KL Rahul: ಆ ಘಟನೆ ನನ್ನನ್ನು ಭಯ ಬೀಳಿಸಿತ್ತು; ಅಂದಿನಿಂದ ನಾನು ಬದಲಾದೆ ಎಂದ ಕೆಎಲ್ ರಾಹುಲ್
ಕನ್ನಡಿಗ ಕೆಎಲ್ ರಾಹುಲ್ ನಿವೃತ್ತಿ ಘೋಷಣೆ ಮಾಡಿದ್ದಾರೆ ಎನ್ನುವ ಸುದ್ದಿಯೊಂದು ಸಾಕಷ್ಟು ಸದ್ದು ಮಾಡಿತ್ತು. ಆದರೆ ಅದು ಸುಳ್ಳು ಎಂದು ಬಳಿಕ ಅರಿವಾಗಿದೆ. ಇದೆಲ್ಲದರ ಮಧ್ಯೆಯೇ ಕೆಎಲ್ ರಾಹುಲ್ ತಾವು ಜೀವನದಲ್ಲಿ ಅತಿಯಾಗಿ ಹೆದರಿಕೊಂಡಿದ್ದ ಘಟನೆ ಬಗ್ಗೆ ಮಾತನಾಡಿದ್ದಾರೆ. ನಿಖಿಲ್ ಕಾಮತ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಎಲ್ ರಾಹುಲ್ ತಮ್ಮ ಹಳೆಯ ವಿವಾದವೊಂದರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಆಗ ತಾನು ಸಾಕಷ್ಟು ಹೆದರಿಕೊಂಡಿದ್ದೆ ಎಂದಿದ್ದಾರೆ.
ನಿಖಿಲ್ ಕಾಮತ್ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ನಡೆಸಿಕೊಡುವ ಡಬ್ಲ್ಯುಟಿಎಫ್ ಕಾರ್ಯಕ್ರಮದಲ್ಲಿ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಜೊತೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಆದ ವಿವಾದದ ಬಗ್ಗೆ ಹೇಳಿಕೊಂಡಿದ್ದಾರೆ. ಮಹಿಳೆಯರ ಬಗ್ಗೆ ಕೆಟ್ಟ ಕಾಮೆಂಟ್ ಮಾಡುವ ಮೂಲಕ ಇಬ್ಬರು ಕ್ರಿಕೆಟಿಗರು ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು.

ಅದು ನನ್ನನ್ನು ಬದಲಾಯಿಸಿತು
ಸಂದರ್ಶನ ಎನ್ನುವುದು ವಿಭಿನ್ನ ಜಗತ್ತು, ಅದು ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿತು. ನಾನು ನಾಚಿಕೆ ಮತ್ತು ಮೃದು ಸ್ವಭಾವದ ಹುಡುಗನಾಗಿದ್ದೆ. ಬಳಿಕ ನಾನು ಭಾರತ ತಂಡಕ್ಕಾಗಿ ಆಡಿದೆ, ಆ ಬಳಿಕ ತುಂಬಾ ನಡೆಯಿತು, ನನ್ನಲ್ಲಿ ಹೆಚ್ಚು ಆತ್ಮ ವಿಶ್ವಾಸ ಬಂದಿತು, ನಾನು ಎಲ್ಲರ ಜೊತೆ ಆತ್ಮವಿಶ್ವಾಸದಿಂದ ಮಾತನಾಡುತ್ತಾನೆ ಎಂದಿದ್ದಾರೆ.
ಕಾಫಿ ವಿತ್ ಕರಣ್ ಸಂದರ್ಶನ ನನ್ನ ಮೇಲೆ ಭಾರಿ ಪ್ರಭಾವ ಬೀರಿತು. ತಂಡದಿಂದ ನನ್ನನ್ನು ಅಮಾನತುಗೊಳಿಸಲಾಯಿತು. ನಾನು ಶಾಲೆಯಲ್ಲಿ ಎಂದಿಗೂ ಅಮಾನತುಗೊಂಡಿಲ್ಲ, ಶಾಲೆಯಲ್ಲಿ ನನ್ನನ್ನು ಎಂದಿಗೂ ಶಿಕ್ಷೆ ಕೊಟ್ಟಿಲ್ಲ. ಇದೆಲ್ಲಾ ನನಗೆ ಎಂದಿಗೂ ಆಗಿರಲಿಲ್ಲ, ನಾನು ಸಣ್ಣ ಪುಟ್ಟ ಚೇಷ್ಠೆಗಳನ್ನು ಮಾಡಿದ್ದೇನೆ, ಆದರೆ ಶಾಲೆಯಿಂದ ಎಂದಿಗೂ ನನ್ನನ್ನು ಹೊರಹಾಕಿಲ್ಲ, ಪೋಷಕರು ಕೂಡ ನನ್ನನ್ನು ಬೈಯಲಿಲ್ಲ, ಆದರೆ ಅದೊಂದು ಸಂದರ್ಶನ ಸಾಕಷ್ಟು ಕೆಟ್ಟ ಅನುಭವವಾಗಿತ್ತು ಎಂದಿದ್ದಾರೆ.
ಏನಿದು ವಿವಾದ?
2019 ರಲ್ಲಿ ಕರಣ್ ಜೋಹರ್ ನಡೆಸಿಕೊಡುವ ಕಾರ್ಯಕ್ರಮದ ಆರನೇ ಸೀಸನ್‌ನಲ್ಲಿ ಅವರ ಕಾಫಿ ವಿತ್ ಕರಣ್ ಸಂಚಿಕೆಯ ನಂತರ, ಕ್ರಿಕೆಟಿಗರು ಮಾಡಿದ ಕೆಲವು ಕಾಮೆಂಟ್‌ಗಳನ್ನುಅಶ್ಲೀಲ ಎಂದು ಟೀಕಿಸಲಾಗಿತ್ತು. ಭಾರಿ ವಿವಾದದ ನಂತರ ಇಬ್ಬರು ಕೂಡ ಕ್ಷಮೆ ಕೇಳಿದ್ದರೂ, ಬಿಸಿಸಿಐ ಇಬ್ಬರನ್ನು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಅಮಾನತು ಮಾಡಿತ್ತು.
ಕಾಫಿ ವಿತ್ ಕರಣ್ ವಿವಾದ ನನ್ನನ್ನು ಜಾಸ್ತಿ ಕಾಡಿದೆ ಅದು ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿತು, ಅದನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿದಿರಲಿಲ್ಲ ಎಂದು ಕೆಎಲ್ ರಾಹುಲ್ ಹೇಳಿದರು.












Click it and Unblock the Notifications