IPL 2024: ಕೆಕೆಆರ್ ತಂಡಕ್ಕೆ ನಾಯಕ, ಉಪನಾಯಕನ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2024ರ ಮಿನಿ ಹರಾಜಿಗೆ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಾಯಕ, ಉಪನಾಯಕನ ಹೆಸರನ್ನು ಘೋಷಣೆ ಮಾಡಿದೆ. ಕಳೆದ ಆವೃತ್ತಿಯಲ್ಲಿ ಬೆನ್ನು ನೋವಿನ ಕಾರಣದಿಂದ ಐಪಿಎಲ್‌ನಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ 2024ರ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

2023ರ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ನಿತೀಶ್ ರಾಣ 2024ರ ಐಪಿಎಲ್‌ನಲ್ಲಿ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ. ಕಳೆದ ಆವೃತ್ತಿಯಲ್ಲಿ ನಿತೀಶ್ ರಾಣ ನಾಯಕತ್ವದಲ್ಲಿ ಕೆಕೆಆರ್ ತಂಡ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಗಳಿಸಿತ್ತು.

 KKR Appoints Shreyas Iyer as Captain for IPL 2024, Names Nitish Rana Vice-Captain

ಶ್ರೇಯಸ್ ಅಯ್ಯರ್ 2023 ರ ಏಷ್ಯಾ ಕಪ್‌ನಲ್ಲಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಕ್ರಿಕೆಟ್‌ಗೆ ಮರಳಿದ್ದು, 2023 ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಸೆಮಿಫೈನಲ್‌ನಲ್ಲಿ ಶತಕ ಗಳಿಸಿ ಮಿಂಚಿದ್ದ ಅಯ್ಯರ್ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಏಕದಿನ ವಿಶ್ವಕಪ್‌ ಬಳಿಕ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಕೊನೆಯ ಎರಡು ಪಂದ್ಯಗಳಲ್ಲಿ ಅಯ್ಯರ್ ಆಡಿದ್ದರು.

ವೆಂಕಿ ಮೈಸೂರು ಸಂತಸ

"ಗಾಯದ ಕಾರಣದಿಂದಾಗಿ ಶ್ರೇಯಸ್ ಐಪಿಎಲ್ 2023 ಅನ್ನು ಕಳೆದುಕೊಂಡಿರುವುದು ನಿಜಕ್ಕೂ ದುರದೃಷ್ಟಕರ. ಅವರು ಮತ್ತೆ ಕ್ಯಾಪ್ಟನ್ ಆಗಿ ಚುಕ್ಕಾಣಿ ಹಿಡಿದಿರುವುದು ನಮಗೆ ಖುಷಿ ತಂದಿದೆ. ಅವರು ತಮ್ಮ ಗಾಯದಿಂದ ಚೇತರಿಸಿಕೊಳ್ಳಲು ಶ್ರಮಿಸಿದ ರೀತಿ ಮತ್ತು ಅವರು ಪ್ರದರ್ಶಿಸಿದ ಫಾರ್ಮ್ ಅವರ ಪಾತ್ರಕ್ಕೆ ಸಾಕ್ಷಿಯಾಗಿದೆ," ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರು ಅವರು ಅಯ್ಯರ್ ನಾಯಕರಾಗಿ ಮರಳುವುದನ್ನು ಖಚಿತಪಡಿಸಿದರು.

"ಕಳೆದ ಋತುವಿನಲ್ಲಿ ನಿತೀಶ್ ರಾಣ ಶ್ರೇಯಸ್ ಬದಲಾಗಿ ನಾಯಕತ್ವ ವಹಿಸಿಕೊಳ್ಳಲು ಒಪ್ಪಿಕೊಂಡರು ಮತ್ತು ಉತ್ತಮ ಕೆಲಸ ಮಾಡಿದ್ದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಉಪನಾಯಕನಾಗಿ ನಿತೀಶ್ ಅವರು ಕೆಕೆಆರ್ ತಂಡದಲ್ಲಿ ಶ್ರೇಯಸ್ ಅವರನ್ನು ಬೆಂಬಲಿಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ." ಎಂದು ಹೇಳಿದ್ದಾರೆ.

ಶ್ರೇಯಸ್ ಅಯ್ಯರ್ ಹೇಳಿದ್ದೇನು?

ಶ್ರೇಯಸ್ ಅಯ್ಯರ್, ಏತನ್ಮಧ್ಯೆ, ರಾಣಾ ಅವರು 2023 ರಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದಕ್ಕಾಗಿ ಶ್ಲಾಘಿಸಿದರು; ಮುಂಬರುವ ಆವೃತ್ತಿಗೆ ರಾಣಾ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.

ಕಳೆದ ಋತುವಿನಲ್ಲಿ ಗಾಯದ ಕಾರಣ ನನ್ನ ಅನುಪಸ್ಥಿತಿ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸಿದ್ದೇವೆ ಎಂದು ನಾನು ನಂಬುತ್ತೇನೆ. ನಿತೀಶ್ ನಾಯಕತ್ವದಿಂದಲೂ ಉತ್ತಮ ಕೆಲಸ ಮಾಡಿದರು. ಕೆಕೆಆರ್ ಅವರನ್ನು ವೈಸ್ ಕ್ಯಾಪ್ಟನ್ ಎಂದು ಹೆಸರಿಸಿರುವುದು ನನಗೆ ಖುಷಿ ತಂದಿದೆ. ಇದು ನಾಯಕತ್ವದ ಗುಂಪನ್ನು ಬಲಪಡಿಸುವುದರಲ್ಲಿ ಸಂದೇಹವಿಲ್ಲ ಎಂದು ಅಯ್ಯರ್ ಹೇಳಿದರು.

ಕಳೆದ ತಿಂಗಳು, ನೈಟ್ ರೈಡರ್ಸ್ ಗೌತಮ್ ಗಂಭೀರ್ ಅವರನ್ನು ಫ್ರಾಂಚೈಸಿಗೆ ಮೆಂಟರ್ ಆಗಿ ಘೋಷಿಸಿತು. 2012 ಮತ್ತು 2014 ರಲ್ಲಿ ಕೆಕೆಆರ್ ಗಂಭೀರ್ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. 2018 ರ ಐಪಿಎಲ್‌ಗೆ ಮೊದಲು ಮುಂಚಿತವಾಗಿ ಫ್ರಾಂಚೈಸಿಯಿಂದ ಬಿಡುಗಡೆ ಮಾಡಲಾಯಿತು. ಅವರ ನಿವೃತ್ತಿಯ ನಂತರ, ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗೆ (2022 ಮತ್ತು 2023 ರಲ್ಲಿ) ಮೆಂಟರ್ ಆಗಿದ್ದರು .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+