RCB VS CSK: ಆರ್‌ಸಿಬಿ ಮ್ಯಾಚ್ ನೋಡಿದ ಸಿಎಂ ಸಿದ್ದರಾಮಯ್ಯ & ಶಿವಣ್ಣ!
ಬೆಂಗಳೂರು ಇವತ್ತು ಪೂರ್ತಿ ಚಿನ್ನಸ್ವಾಮಿ ಕ್ರೀಡಾಂಗಣದ ಮೇಲೆ ಗಮನ ಇಟ್ಟು ಕಾಯ್ತಿದೆ. ಯಾಕಂದ್ರೆ ಇಂದು ಆರ್‌ಸಿಬಿ & ಸಿಎಸ್‌ಕೆ ನಡುವೆ ಮಹತ್ವದ ಮ್ಯಾಚ್ ನಡೆಯುತ್ತಿದೆ. ಇದೇ ಕಾರಣಕ್ಕೆ, ಕೋಟ್ಯಂತರ ಅಭಿಮಾನಿಗಳು ಆರ್‌ಸಿಬಿ ಬೆಂಗಳೂರು ತಂಡದ ಗೆಲುವಿಗಾಗಿ ಈಗ ಪ್ರಾರ್ಥನೆ ಮಾಡುತ್ತಿದ್ದಾರೆ. ಹೀಗಿದ್ದಾಗ RCB ಮ್ಯಾಚ್ ನೋಡಲು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು!
ಆರ್‌ಸಿಬಿ 13 ಪಂದ್ಯ ಆಡಿದ್ದು, 6 ಪಂದ್ಯದಲ್ಲಿ ಗೆದ್ದು 7 ಪಂದ್ಯ ಸೋತಿದೆ. ಆದರೆ ಮುಂದಿನ ಹಂತಕ್ಕೆ ಹೋಗಲು ಆರ್‌ಸಿಬಿ ಬೆಂಗಳೂರು ತಂಡ ಇಂದಿನ ಮ್ಯಾಚ್ ಗೆಲ್ಲಲೇಬೇಕಿದೆ. ಇಲ್ಲವಾದ್ರೆ ಆರ್‌ಸಿಬಿ ತಂಡಕ್ಕೆ ಅವಕಾಶ ಮಿಸ್ ಆಗಲಿದ್ದು, ಚೆನ್ನೈ ತಂಡವೇ ಮುಂದಿನ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಮ್ಯಾಚ್ ನೋಡಲು ಕ್ರೀಡಾಂಗಣಕ್ಕೆ ಬಂದು ಬೆಂಬಲ ನೀಡುತ್ತಿದ್ದಾರೆ. ಇದರ ಜೊತೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ & ನಟ ಶಿವಣ್ಣ ಕೂಡ ಮ್ಯಾಚ್ ನೋಡಲು ಬಂದಿದ್ದರು.

ಸಿದ್ದಣ್ಣ + ಶಿವಣ್ಣ = ಆರ್‌ಸಿಬಿಗೆ ಬೆಂಬಲ!
ಆರ್‌ಸಿಬಿ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಸ್ಯಾಂಡಲ್‌ವುಡ್ ಸ್ಟಾರ್ ಶಿವಣ್ಣ ಕೂಡ ಬೆಂಬಲ ನೀಡಿದರು. 'ಆರ್‌ಸಿಬಿ' ಜರ್ಸಿ ಹಾಕಿಕೊಂಡೇ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ನಟ ಶಿವರಾಜ್‌ಕುಮಾರ್ ಆತ್ಮೀಯವಾಗಿ ಮಾತನಾಡಿದರು. ಅಲ್ಲದೆ ಸಂಪುಟ ದರ್ಜೆಯ ಸಚಿವರು ಹಾಗೂ ಅಧಿಕಾರಿಗಳೂ ಕೂಡ ಈ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಿದ್ದರಾಮಯ್ಯ ಅವರ ಜೊತೆಗೆ ಬಂದಿದ್ದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್.ಸಿ.ಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ವೀಕ್ಷಿಸಿದೆ.
— Siddaramaiah (@siddaramaiah) May 18, 2024
ಈ ನಿರ್ಣಾಯಕ ಪಂದ್ಯದಲ್ಲಿ ನಮ್ಮವರು ಗೆದ್ದು ಮುಂದಿನ ಹಂತಕ್ಕೆ ಹೋಗಲಿ ಎಂಬ ಹಾರೈಕೆ ನನ್ನದು. #ಈಸಲಕಪ್ನಮ್ದೆ pic.twitter.com/2OQKjuY9EW
219 ರನ್‌ಗಳ ಗುರಿ!
ಆರ್‌ಸಿಬಿ ತಂಡ ಇಂದು ಟಾಸ್ ಸೋತು ಬ್ಯಾಟಿಂಗ್ ಮಾಡಿತ್ತು. ಟಾಸ್ ಗೆದ್ದ ತಕ್ಷಣ ಚೆನ್ನೈ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಫಾಫ್ ಡುಪ್ಲೆಸಿಸ್ ಜೊತೆಗೆ ಪಂದ್ಯ ಆರಂಭಿಸಿದ್ದ ವಿರಾಟ್ ಕೊಹ್ಲಿ, 47 ರನ್ ಬಾರಿಸಿ ಕೇವಲ 29 ಬಾಲ್ ಬಳಸಿದರು. ಹಾಗೇ ಫಾಫ್ ಡು ಪ್ಲೆಸಿಸ್ ಕೂಡ 39 ಬಾಲ್ ಬಳಸಿ 54 ರನ್ ಬಾರಿಸಿ ಗಮನ ಸೆಳೆದರು.
ವಿರಾಟ್ ಕೊಹ್ಲಿ ಒಟ್ಟು 4 ಸಿಕ್ಸರ್ & 3 ಬೌಂಡರಿ ಬಾರಿಸಿದ್ದು, ಫಾಫ್ ಡು ಪ್ಲೆಸಿಸ್ 3 ಸಿಕ್ಸರ್ & 3 ಬೌಂಡರಿ ಬಾರಿಸಿದ್ದಾರೆ. ಇಬ್ಬರು ಔಟ್ ಆದ ನಂತರ ರಜತ್ ಪಾಟಿದಾರ್, 41 ರನ್ ಗಳಿಸಿ ಮಿಂಚಿದರೆ ಕ್ಯಾಮರೂನ್ ಗ್ರೀನ್ 38 ರನ್ ಚಚ್ಚಿ ಆರ್‌ಸಿಬಿ ತಂಡಕ್ಕೆ ನೆರವಾದರು. ಆರ್‌ಸಿಬಿ ಒಟ್ಟು 218 ರನ್ ಗಳಿಸಿದ್ದು ಈ ಮೂಲಕ ಚೆನ್ನೈ ತಂಡಕ್ಕೆ 219 ರನ್‌ಗಳ ಗುರಿ ನೀಡಿದೆ. ಈ ಪಂದ್ಯವನ್ನು ಆರ್‌ಸಿಬಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಗೆಲ್ಲದಿದ್ದರೆ, ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗಲು ಆಗುವುದಿಲ್ಲ.
ವಿಜಯ್ ಮಲ್ಯ ಸ್ಪೆಷಲ್ ಸಂದೇಶ!
ಆರ್‌ಸಿಬಿ ತಂಡಕ್ಕೆ ಶುಭಾಶಯ ಹೇಳಿರುವ ವಿಜಯ್ ಮಲ್ಯ, 'ಅಗ್ರ ನಾಲ್ಕರಲ್ಲಿ ಅರ್ಹತೆಯ ಗಿಟ್ಟಿಸಿ, ಐಪಿಎಲ್ ಪ್ಲೇಆಫ್ ತಲುಪಿದ್ದಕ್ಕೆ ಆರ್‌ಸಿಬಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನಿರಾಶಾದಾಯಕ ಆರಂಭದ ನಂತರ ಕೂಡ ಉತ್ತಮ ನಿರ್ಣಯ ಮತ್ತು ಕೌಶಲ್ಯವು ಈ ಗೆಲುವಿನ ಅದ್ಭುತ ಸನ್ನಿವೇಶ ಸೃಷ್ಟಿಸಿದೆ. ಟ್ರೋಫಿ ಗೆಲ್ಲಲು ಮುನ್ನುಗ್ಗಿ, ಮತ್ತಷ್ಟು ಮೇಲಕ್ಕೆ ಮುನ್ನುಗ್ಗಿ.' ಎಂದು ಆರ್‌ಸಿಬಿ ತಂಡದ ಆಟಗಾರರಿಗೆ ಮದ್ಯದ ದೊರೆ ಎನ್ನಿಸಿಕೊಂಡಿದ್ದ, RCB ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ವಿಶ್ ಮಾಡಿದ್ದಾರೆ. ಇದೀಗ ವಿಜಯ್ ಮಲ್ಯ ಆರ್‌ಸಿಬಿ ತಂಡಕ್ಕೆ ವಿಶ್ ಮಾಡಿ, ಟ್ವೀಟ್ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ.
ಕ್ರಿಸ್ ಜೊತೆ ರಿಷಬ್ ಪಂದ್ಯ ವೀಕ್ಷಣೆ!
ಗ್ಯಾಲರಿಯಲ್ಲಿ ಕೂತು ಮ್ಯಾಚ್ ನೋಡಿದ ರಿಷಬ್ ಶೆಟ್ಟಿ & ಕ್ರಿಸ್ ಗೇಲ್ ಸಖತ್ ಎಂಜಾಯ್ ಮಾಡಿದ್ರು. ಹೀಗಿದ್ದಾಗ, ಮೊಹಮ್ಮದ್ ಸಿರಾಜ್ ಮ್ಯಾಚ್ ಮುಗಿದ ನಂತರ ಬಂದು ಒಂದು ಸಲ್ಯೂಟ್ ಹಾಕಿದ್ರು. ಕ್ರಿಸ್ ಗೇಲ್ ಹಾಗೂ ರಿಷಬ್ ಶೆಟ್ಟಿ ಅವರನ್ನ ಮಾತನಾಡಿಸಿದರು. ಈ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದೆ. ಇದರ ಜೊತೆಗೆ ರಿಷಬ್ ಶೆಟ್ಟಿ ಕೂಡ ಕೈಯಲ್ಲಿ ಆರ್‌ಸಿಬಿ ಬಾವುಟ ಹಿಡಿದು ಕ್ರಿಸ್ ಗೇಲ್ ಅವರ ಜೊತೆಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಈ ಮೂಲಕ ಕಾಂತಾರ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ಹಲ್‌ಚಲ್ ಎಬ್ಬಿಸಿದ್ದಾರೆ. ಈಗ ರಿಷಬ್ ಶೆಟ್ಟಿ ಅವರು ಆರ್‌ಸಿಬಿ ಮ್ಯಾಚ್ ನೋಡಿರುವ ಫೋಟೋಸ್ ವೈರಲ್ ಆಗುತ್ತಿವೆ.












Click it and Unblock the Notifications