Ranji Trophy: ಕರ್ನಾಟಕ ಶಿಸ್ತಿನ ಬೌಲಿಂಗ್ ದಾಳಿ: ಸಂಕಷ್ಟದಲ್ಲಿ ತ್ರಿಪುರಾ

ತ್ರಿಪುರಾ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಎರಡನೇ ದಿನ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಗರ್ತಲಾದ ಮಹಾರಾಜ ವೀರ್ ವಿಕ್ರಮ್ ಕಾಲೇಜು ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ತ್ರಿಪುರ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 241 ರನ್ ಕಲೆ ಹಾಕಿತ್ತು. ಎರಡನೇ ದಿನ ಒಂದೂ ರನ್ ಗಳಿಸದೆ ಕರ್ನಾಟಕ ಆಲೌಟ್ ಆಯಿತು.

ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ತ್ರಿಪುರಾ ಕರ್ನಾಟಕ ಬಿಗಿ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿತು. ಎರಡನೇ ದಿನದಾಟದ ಅಂತ್ಯಕ್ಕೆ ತ್ರಿಪುರಾ 9 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿದ್ದು, ಇನ್ನೂ 43 ರನ್‌ಗಳ ಹಿನ್ನಡೆಯಲ್ಲಿದೆ.

Karnataka Vs Tripura: Vasuki Koushiks 4-wicket Haul Brings Karnataka Close to Taking Innings Lead

ರಾಜ್ಯದ ಪರವಾಗಿ ವೇಗದ ಬೌಲರ್ ಗಳು ಶಿಸ್ತಿನ ಬೌಲಿಂಗ್ ಪ್ರದರ್ಶನ ನೀಡಿದರು. ವಾಸುಕಿ ಕೌಶಿಕ್ 4 ವಿಕೆಟ್ ಪಡೆದುಕೊಂಡರೆ, ವಿಧ್ವತ್ ಕಾವೇರಪ್ಪ ಮತ್ತು ವಿಜಯ್‌ಕುಮಾರ್ ವೈಶಾಖ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಹಾರ್ದಿಕ್ ರಾಜ್ ಇನ್ನೊಂದು ವಿಕೆಟ್ ಪಡೆದುಕೊಂಡರು.

ಬಿಷಾಲ್ ಘೋಷ್ 44 ರನ್, ವೃದ್ಧಿಮಾನ್ ಸಾಹ 28 ರನ್, ಬ್ರಿಕಮ್‌ಜಿತ್ ದೇಬನಾಥ್ ಅಜೇಯ 57 ರನ್, ಮಣಿಶಂಕರ್ ಮುರಸಿಂಗ್ 39 ರನ್ ಗಳಿಸುವ ಮೂಲಕ ತ್ರಿಪುರಾ ತಂಡಕ್ಕೆ ಆಸರೆಯಾದರು. ದೇವನಾಥ್ 57 ರನ್ ಗಳಿಸಿದ್ದು ಮೂರನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ.

ಅಗರ್ವಾಲ್, ವೈಶಾಖ್ ಆಸರೆ

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ 1 ರನ್ ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಬಂದ ಅನೀಶ್ ಕೂಡ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಾಯಕ ಮಯಾಂಕ್ ಅಗರ್ವಾಮ್ 51 ರನ್, ಕಿಶನ್ ಬೆದರೆ 61 ರನ್ ಮತ್ತು ವೈಶಾಖ್ ವಿಜಯ್‌ ಕುಮಾರ್ 51 ರನ್ ಗಳಿಸುವ ಮೂಲಕ ಕರ್ನಾಟಕ ತಂಡ ಸವಾಲಿನ ಮೊತ್ತ ಗಳಿಸಲು ನೆರವಾದರು. 164 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಬ್ಯಾಟಿಂಗ್‌ಗೆ ಬಂದ ಬೌಲರ್ ವೈಶಾಕ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಎರಡನೇ ದಿನ ಅವರು ಒಂದೂ ರನ್ ಗಳಿಸದೆ ಔಟಾದರು.

ಮೂರನೇ ದಿನ ತ್ರಿಪುರಾ ತಂಡವನ್ನು ಬೇಗನೆ ಔಟ್ ಮಾಡಿದರೆ, ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸುವ ಲೆಕ್ಕಾಚಾರದಲ್ಲಿದೆ ಕರ್ನಾಟಕ ತಂಡ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+