RCB Vs SRH: ಕಾವ್ಯಾ ಮಾರನ್ ಆಸ್ತಿ ಎಷ್ಟು ಕೋಟಿ ರೂಪಾಯಿ?
ಕಾವ್ಯಾ ಮಾರನ್ ಹೆಸರು ಈಗ ಐಪಿಎಲ್ ಜೊತೆಗೆ ಬೆರೆತು ಹೋಗಿದ್ದು, ಈಕೆಯ ಸೌಂದರ್ಯ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಓನರ್ ಈ ಬೆಡಗಿ. ಕಾವ್ಯಾ ಮಾರನ್ ತಂದೆಯ ಆಸ್ತಿಯೇ ಸಾವಿರಾರು ಕೋಟಿ ರೂಪಾಯಿ. ಹಾಗಾದ್ರೆ, ಕಾವ್ಯಾ ಮಾರನ್ ಅವರ ಒಟ್ಟು ಆಸ್ತಿ ಎಷ್ಟು ಕೋಟಿ ರೂಪಾಯಿ ಗೊತ್ತಾ?
ಆರ್‌ಸಿಬಿ ತಂಡ ನಿನ್ನೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿದೆ. ಆರ್‌ಸಿಬಿ ತಂಡ 206 ರನ್ ಗಳಿಸಿ ಹೈದರಬಾದ್‌ಗೆ ಸವಾಲಿನ ಮೊತ್ತ ನೀಡಿತ್ತು. ಆದರೆ 171 ರನ್‌ಗೆ ಹೈದರಾಬಾದ್ ತಂಡ ತನ್ನ ಓವರ್‌ಗಳನ್ನ ಖಾಲಿ ಮಾಡಿಕೊಂಡು ಹೀನಾಯವಾಗಿ ಸೋಲು ಕಂಡರು. ಈ ಮೂಲಕವಗಿ ಭರ್ಜರಿ 35 ರನ್ ಅಂತರದ ಗೆಲುವಿನ ಮೂಲಕ ಆರ್‌ಸಿಬಿ ತನ್ನ ಪ್ಲೇಆಫ್ ಕನಸನ್ನು ಈಗ ಕೂಡ ಜೀವಂತವಾಗಿ ಉಳಿಸಿಕೊಂಡಿದೆ. ಆದರೆ ಇದೇ ಮ್ಯಾಚ್ ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಓನರ್ ಅದ ಕಾವ್ಯಾ ಮಾರನ್ ಕೂಡ ಗಮನ ಸೆಳೆದರು. ಹಾಗಾದರೆ ಕಾವ್ಯಾ ಮಾರನ್ ಆಸ್ತಿ ಎಷ್ಟು ಕೋಟಿ ರೂಪಾಯಿ? ಮುಂದೆ ಓದಿ.

19,000 ಕೋಟಿ ರೂಪಾಯಿ ಆಸ್ತಿ!
ನಿಮಗೆ ಸನ್ ನೆಟ್‌ವರ್ಕ್ಸ್ ಗೊತ್ತೆ ಇರುತ್ತದೆ, ಕನ್ನಡದಲ್ಲಿ ಉದಯ ಟಿವಿ ಕೂಡ ಇದೇ ಸನ್ ನೆಟ್‌ವರ್ಕ್ಸ್ ಅಡಿಯಲ್ಲಿ ಬರುತ್ತದೆ. ಹೀಗೆ 'ಸನ್ ನೆಟ್‌ವರ್ಕ್ಸ್' ಮಾಧ್ಯಮ ಸಮೂಹವನ್ನು ಹೊಂದಿರುವ ಕಲಾನಿಧಿ ಮಾರನ್ ಅವರ ಮಗಳೇ ಈ ಕಾವ್ಯಾ ಮಾರನ್. ಇದೇ ಕಲಾನಿಧಿ ಮಾರನ್ ಅವರು ಭಾರತದ ಅತ್ಯಂತ ಶ್ರೀಮಂತ ಮಾಧ್ಯಮ ಮಾಲೀಕರ ಪೈಕಿ ಮೊದಲಿಗರು ಎನ್ನಬಹುದು. ಯಾಕಂದ್ರೆ ಕಲಾನಿಧಿ ಮಾರನ್ ಬಳಿ ಸುಮಾರು 19,000 ಕೋಟಿ ರೂಪಾಯಿ ಆಸ್ತಿ ಇದೆ. ಹಾಗಾದರೆ ಕಲಾನಿಧಿ ಮಾರನ್ ಅವರ ಮಗಳು ಕಾವ್ಯಾ ಮಾರನ್ ಬಳಿ ಒಟ್ಟು ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ?
Finally Inner peace
— black cat (@Cat__offi) April 25, 2024
Kavya Say What's this raaa😂#RCBvsSRH pic.twitter.com/N3pGRAFphH
400 ಕೋಟಿ ರೂಪಾಯಿ ಆಸ್ತಿ?
ಕಾವ್ಯಾ ಮಾರನ್ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಸನ್ ನೆಟ್‌ವರ್ಕ್ಸ್ ಸಮೂಹದ ವ್ಯವಹಾರದಲ್ಲಿ ಕೂಡ ಸಹಾಯ ಮಾಡಿದ್ದರು. ಹೀಗೆ ತಮ್ಮ ಕುಟುಂಬದ ಉದ್ಯಮದಲ್ಲಿ ಪಳಗಿದ್ದ ಅವರು ಈಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿಯಾಗಿ ಮುನ್ನಡೆಸುತ್ತಿದ್ದಾರೆ. ಕಾವ್ಯಾ ಮಾರನ್ ಬಳಿಯಲ್ಲಿ, ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇದೆ ಎನ್ನಲಾಗುತ್ತದೆ. ಆದರೆ ಇದರ ಬಗ್ಗೆ ಈವರೆಗೂ ಅವರಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗರಂ!
ಕಾವ್ಯಾ ಮಾರನ್ ಅವರು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ಸೋತ ಬಳಿಕ ಗರಂ ಆಗಿದ್ದರು. ಅದರಲ್ಲೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಹೀನಾಯ ಪ್ರದರ್ಶನ ಕಂಡು ಕೋಪ ಮಾಡಿಕೊಂಡಿದ್ದರು ಕಾವ್ಯಾ ಮಾರನ್. ಹೀಗೆ ಕಾವ್ಯಾ ಮಾರನ್ ಕೋಪದ ಭಾವನೆ ತೋರಿಸುತ್ತಾ, ತನ್ನ ತಂಡದ ಆಟಗಾರರಿಗೆ ದೂರದಿಂದ ಏನನ್ನೋ ಹೇಳುತ್ತಿದ್ದರು. ಆರ್‌ಸಿಬಿ ವಿರುದ್ಧ ಗೆಲ್ಲಲೇಬೇಕು ಎಂಬ ಸಂದೇಶ ನೀಡುತ್ತಿದ್ದರು. ಆದರೂ ಆರ್‌ಸಿಬಿ ಟೀಂ ಸಂಪೂರ್ಣವಾಗಿ ತನ್ನೆಲ್ಲಾ ಶಕ್ತಿ ಮೀರಿ ಪ್ರಯತ್ನ ಮಾಡಿದ ಫಲವಾಗಿ ಗೆದ್ದು ಬೀಗಿತ್ತು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ 35 ರನ್‌ಗಳ ಹೀನಾಯ ಸೋಲು ಕಂಡಿತ್ತು.
ಕೊಹ್ಲಿ ವಿರೋಧಿಗಳ ಮಾತು ಏನು?
ನಿನ್ನೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಗೆದ್ದಿದ್ದರೂ ಕೊಹ್ಲಿ ವಿರುದ್ಧವಾಗಿ, ಕೆಲವರು ಇದೀಗ ಮಾತನಾಡುತ್ತಿದ್ದಾರೆ. ಈ ವಿಚಾರ ದೊಡ್ಡ ಸದ್ದನ್ನು ಕೂಡ ಮಾಡುತ್ತಿದೆ. ಕೇವಲ 43 ಬಾಲ್ ಆಡಿ, ಭರ್ಜರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 51 ರನ್ ಗಳಿಸಿದರು. ಹೀಗಿದ್ದರೂ ವಿರಾಟ್ ಕೊಹ್ಲಿ, ಸ್ಲೋ ಬ್ಯಾಟಿಂಗ್ ಆಡಿದ್ದಾರೆ ಅಂತಾ ವಿರೋಧಿಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ವಿಚಾರದ ಕುರಿತಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದ್ದು. ವಿರಾಟ್ ಕೊಹ್ಲಿ ವಿರೋಧಿ ಗ್ಯಾಂಗ್, ವಿರಾಟ್ ಕೊಹ್ಲಿ ಕ್ರಿಕೆಟ್ ಅಲ್ಲ ಕುಂಟೆಬಿಲ್ಲೆ ಆಡಲಿ ಅಂತಾ ಪೋಸ್ಟ್ ಹಾಕುತ್ತಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ವಿರುದ್ಧ ಮಾತನಾಡುತ್ತಿರುವ ವಿರೋಧಿಗಳಿಗೆ, ಆರ್‌ಸಿಬಿ ಅಭಿಮಾನಿ ಬಳಗ ಕೂಡ ಚಳಿ ಬಿಡಿಸುತ್ತಿದೆ.
ಹೈದರಾಬಾದ್ ತಂಡಕ್ಕೆ ಸಂಕಷ್ಟ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತ ನಂತರ, ಸನ್‌ರೈಸರ್ಸ್ ಹೈದರಾಬಾದ್ ತಂಡ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಈ ಸಂಕಷ್ಟಗಳನ್ನು ಎದುರಿಸಿ, ಇದೀಗ ಪ್ಲೇಆಫ್‌ಗೆ ಹೋಗುವುದು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ. ಈ ನಡುವೆ ಆರ್‌ಸಿಬಿ ತಂಡದ ಪ್ಲೇಆಫ್ ಕನಸು ಇನ್ನೂ ಜೀವಂತವಾಗಿದೆ. ಹೇಗಂದ್ರೆ ಮುಂದಿನ ಎಲ್ಲಾ ಪಂದ್ಯಗಳನ್ನ ಗೆದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ಕಮಾಲ್ ಮಾಡಬೇಕು. ಆ ಮೂಲಕ ಮುಂದಿನ ಹಂತಕ್ಕೆ ಹೋಗಲು ರಣತಂತ್ರ ಹೂಡಬೇಕಿದೆ. ಇದರಲ್ಲಿ ಒಂದಷ್ಟು ಸಣ್ಣ ಎಡವಟ್ಟು ನಡೆದರೂ ಆರ್‌ಸಿಬಿಗೆ ಮುಂದಿನ ಹಂತದ ಕನಸು ನನಸಾಗುವುದಿಲ್ಲ.












Click it and Unblock the Notifications