100 ರನ್ ಬಾರಿಸಿದ ಕನ್ನಡಿಗ ಕೆ.ಎಲ್. ರಾಹುಲ್ ಅಬ್ಬರ, ಲಾರ್ಡ್ಸ್ ಅಂಗಳದಲ್ಲಿ ಹೊಸ ಇತಿಹಾಸ! KL Rahul
ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಧೂಳ್ ಧೂಳ್ ಎಬ್ಬಿಸುತ್ತಿದ್ದು, ಭಾರತ ಕ್ರಿಕೆಟ್ ತಂಡದ ಬಗ್ಗೆ ಗೇಲಿ ಮಾಡಿದ್ದ ಆಂಗ್ಲರ ತಂಡಕ್ಕೆ ವಡೆ ತಿನ್ನಿಸುವ ಕಾರ್ಯಕ್ರಮ ಮುಂದುವರಿದಿದೆ. ಅದರಲ್ಲೂ ಇನ್ನಿಂಗ್ಸ್ ಹಿನ್ನಡೆ ಭಯದಲ್ಲಿ ಇಂಗ್ಲೆಂಡ್ ತಂಡ ನಲುಗಿ ಹೋಗಿರುವ ಸಮಯದಲ್ಲೇ ಭಾರತ ತಂಡದ ಪ್ರತಿಯೊಬ್ಬ ಆಟಗಾರ ಕೂಡ ಅದ್ಭುತವಾಗಿ ಆಟ ಆಡುತ್ತಿದ್ದಾರೆ. ಅದರಲ್ಲೂ ಕನ್ನಡ ಕೆ.ಎಲ್. ರಾಹುಲ್ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಹೊಸ ಇತಿಹಾಸವನ್ನೇ ಬರೆದಿದ್ದಾರೆ!
ಹೌದು, ಭಾರತ & ಇಂಗ್ಲೆಂಡ್ ನಡುವೆ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯ ಈಗ ರೋಚಕ ಹಂತ ತಲುಪಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತು ಹೋಗಿದ್ದ ಭಾರತ ತಂಡ, ನಂತರ 2ನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ಪಡೆಗೆ ಸರಿಯಾಗಿ ತಿರುಗೇಟು ನೀಡಿತ್ತು. ಈ ಮೂಲಕ 2ನೇ ಟೆಸ್ಟ್ ಪಂದ್ಯ ಗೆದ್ದು ಬೀಗಿದ್ದ ಭಾರತ ತಂಡ ಭರ್ಜರಿ ಸೌಂಡ್ ಮಾಡಿತ್ತು. ಹೀಗಿದ್ದಾಗ 3ನೇ ಟೆಸ್ಟ್ ಪಂದ್ಯದಲ್ಲೂ ಭಾರತದ ಹುಲಿಗಳ ಅಬ್ಬರ ಜೋರು ಜೋರಾಗಿದ್ದು, ಕನ್ನಡಿಗ ಕೆ.ಎಲ್. ರಾಹುಲ್ ಕೂಡ ಇಂಗ್ಲೆಂಡ್ ತಂಡಕ್ಕೆ ಸರಿಯಾಗಿ ತಿರುಗೇಟು ನೀಡ್ತಾ ಇದ್ದಾರೆ. ಅದರಲ್ಲೂ ಕೆ.ಎಲ್. ರಾಹುಲ್ ಅವರು ಇದೀಗ ಹೊಸ ಇತಿಹಾಸವನ್ನೇ ರಚಿಸಿದ್ದಾರೆ.

387 ರನ್ ಗುರಿ ಬೆನ್ನು ಹತ್ತಿದ್ದ ಭಾರತ
3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್ ಗಳಿಸಿ ಆಲೌಟ್ ಆಗಿದ್ದ ಇಂಗ್ಲೆಂಡ್ ತಂಡಕ್ಕೆ ಈಗ ಸಾಲು ಸಾಲು ಶಾಕ್ ಸಿಗುತ್ತಿದೆ. ಅಷ್ಟಕ್ಕೂ 387 ರನ್ ಗುರಿ ಬೆನ್ನು ಹತ್ತಿದ್ದ ಭಾರತ ತಂಡ ಈಗಾಗಲೇ ತನ್ನ ಗುರಿಯನ್ನ ತಲುಪಿದ್ದು, ಇಂಗ್ಲೆಂಡ್ ತಂಡಕ್ಕೆ ನಡುಕ ಶುರುವಾಗಿದೆ. ಇದೇ ಸಮಯದಲ್ಲಿ ಭಾರತ ತಂಡ ಇಷ್ಟು ಉತ್ತಮ ಸ್ಥಿತಿಗೆ ತಲುಪುವಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗೆ, ಇಂಗ್ಲೆಂಡ್ ತಂಡದ ಬೌಲಿಂಗ್ ಪಡೆಯನ್ನ ಕೆ.ಎಲ್. ರಾಹುಲ್ ಹಿಗ್ಗಾಮುಗ್ಗಾ ಥಳಿಸುವ ಮೂಲಕ ಕ್ರಿಕೆಟ್ ಕಾಶಿಯಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
100 ರನ್ ಬಾರಿಸಿದ ಕನ್ನಡಿಗ ರಾಹುಲ್
ಅಂದಹಾಗೆ ಭಾರತ ತಂಡ ಕೇವಲ 107 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಒದ್ದಾಡಿ ಹೋಗಿತ್ತು. ಇದೇ ಸಮಯದಲ್ಲಿ ಕೆ.ಎಲ್. ರಾಹುಲ್ ಮತ್ತು ರಿಷಬ್ ಪಂತ್ ಅತ್ಯುತ್ತಮವಾಗಿ ಆಟ ಆಡಿ, ಭಾರತ ತಂಡಕ್ಕೆ ಎದುರಾಗಿದ್ದ ಅಪಾಯ ತಪ್ಪಿಸಿದರು. ಒಂದು ಕಡೆ ರಿಷಬ್ ಪಂತ್ 8 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ ಭರ್ಜರಿ 74 ರನ್ ಗಳಿಸಿದರೆ, ಮತ್ತೊಂದು ಕಡೆ 177 ಬಾಲ್ ಆಡಿ 13 ಬೌಂಡರಿ ಬಾರಿಸಿ ತಾಳ್ಮೆಯಿಂದಲೇ ಆಟ ಆಡಿದ ಕೆ.ಎಲ್. ರಾಹುಲ್ ಬರೋಬ್ಬರಿ 100 ರನ್ ಬಾರಿಸಿದರು. ಈ ಮೂಲಕ ಲಾರ್ಡ್ಸ್ ಮೈದಾನ ಪೂರ್ತಿ ಎದ್ದು ನಿಂತು ಕೆ.ಎಲ್. ರಾಹುಲ್ ಅವರಿಗೆ ಚಪ್ಪಾಳೆ ತಟ್ಟಿತು. ಆದರೆ ಇದೇ ಸಮಯದಲ್ಲಿ ಅವರು ಔಟ್ ಆಗಿ ಪೆವಿಲಿಯನ್ ಸೇರಿದರು.












Click it and Unblock the Notifications