KL Rahul: ಮರ್ಯಾದೆ ಇಲ್ದೆ ಇರೋವಲ್ಲಿ ಏಕೆ ಇರ್ತಿರಾ? ಆರ್‌ಸಿಬಿಗೆ ಬನ್ನಿ ರೆಡ್‌ ಕಾರ್ಪೆಟ್‌ ಹಾಕ್ತೀವಿ

ಹೈದರಾಬಾದ್‌ ಅಂಗಳದಲ್ಲಿ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ, ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಗರಂ ಆದರು. ಅಲ್ಲದೆ ಸೋತು ಕಂಗಾಲಾಗಿದ್ದ ತಂಡದ ನಾಯಕ ಕೆಎಲ್ ರಾಹುಲ್ ವಿರುದ್ಧ ತಮ್ಮ ಸಿಟ್ಟು ಹೊರ ಹಾಕಿದ್ದಾರೆ. ಈ ವಿಡಿಯೋ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಕೆಎಲ್ ರಾಹುಲ್ ಜೊತೆ ಸಂಜೀವ್ ಗೋಯೆಂಕಾ ತುಂಬಾ ಕೋಪದಿಂದ ಮಾತನಾಡುತ್ತಿರುವುದನ್ನು ಕಾಣಬಹುದು. ಹೈದರಾಬಾದ್ ವಿರುದ್ಧ ಲಕ್ನೋ ಬೌಲಿಂಗ್ ತುಂಬಾ ಕಳಪೆಯಾಗಿತ್ತು. ತಂಡದ ಈ ಕಳಪೆ ಪ್ರದರ್ಶನದಿಂದಾಗಿ ಸಂಜೀವ್ ಗೊಯೆಂಕಾ ತುಂಬಾ ಕೋಪಗೊಂಡಿದ್ದರು. ಪಂದ್ಯದ ನಂತರ ಗೋಯೆಂಕಾ ರಾಹುಲ್ ಜೊತೆ ಸಿಟ್ಟಿನಿಂದ ಮಾತನಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಕೆ.ಎಲ್‌ ರಾಹುಲ್ ಫ್ಯಾನ್ಸ್‌ ಫುಲ್‌ ಗರಂ ಆಗಿದ್ದಾರೆ.

KL Rahul If You Don t Have respect in LSG Then please come to rcb Says Fans

ಅಭಿಮಾನಿಗಳು ಗರಂ

ಕೆಎಲ್‌ ರಾಹುಲ್‌ ಒಬ್ಬ ಪ್ರತಿಭಾನ್ವಿತ ಆಟಗಾರ. ಎಲ್ಲ ಆಟಗಾರರ ಪ್ರದರ್ಶನದಲ್ಲೂ ಏಳು ಬೀಳುಗಳು ಇರುವುದು ಸಹಜ. ಪಂದ್ಯ ಸೋತ ಮೇಲೆ ಫ್ರಾಂಚೈಸಿ ಹೀಗೆ ತಮ್ಮ ಸಿಟ್ಟನ್ನು ಹೊರ ಹಾಕಿದ್ದು ಸರಿಯಲ್ಲ ಎಂದು ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಅಲ್ಲದೆ ಮರ್ಯಾದೆ ಇಲ್ಲದೆ ಇರುವಲ್ಲಿ ಏಕೆ ಇರ್ತಿರಾ ಎಂದು ಸಲಹೆಯನ್ನು ನೀಡುತ್ತಿದ್ದಾರೆ.

ಹೇಗಿದೆ ರಾಹುಲ್ ಪ್ರದರ್ಶನನ

ಪ್ರಸಕ್ತ ಐಪಿಎಲ್‌ನಲ್ಲಿ ಲಖ್ನೋ ಸೂಪರ್‌ ಜೆಂಟ್ಸ್‌ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿದೆ. ಆಡಿದ 12 ಪಂದ್ಯಗಳಲ್ಲಿ 12 ಅಂಕವನ್ನು ಕಲೆ ಹಾಕಿರುವ ಎಲ್‌ಎಸ್‌ಜಿ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕೆಎಲ್‌ ರಾಹುಲ್ ಪ್ರಸಕ್ತ ಐಪಿಎಲ್‌ನಲ್ಲಿ 460 ರನ್‌ ಬಾರಿಸಿ ಅಬ್ಬರಿಸಿದ್ದಾರೆ. ಆದರೆ ಅವರ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದೆ.

ಅಲ್ಲಿ ಏಕೆ ಇದ್ದೀರಾ?

ಆರ್‌ಸಿಬಿ ಅಭಿಮಾನಿಗಳಂತೂ ಒಂದು ಹೆಜ್ಜೆ ಮುಂದೆ ಇಟ್ಟು ಇನ್ನು ಅಲ್ಲೆ ಏಕೆ ಇದ್ದೀರಾ, ತವರಿನ ತಂಡಕ್ಕೆ ಬನ್ನಿ ನಿಮ್ಮನ್ನು ರೆಡ್‌ ಕಾರ್ಪೆಟ್ ಹಾಕಿ ಬರ ಮಾಡಿಕೊಳ್ತೇವಿ ಎಂದು ಸಲಹೆ ನೀಡಿದ್ದಾರೆ.

KL Rahul If You Don t Have respect in LSG Then please come to rcb Says Fans

ರಾಹುಲ್‌ ಸಹ ಆರ್‌ಸಿಬಿ ಪರ ತನಗೆ ಆಡಲು ಇಷ್ಟ ಎಂದು, ಇತ್ತೀಚಿಗೆ ಆರ್‌.ಅಶ್ವಿನ್‌ ಜೊತೆ ಮಾತನಾಡುತ್ತಾ ಹೇಳಿದ್ದರು. ಅಲ್ಲದೆ ರಾಹುಲ್‌ ಆರ್‌ಸಿಬಿಗೆ ಹೇಗೆ ಸೆಲೆಕ್ಟ್‌ ಆಗಿದ್ದರು ಎಂದು ಸಹ ಹೇಳಿದ್ದರು. ಇಷ್ಟೇ ಆದ ಮೇಲೆ ಈ ಘಟನೆ ಬೆಳಕಿಗೆ ಬಂದಿದ್ದು, ಅಭಿಮಾನಿಗಳು ಆರ್‌ಸಿಬಿಗೆ ಬನ್ನಿ ಎಂದು ಸಲಹೆ ನೀಡ್ತಾ ಇದ್ದಾರೆ.

ರಾಹುಲ್‌ ಆರ್‌ಸಿಬಿಗೆ ಬಂದರೆ ಏನು ಲಾಭ?

ಕೆಎಲ್‌ ರಾಹುಲ್ ಆರ್‌ಸಿಬಿ ತಂಡವನ್ನು ಸೇರಿದರೆ ಆನೆ ಬಲ ಬರುವುದು ಗ್ಯಾರಂಟಿ. ಅವರು ವಿಕೆಟ್‌ ಹಿಂದೆ ಹಾಗೂ ಟಾಪ್‌ ಆರ್ಡರ್‌ನಲ್ಲಿ ತಂಡಕ್ಕೆ ಆಧಾರವಾಗಬಲ್ಲ ಆಟಗಾರ. ಅಲ್ಲದೆ ಎದುರಾಳಿ ಬೌಲರ್‌ಗಳ ರಣ ತಂತ್ರವನ್ನು ಬೇಧಿಸಿ ರನ್‌ ಮಹಲ್‌ ಕಟ್ಟಬಲ್ಲ ಪ್ಲೇಯರ್‌. ರನ್‌ ರೇಟ್‌ ಸ್ಥಿರವಾಗಿ ಕಾಯ್ದುಕೊಂಡು ಆಡಬಲ್ಲ ಆಟಗಾರ. ಇಂತಹ ಒಬ್ಬ ಪ್ಲೇಯರ್‌ ಆರ್‌ಸಿಬಿ ತಂಡಕ್ಕೆ ಅವಶ್ಯಕತೆ ಇದೆ.

KL Rahul If You Don t Have respect in LSG Then please come to rcb Says Fans

ಕೆ.ಎಲ್‌ ರಾಹುಲ್ ಒಬ್ಬ ಪ್ರತಿಭಾನ್ವಿನ ಆಟಗಾರ ಅಷ್ಟೇ ಅಲ್ಲ, ಬೆಸ್ಟ್‌ ಕ್ಯಾಪ್ಟನ್ ಸಹ ಹೌದು. ಫಾಫ್‌ ಡುಪ್ಲೇಸಿಸ್ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಒಂದು ವೇಳೆ ರಾಹುಲ್‌ ಆರ್‌ಸಿಬಿಗೆ ಎಂಟ್ರಿ ಆದ್ರೆ ನಾಯಕತ್ವ ಸಹ ಸಿಗುವ ಚಾನ್ಸ್‌ ಇದೆ. ಅದಕ್ಕೆ ಫ್ಯಾನ್ಸ್‌ ಅಲ್ಲಿ ಏಕೆ ಇರ್ತಿರಾ ಇಲ್ಲಿ ಬನ್ನಿ ಅಂತಾ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+