ರಾಯಲ್‌ ಚಾಲೆಂಜ್ ಕುಡಿಯಲ್ಲ ಎಂದ ಡಿಸಿಎಂ ಡಿಕೆಶಿ, ಮತ್ತೇನು ಕುಡೀತಿರಿ ಸರ್? ಅಂತಾ ಕೇಳ್ತಿದ್ದಾರೆ ನೆಟ್ಟಿಗರು... Virat Kohli

ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಮಾರಾಟ ಆಗಲಿದೆ... 17,000 ಕೋಟಿ ರೂಪಾಯಿಗೆ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಮಾರಾಟ ಮಾಡಲು ಸಿದ್ಧತೆ ನಡೆದಿದೆ... ಕರ್ನಾಟಕದ ಪ್ರಭಾವಿ ರಾಜಕಾರಣಿ ಬೆಂಗಳೂರು ತಂಡ ಆರ್‌ಸಿಬಿ ಖರೀದಿ ಮಾಡಲಿದ್ದಾರೆ... ಆರ್‌ಸಿಬಿ ಮಾರಾಟ ಮಾಡಿದರೆ ಮುಂದೆ ಏನು ಪರಿಸ್ಥಿತಿ? ವಿರಾಟ್ ಕೊಹ್ಲಿ ಆರ್‌ಸಿಬಿ ತಂಡ ಬಿಟ್ಟು ಹೋಗುತ್ತಾರಾ? ಹಿಂಗೆಲ್ಲಾ ಯರ್ರಾಬಿರ್ರಿ ಸುದ್ದಿಗಳು ಓಡಾಡುತ್ತಿರುವ ಸಮಯದಲ್ಲೇ, ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ!

ಯೆಸ್... ಬೆಂಗಳೂರು ತಂಡ ಆರ್‌ಸಿಬಿ 17,000 ಕೋಟಿ ರೂಪಾಯಿಗೆ ಮಾರಾಟ ಆಗುತ್ತಾ? ಅನ್ನೋ ಸುದ್ದಿಯನ್ನ ದಿಢೀರ್ ರಾಷ್ಟ್ರೀಯ ಮಾಧ್ಯಮಗಳು ಕೂಡ ಪ್ರಕಟಿಸಿದ್ದವು. 2025ರ ಐಪಿಎಲ್ ಕಪ್ ಗೆದ್ದ ನಮ್ಮ ಆರ್‌ಸಿಬಿ ತನ್ನ ಕೆಪಾಸಿಟಿ ಏನು? ಅಂತಾ ತೋರಿಸಿದೆ. ಈ ಸಮಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ತಾನು ಹೊಂದಿರುವ ಷೇರು ಮೌಲ್ಯ ಅಂದರೆ ಪಾಲನ್ನು ಮಾರಾಟ ಮಾಡಲು ಬ್ರಿಟನ್ ಮೂಲದ ಕಂಪನಿ ಡಿಯಾಜಿಯೋ ಸಿದ್ಧವಾಗಿದೆ, ಕರ್ನಾಟಕ ರಾಜ್ಯದ ಪ್ರಭಾವಿ ರಾಜಕಾರಣಿ ಆರ್‌ಸಿಬಿ ತಂಡ ಖರೀದಿ ಮಾಡುತ್ತಾರೆ ಎಂಬ ಸುದ್ದಿಗಳು ಸಂಚಲನ ಸೃಷ್ಟಿಸಿದ್ದವು. ಈ ಎಲ್ಲಾ ಸುದ್ದಿಗಳಿಗೆ ಇದೀಗ ಕರ್ನಾಟಕದ ಮಾನ್ಯ ಉಪಮುಖ್ಯಂತ್ರಿಗಳು ಖಡಕ್ ಉತ್ತರ ನೀಡಿದ್ದಾರೆ....

Karnataka DCM DK Shivakumar Said This About Royal Challenge Now

ರಾಯಲ್‌ ಚಾಲೆಂಜ್ ಕುಡಿಯಲ್ಲ ಎಂದ ಡಿಸಿಎಂ ಡಿಕೆಶಿ...

ಹೌದು, ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿಗೆ 7 ಕೋಟಿ ಕನ್ನಡಿಗರು ಪ್ರಾಣ ಬೇಕಾದರೂ ಕೊಡ್ತಾರೆ... ಹಿಂಗೆಲ್ಲಾ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳು ಹೇಳುತ್ತಾರೆ, ಆರ್‌ಸಿಬಿ ತಂಡವನ್ನು ಹೊಗಳುತ್ತಾರೆ. ಅದರಲ್ಲೂ ವಿರಾಟ್ ಕೊಹ್ಲಿ ಅಭಿಮಾನಿಗಳು ಕೂಡ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಬೆನ್ನಿಗೆ ನಿಲ್ಲುತ್ತಾರೆ. ಈ ಮೂಲಕ 50 ಕೋಟಿಗೂ ಹೆಚ್ಚು ಅಭಿಮಾನಿಗಳನ್ನ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಹೊಂದಿದೆ ಅಂತಾರೆ ಫ್ಯಾನ್ಸ್. ಇಂತಹ ಸಮಯದಲ್ಲೇ, ಪ್ರಭಾವಿ ರಾಜಕಾರಣಿ ಆರ್‌ಸಿಬಿ ಬೆಂಗಳೂರು ತಂಡ ಖರೀದಿ ಮಾಡುವ ಸುದ್ದಿಯೂ ಜೋರಾಗಿದೆ. ಹೀಗಿದ್ದಾಗಲೇ, ರಾಯಲ್‌ ಚಾಲೆಂಜ್ ಕುಡಿಯಲ್ಲ ಎಂದ ಡಿಸಿಎಂ ಡಿಕೆಶಿ, ಮತ್ತೇನು ಕುಡೀತಿರಿ ಸರ್? ಅಂತಾ ಕೇಳ್ತಿದ್ದಾರೆ ನೆಟ್ಟಿಗರು...

ನನಗೇಕೆ ಆರ್‌ಸಿಬಿ ಟೀಮ್ ಬೇಕು?

ಅಂದಹಾಗೆ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರ್‌ಸಿಬಿ ತಂಡ ಖರೀದಿ ಮಾಡ್ತಾರೆ ಅಂತಾ ಹಬ್ಬಿದ್ದ ಗಾಳಿ ಸುದ್ದಿಗಳಿಗೆ ಇದೀಗ ಅವರೇ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ನಾನು ಹಿಂದಿನಿಂದ ಕೂಡ ಕರ್ನಾಟಕ ರಾಜ್ಯದ ಕ್ರಿಕೆಟ್ ಸಂಸ್ಥೆಯಲ್ಲಿ ಸದಸ್ಯ ಆಗಿದ್ದೇನೆ. ಹಾಗೇ ಹಿಂದೆ ನನಗೆ ಕೆಎಸ್‌ಸಿಎ ಮ್ಯಾನೇಜ್‌ಮೆಂಟ್‌ಗೆ ಸೇರುವ ಆಫರ್ ಕೂಡ ನೀಡಿದ್ದರು. ಆದರೆ ನನಗೆ ಅಷ್ಟೊಂದು ಟೈಂ ಇಲ್ಲ ಇದೇ ಕಾರಣಕ್ಕೆ ನನ್ನ ಶೈಕ್ಷಣಿಕ ಸಂಸ್ಥೆಗಳ ಉಸ್ತುವಾರಿ ನೋಡಿಕೊಳ್ಳಲು ಕುಟುಂಬದ ಸದಸ್ಯರಿಗೆ ಜವಾಬ್ದಾರಿ ನೀಡಿದ್ದೇನೆ ಎಂದಿದ್ದಾರೆ. ಅಲ್ಲದೆ, ನಾನು ರಾಯಲ್ ಚಾಲೆಂಜ್ ವಿಸ್ಕಿಯನ್ನೇ ಕುಡಿಯಲ್ಲ. ನನಗೇಕೆ ಆರ್‌ಸಿಬಿ ಟೀಮ್ ಬೇಕು? ಎಂದು ಪ್ರಶ್ನೆ ಮಾಡುವ ಮೂಲಕ ಗಾಳಿ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು...

ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ!

ಮತ್ತೊಂದು ಕಡೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನಾನು ರಾಯಲ್ ಚಾಲೆಂಜ್ ವಿಸ್ಕಿಯನ್ನೇ ಕುಡಿಯಲ್ಲ ಅಂತಾ ಹೇಳಿದ ವಿಚಾರವನ್ನೇ ಮುಂದೆ ಇಟ್ಟುಕೊಂಡು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡ್ತಿದ್ದಾರೆ. ಹಾಗೇ, ಮತ್ತೇನು ಕುಡೀತಿರಿ ಸರ್? ಅಂತಾ ಕೇಳ್ತಿದ್ದಾರೆ ನೆಟ್ಟಿಗರು. ಇದರ ಜೊತೆಗೆ ಆರ್‌ಸಿಬಿ ತಂಡವನ್ನು ಕರ್ನಾಟಕದಲ್ಲಿ ಪ್ರಭಾವಿ ರಾಜಕಾರಣಿ ಒಬ್ಬರು ಖರೀದಿ ಮಾಡುತ್ತಾರೆ ಅನ್ನೋ ಸುದ್ದಿಗೂ ಬ್ರೇಕ್ ಬಿದ್ದಿದ್ದು, ಆರ್‌ಸಿಬಿ ಅಭಿಮಾನಿಗಳು ಇದೀಗ ಮುಂದಿನ ಸಲ ಕೂಡ ಕಪ್ ನಮ್ದೇ ಅಂತಾ ಹೇಳುತ್ತಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+