IPL Champion: ಶ್ರೇಯಸ್‌, ಗಂಭೀರ್ ಅಲ್ಲ: KKR ಚಾಂಪಿಯನ್‌ ಆಗಲು ಇವರೇ ಕಿಂಗ್‌ ಮೇಕರ್‌

ಕೋಲ್ಕತ್ತಾ ನೈಟ್‌ ರೈಡರ್ಸ್‌ ಐಪಿಎಲ್‌ 2024ರ ನೂತನ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ. ಈ ತಂಡದ ಸಂಘಟಿತ ಆಟವೇ ಕೆಕೆಆರ್‌ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದೆ. ಕೋಲ್ಕತ್ತಾ ಗೆಲುವಿನಲ್ಲಿ ಆಟಗಾರರ ಶ್ರಮ ಎಷ್ಟು ಮುಖ್ಯವೋ, ಅಷ್ಟೇ ಬೇರೆ ಸಹಾಯಕ ಸಿಬ್ಬಂದಿಗಳ ಪಾತ್ರವೂ ತುಂಬ ಮುಖ್ಯ. ಈ ಬಾರಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿರುವ ಶ್ರೇಯಸ್‌ ಅಯ್ಯರ್‌ ತಂಡದಲ್ಲೂ ಇಂತಹದ್ದೇ ಒಬ್ಬ ತೆರೆ ಮರೆಯ ಹಿರೋ ಇದ್ದಾರೆ.

ಈ ಪ್ಲೇಯರ್‌ ಸದ್ಯ ಡಕೌಟ್‌ನಲ್ಲಿ ಕುಳಿತು ರಣ ತಂತ್ರವನ್ನು ರೂಪಿಸುವಲ್ಲಿ ನಿಪುಣರು. ಕೆಕೆಆರ್‌ ಕಾಂಬಿನೇಷನ್‌ ಉತ್ತಮವಾಗಿ ಕಾಣಿಸಿಕೊಳ್ಳಲು ಈ ಪ್ಲೇಯರ್‌ ಕೊಡುಗೆ ಸಹ ಬಹುಮುಖ್ಯ. ಐಪಿಎಲ್‌ ಹರಾಜಿನಿಂದ ಹಿಡಿದು, ಮೈದಾನದಲ್ಲಿ ಆಟಗಾರರು ಹೇಗೆ ಆಡಬೇಕು ಎಂಬುವುದರ ವರೆಗೆ ಎಲ್ಲವನ್ನೂ ಇವರ ಅಣತಿಯಂತೆ ನಡೆಯುತ್ತದೆ. ಅವರೇ ಕೋಲ್ಕತ್ತಾ ತಂಡದ ಕೋಚ್‌..

KKR Clinches IPL 2024 Trophy with Abhishek Nair s Significant Contribution as Assistant Coach

ಕೆಕೆಆರ್‌ ಕಿಂಗ್‌ ಮೇಕರ್‌ ಯಾರು?

ಕೋಲ್ಕತ್ತಾ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಿದ್ದಂತೆ ಇದರ ಕೋಚ್‌ ಯಾರು? ಅವರ ಸಾಧನೆ ಎಂಬ ಬಗ್ಗೆ ಹುಡುಕಾಟ ಜೋರಾಗಿದೆ. ಅಸಲಿಗೆ ಕೆಕೆಆರ್‌ ತಂಡವನ್ನು ಅಭಿಷೇಕ್‌ ನಯ್ಯರ್‌ ಎಂಬ ನುರಿತ ಕೋಚ್‌. ಇವರ ತಂತ್ರವನ್ನು ಹೆಣೆದುವರಿಂದ ಹಿಡಿದು ಆಟಗಾರರನ್ನು ಹುಡುಕಿ ತಂಡದಲ್ಲಿ ಸೇರಿಸಿಕೊಳ್ಳುವವರೆಗೂ ಇವರೇ ಮುಖ್ಯ.

ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಕೋಲ್ಕತ್ತಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಭಿಷೇಕ್ ನಾಯರ್ ಎಂದಿಗೂ ಕೆಕೆಆರ್‌ನ ಮುಂಭಾಗದಲ್ಲಿ ಎಂದು ಕಾಣಿಸಿಕೊಂಡವರಲ್ಲ. ಆದರೆ ಅವರು ಈ ತಂಡವನ್ನು ಸಿದ್ಧಪಡಿಸಿದ ರೀತಿ ಶ್ಲಾಘನೀಯ. ಇದೀಗ ಕೆಕೆಆರ್ ಗೆದ್ದಿದ್ದು, ತೆರೆಮರೆಯಲ್ಲಿ ಆಟ ಬದಲಿಸುತ್ತಿರುವ ಅಭಿಷೇಕ್ ನಾಯರ್ ಕಿಂಗ್ ಮೇಕರ್ ಎನ್ನಲಾಗುತ್ತಿದೆ.

KKR Clinches IPL 2024 Trophy with Abhishek Nair s Significant Contribution as Assistant Coach

ಪ್ರಶಸ್ತಿ ಬರ ಕೊನೆಗಳಿಸಲು ಇವರ ಕೊಡುಗೆ

10 ವರ್ಷಗಳ ನಂತರ ಐಪಿಎಲ್‌ನಲ್ಲಿ ಟ್ರೋಫಿ ಗೆಲ್ಲುವ ಅವಕಾಶ ಕೆಕೆಆರ್‌ಗೆ ಸಿಕ್ಕಿದೆ. ಈ ಗೆಲುವಿನ ನಂತರ ಕೆಕೆಆರ್‌ನ ಸ್ಟಾರ್ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್ ಕೂಡ ಅಭಿಷೇಕ್ ನಾಯರ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬ್ಯಾಟಿಂಗ್ ಕೋಚ್ ಆಗಿ ತಂಡವನ್ನು ಸಿದ್ಧಪಡಿಸುವಲ್ಲಿ ಅಭಿಷೇಕ್ ನಾಯರ್ ಪ್ರಮುಖ ಪಾತ್ರ ಎಂದಿದ್ದಾರೆ. ಅಭಿಷೇಕ್ ಸುಮಾರು 4 ವರ್ಷಗಳ ಹಿಂದೆ ಕೆಕೆಆರ್‌ಗೆ ಸೇರ್ಪಡೆಗೊಂಡರು ಮತ್ತು ಅಂದಿನಿಂದ ಅವರು ತಂಡವನ್ನು ಕಟ್ಟಲು ಶ್ರಮಿಸುತ್ತಿದ್ದಾರೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಮತ್ತು ಶ್ರೇಯಸ್ ಅಯ್ಯರ್ ಕೂಡ ತಮ್ಮ ಬ್ಯಾಟಿಂಗ್ ಸುಧಾರಿಸಿದ್ದಕ್ಕಾಗಿ ಅಭಿಷೇಕ್ ನಾಯರ್‌ಗೆ ಕ್ರೆಡಿಟ್ ನೀಡಿದ್ದಾರೆ. ಅಷ್ಟೇ ಏಕೆ ಉದಯೋನ್ಮುಖ ಫಿನಿಷರ್‌ ರೂಪದಲ್ಲಿ ಕಾಣಿಸಿಕೊಂಡಿರುವ ರಿಂಕು ಸಿಂಗ್ ಬ್ಯಾಟಿಂಗ್ ಇನ್ನೊಂದು ಮಗ್ಗಲು ಮುಟ್ಟಲು ಇವರ ಕೊಡುಗೆ ಅಪಾರ.

ಆರ್‌ಸಿಬಿ ಪ್ಲೇಯರ್‌ಗೂ ಇವರೇ ಪ್ರೇರಣೆ

ಆರ್‌ಸಿಬಿ ಪ್ಲೇಯರ್‌ ದಿನೇಶ್‌ ಕಾರ್ತಿಕ್‌ ಅವರ ಬ್ಯಾಟಿಂಗ್ ಸುಧಾರಣೆಯಲ್ಲೂ ಅಭಿಷೇಕ್‌ ನಯ್ಯರ್‌ ಕೊಡುಗೆ ಅಪಾರ. ಈ ಬಗ್ಗೆ ದಿನೇಶ್ ಕಾರ್ತಿಕ್‌ ಒಮ್ಮೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಅಭಿಷೇಕ್‌ ಯುವ ಆಟಗಾರರನ್ನು ಹುಡುಕಿ ಅವರನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+