡಿಂಗ್ ಮಾಡುತ್ತಿದ್ದರು. ಈ ಸಮಯದಲ್ಲಿ ಕೆ.ಎಲ್. ರಾಹುಲ್ ಅವರನ್ನು ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಆರ್‌ಸಿಬಿಗೆ ಬರುವಂತೆ ಮನವಿ ಮಾಡಿದ್ದಾರೆ.

ರಾಹುಲ್ ಆರ್‌ಸಿಬಿಗೆ ಬಾ ಗುರೂ, ಅಂತಾ ಮನವಿ ಮಾಡಿದ್ದಾರೆ ಕರ್ನಾಟಕ ಕ್ರಿಕೆಟ್ ಅಭಿಮಾನಿ ಒಬ್ಬರು. ಆಗಲೇ ಕೆ.ಎಲ್. ರಾಹುಲ್ ಅವರು.. ದೇವರ ಆಶೀರ್ವಾದ ಇದ್ರೆ ಎಲ್ಲಾ ಆಗುತ್ತೆ ಅಂದಿದ್ದಾರೆ. ಈ ಮೂಲಕ ಕೆ.ಎಲ್. ರಾಹುಲ್, ಆರ್‌ಸಿಬಿ ಬೆಂಗಳೂರು ಟೀಂಗೆ ಬರೋದು ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು, ಯಾಕಂದ್ರೆ, ದೇವರ ಆಶೀರ್ವಾದ ಸದಾ ಆರ್‌ಸಿಬಿ ಬೆಂಗಳೂರು ತಂಡ & ಕೆ.ಎಲ್. ರಾಹುಲ್‌ರ ಮೇಲೆ ಇದ್ದೇ ಇರುತ್ತೆ ಅಂತಿದ್ದಾರೆ ಬೆಂಗಳೂರು ಫ್ಯಾನ್ಸ್.

534 ರನ್ ಗಳಿಸಬೇಕಿದೆ ಆಸ್ಟ್ರೇಲಿಯಾ!

ಹೌದು.. ಆಸ್ಟ್ರೇಲಿಯಾ & ಭಾರತ ತಂಡದ ನಡುವೆ ಮಹತ್ವದ ಟೆಸ್ಟ್ ಸರಣಿ ಆರಂಭವಾಗಿ ಇಂದಿಗೆ 3 ದಿನ. ಆಸ್ಟ್ರೇಲಿಯಾ & ಭಾರತ ಮೊದಲ ಟೆಸ್ಟ್ ಆರಂಭವಾದ ಮೊದಲ ದಿನವೇ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಯಾಕಂದ್ರೆ 150 ರನ್‌ಗೆ ಭಾರತ ತಂಡ ಆಲೌಟ್ ಆಗಿತ್ತು.

ಆದರೆ ಭಾರತ ತಂಡ ಮತ್ತೆ ಕಂಬ್ಯಾಕ್ ಮಾಡಿ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು 104 ರನ್‌ಗಳಿಗೆ ಆಲೌಟ್ ಮಾಡಿತ್ತು. ಈ ಮೂಲಕ 2ನೇ ಇನ್ನಿಂಗ್ಸ್‌ನಲ್ಲಿ ನಮ್ಮ ಭಾರತ ತಂಡ 487 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ಈ ಸಮಯದಲ್ಲಿ ಗೆಲುವಿಗಾಗಿ 534 ರನ್ ಗಳಿಸಬೇಕಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+