Ranji Trophy: ಎರಡನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಸಾಧಾರಣ ಬ್ಯಾಟಿಂಗ್: ರೋಚಕ ಘಟ್ಟದಲ್ಲಿ ಪಂದ್ಯ
ತ್ರಿಪುರಾ ವಿರುದ್ಧದ ರಣಜಿ ಟ್ರೋಫಿ ಪಂದ್ಯ ಕುತೂಹಲ ಘಟ್ಟದಲ್ಲಿದ್ದು ಕೊನೆಯ ದಿನ ನಿರ್ಣಾಯಕವಾಗಲಿದೆ. 41 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಕೇವಲ 151 ರನ್‌ಗಳಿಗೆ ಆಲೌಟ್ ಆಗಿದೆ.
ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ತ್ರಿಪುರಾ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 59 ರನ್ ಗಳಿಸಿದೆ. ನಾಲ್ಕನೇ ದಿನ ಪಂದ್ಯದ ಫಲಿತಾಂಶ ಹೊರ ಬೀಳುವುದು ಖಚಿತವಾಗಿದೆ.

ಮೊದಲನೇ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡು ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬ್ಯಾಟಿಂಗ್‌ನಲ್ಲಿ ಎಡವಿತು. ಆರಂಭಿಕ ಬ್ಯಾಟರ್ ರವಿಕುಮಾರ್ ಸಮರ್ಥ್ ಯಾವುದೇ ರನ್ ಗಳಿಸದೇ ಔಟಾದರು. ನಾಯಕ ಮಯಾಂಕ್ ಅಗರ್ವಾಲ್ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅನೀಶ್ ಕೆ.ವಿ. 2 ರನ್, ನಿಕಿನ್ ಜೋಸ್ 4 ರನ್ ಗಳಿಸಿ ನಿರಾಸೆ ಮೂಡಿಸಿದರು.
ಕಿಶನ್ ಬೆದರೆ 42 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಹಾರ್ದಿಕ್ ರಾಜ್ 10 ರನ್ ಗಳಿಸಿದರೆ. ವೈಶಾಕ್ ವಿಜಯ್ ಕುಮಾರ್ 22 ರನ್ ಗಳಿಸಿದರು. ಶಶಿಕುಮಾರ್ ಕೆ ಯಾವುದೇ ರನ್ ಗಳಿಸದೆ ಔಟಾದರು. ವಿಧ್ವತ್ ಕಾವೇರಪ್ಪ 5 ರನ್ ಗಳಿಸಿದರು.
ತ್ರಿಪುರಾ ಉತ್ತಮ ಬೌಲಿಂಗ್ ದಾಳಿ
ತ್ರಿಪುರಾ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿತು. ಎಂ.ಬಿ. ಮುರಾ ಸಿಂಗ್ ಮತ್ತು ರಾಣಾ ದತ್ತ ತಲಾ ಮೂರು ವಿಕೆಟ್ ಪಡೆದರು. ಪರ್ವೇಜ್ ಸುಲ್ತಾನ್ 2 ವಿಕೆಟ್ ಪಡೆದರೆ. ಎ.ಕೆ. ಸರ್ಕಾರ್ ಮತ್ತು ಬಿಬಿ ದೇಬನಾಥ್ ತಲಾ 1 ವಿಕೆಟ್ ಪಡೆದರು.
ರೋಚಕ ಹಂತದತ್ತ ಪಂದ್ಯ
193 ರನ್‌ಗಳ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ತ್ರಿಪುರಾ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 59 ರನ್ ಗಳಿಸಿದೆ. ತ್ರಿಪುರಾಗೆ ಗೆಲ್ಲಲು 134 ರನ್‌ಗಳ ಅಗತ್ಯವಿದೆ. ಕರ್ನಾಟಕದ ಗೆಲುವಿಗೆ 7 ವಿಕೆಟ್ ಪಡೆಯಬೇಕಿದೆ.
ಬಿಬಿ ಘೋಷ್ 5 ರನ್ ಗಳಿಸಿ ಔಟಾದರೆ, ಬಿಕ್ರಮ್ ಕುಮಾರ್ ದಾಸ್ 2 ರನ್ ಗಳಿಸಿ ಔಟಾದರು. ಶ್ರೀದಾಮ್ ಪೌಲ್ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸುದೀಪ್ ಚಟರ್ಜಿ ಅಜೇಯ 26 ರನ್ ಗಳಿಸಿದ್ದು ನಾಲ್ಕನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. ಗಣೇಶ್ ಸತೀಶ್ ಅಜೇಯ ಮೂರು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ವಿಧ್ವತ್ ಕಾವೇರಪ್ಪ, ವಿಜಯ್ ಕುಮಾರ್ ವೈಶಾಖ್ ಮತ್ತು ವಾಸುಕಿ ಕೌಶಿಕ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.












Click it and Unblock the Notifications