Get Updates
Get notified of breaking news, exclusive insights, and must-see stories!

Karun Nair: ಕೇರಳದ ರಣಜಿ ಟ್ರೋಫಿ ಕನಸು ಭಗ್ನಗೊಳಿಸಿದ ಕನ್ನಡಿಗ ಕರುಣ್ ನಾಯರ್

ಕನ್ನಡಿಗ ಕರುಣ್ ನಾಯರ್ ಅವರ ಅಮೋಘ ಶತಕದ ನೆರವಿನಿಂದ ವಿದರ್ಭ ಮೂರನೇ ಬಾರಿ ರಣಜಿ ಟ್ರೋಫಿ ಕಪ್ ಗೆಲ್ಲುವತ್ತ ಹೆಜ್ಜೆಯಿಟ್ಟಿದೆ. ಕೇರಳ ವಿರುದ್ಧದ ಫೈನಲ್ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ವಿದರ್ಭ ಬ್ಯಾಟರ್ ಕರುಣ್ ನಾಯರ್ ಅಮೋಘ ಶತಕ ಸಿಡಿಸಿದ್ದು ಕೇರಳದ ಗೆಲುವಿನ ಆಸೆಯನ್ನು ಚಿವುಟಿ ಹಾಕಿದರು. ವಿದರ್ಭ ಪ್ರಶಸ್ತಿ ಗೆಲ್ಲುವುದು ಬಹುತೇಕ ಖಚಿತವಾಗಿದ್ದು ಭಾನುವಾರ ಕೊನೆಯ ದಿನದ ಆಟ ನಡೆಯಲಿದೆ.

ರಣಜಿ ಟ್ರೋಫಿ ಫೈನಲ್ ಪಂದ್ಯದ ನಾಲ್ಕನೇ ದಿನ ವಿದರ್ಭ ಸ್ಪಷ್ಟವಾಗಿ ಮೇಲುಗೈ ಸಾಧಿಸಿತು. ಕರುಣ್ ನಾಯರ್ 280 ಎಸೆತಗಳಲ್ಲಿ ಅಜೇಯ 132 ರನ್ ಗಳಿಸಿದ್ದು ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿದರ್ಭ 4 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿದ್ದು 286 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

karun nair century vidarbha ranji trophy title vs kerala

ಮೊದಲ ರಣಜಿ ಫೈನಲ್ ಆಡುತ್ತಿರುವ ಕೇರಳ ತಂಡ ನಾಲ್ಕನೇ ದಿನದಾಟವನ್ನು ಉತ್ತಮವಾಗಿಯೇ ಆರಂಭಿಸಿರು. ವಿದರ್ಭ 7 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು, ಆದರೆ ಕರುಣ್ ನಾಯರ್ ಮತ್ತು ಡ್ಯಾನಿಶ್ ಮಾಲೆವಾರ್ (73 ರನ್) ಕೇರಳದ ಖುಷಿಯನ್ನು ಹೆಚ್ಚು ಹೊತ್ತು ಇರಲು ಬಿಡಲಿಲ್ಲ. ಮೂರನೇ ವಿಕೆಟ್‌ಗೆ ಈ ಜೋಡಿ 182 ರನ್ ಕಲೆಹಾಕಿತು. ಡ್ಯಾನಿಶ್ ಔಟಾದ ಬಳಿಕ ಕರುಣ್ ನಾಯರ್ ತಮ್ಮ ಅಮೋಘ ಆಟ ಮುಂದುವರೆಸಿದ್ದಾರೆ.

ಕೇರಳದ ಆಸೆಗೆ ಕನ್ನಡಿಗನ ಅಡ್ಡಿ

ವಿದರ್ಭ 37 ರನ್‌ಗಳ ಅಲ್ಪ ಮುನ್ನಡೆ ಪಡೆದುಕೊಂಡು ಎರಡನೇ ಇನ್ನಿಂಗ್ಸ್‌ ಆರಂಭಿಸಿತ್ತು, ವಿದರ್ಭವನ್ನು ಬೇಗನೆ ಆಲೌಟ್ ಮಾಡಿ ಐದನೇ ದಿನ ಚೇಸ್ ಮಾಡಿ ಗೆಲ್ಲುವ ಕನಸು ಕಂಡಿದ್ದ ಕೇರಳಕ್ಕೆ ಕನ್ನಡಿಗ ಕರುಣ್ ನಾಯರ್ ಅಡ್ಡಿಯಾದರು. ಆರಂಭದಲ್ಲಿ ವಿದರ್ಭ 2 ವಿಕೆಟ್ ಕಳೆದುಕೊಂಡಾಗ ಕೇರಳದ ಆಸೆಗೆ ಜೀವ ಬಂದಿತ್ತು, ಆದರೆ ಕರುಣ್ ನಾಯರ್ ಆಟ ಕೇರಳದ ಕನಸಿಗೆ ಅಡ್ಡಿಯಾದರು.

ಟಾಸ್ ಗೆದ್ದ ಕೇರಳ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ 379 ರನ್ ಕಲೆಹಾಕಿತು. ಡ್ಯಾನಿಶ್ ಮಾಲೆವಾರ್ 153 ರನ್ ಗಳಿಸಿದರೆ, ಕರುಣ್ ನಾಯರ್ 86 ರನ್ ಗಳಿಸಿದ್ದರು. ನಚಿಕೇತ್ ಭುಟೆ 32 ರನ್ ಗಳಿಸಿದರು. ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕೇರಳ 342 ರನ್‌ಗಳಿಗೆ ಆಲೌಟ್ ಆಗುವ ಮೂಲಕ 37 ರನ್‌ಗಳ ಹಿನ್ನಡೆ ಅನುಭವಿಸಿತು.

ಸಚಿನ್ ಬೇಬಿ 98 ರನ್ ಗಳಿಸಿದರೆ, ಸರ್ವಾಟೆ 79 ರನ್ ಗಳಿಸಿದರು. ಹರ್ಷ್ ದುಬೆ, ಪಾರ್ಥ್ ರೇಖಾಡೆ ಮತ್ತು ದರ್ಶನ್‌ ನಾಲ್ಕಂಡೆ ತಲಾ 3 ವಿಕೆಟ್ ಪಡೆದುಕೊಂಡರು. ಐದನೇ ದಿನ ವಿದರ್ಭ ತಂಡವನ್ನು ಬೇಗನೆ ಆಲೌಟ್ ಮಾಡಿ ಚೇಸ್ ಮಾಡಿದರೆ ಮಾತ್ರ ಕೇರಳಕ್ಕೆ ಪ್ರಶಸ್ತಿ ಗೆಲ್ಲುವ ಅವಕಾಶವಿದ್ದು, ಡ್ರಾನಲ್ಲಿ ಪಂದ್ಯ ಅಂತ್ಯವಾದರೆ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿರುವ ವಿದರ್ಭ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+