Get Updates
Get notified of breaking news, exclusive insights, and must-see stories!

ಆನ್‍ಲೈನ್ ಗೇಮಿಂಗ್ ನಿಷೇಧದ ನಂತರ ಕರ್ನಾಟಕ ಚೆಸ್‍ಗೆ ಹೊಡೆತ: ಕೆಎಸ್‍ಸಿಎ

ಬೆಂಗಳೂರು, ಡಿಸೆಂಬರ್ 14: ಕರ್ನಾಟಕ ಸರ್ಕಾರ "ಗೇಮ್ ಆಫ್ ಸ್ಕಿಲ್" (ಕೌಶಲ್ಯದ ಆಟ)ಸೇರಿದಂತೆ ಆನ್‍ಲೈನ್ ಗೇಮಿಂಗ್‍ನ ನಿಷೇಧವನ್ನು ಇತ್ತೀಚೆಗೆ ಅನುಷ್ಠಾನಕ್ಕೆ ತಂದಿರುವುದರಿಂದ ರಾಜ್ಯದಲ್ಲಿ ಚೆಸ್ ಕ್ರೀಡಾ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿದೆ ಎಂದು ಕರ್ನಾಟಕದಲ್ಲಿ ಚೆಸ್ ಕ್ರೀಡೆಗೆ ಅಗ್ರ ಸಂಸ್ಥೆಯಾದ ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ (ಕೆಎಸ್‍ಸಿಎ) ಇಂದು ಹೇಳಿದೆ. ಕಾರ್ಪೊರೇಟ್ ಪ್ರಾಯೋಜಕತ್ವಗಳಿಗೆ ಅದರಲ್ಲೂ ಈ ನಿಷೇಧದಿಂದ ಪರಿಣಾಮಕ್ಕೊಳಗಾದ ಆನ್‍ಲೈನ್ ಸ್ಕಿಲ್ ಗೇಮಿಂಗ್ ಸಂಸ್ಥೆಗಳಿಂದ ಪ್ರಾಯೋಜಕತ್ವಗಳಿಗೆ ಅಡ್ಡಿಯಾಗಿದೆ ಮತ್ತು ಯುಕೆಸಿಎನಂತಹ ಸಂಘಟನೆಗಳು ಉಳಿದುಕೊಳ್ಳಲು ಕಷ್ಟಪಡುತ್ತಿವೆ ಎಂದು ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಅಧ್ಯಕ್ಷರಾದ ಡಿ.ಪಿ. ಅನಂತ ಅವರು ಹೇಳಿದರು.

ಚೆಸ್ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದ್ದು, ರಾಜ್ಯದ ಎಲ್ಲ ಭಾಗಗಳಲ್ಲಿ ಆಟಗಾರರಿದ್ದಾರೆ. ಪ್ರಸ್ತುತ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಟೂರ್ನಿಗಳಲ್ಲಿ ರಾಜ್ಯಕ್ಕೆ ಅನೇಕ ಗೌರವಗಳನ್ನು ತಂದುಕೊಟ್ಟಿರುವ 6000ಕ್ಕೂ ಹೆಚ್ಚಿನ ನೋಂದಾಯಿತ ಆಟಗಾರರು ಇದ್ದಾರೆ. ಈ ಹಂತದಲ್ಲಿ "ಗೇಮ್ ಆಫ್ ಸ್ಕಿಲ್" ಸೇರಿದಂತೆ ಆನ್‍ಲೈನ್ ಗೇಮಿಂಗ್‍ನ ನಿಷೇಧವು ಕಾರ್ಪೊರೇಟ್ ಪ್ರಾಯೋಜಕತ್ವ ಮತ್ತು ಟೂರ್ನಮೆಂಟ್‍ಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಿದೆ. ಕಾರ್ಪೊರೇಟ್ ಪ್ರಾಯೋಜಕತ್ವ ಮತ್ತು ಟೂರ್ನಮೆಂಟ್‍ಗಳು ಇಲ್ಲವಾಗುತ್ತಿದ್ದು ಇದು ಚೆಸ್ ಪರಿಸರ ವ್ಯವಸ್ಥೆಗೆ ಸ್ಪಷ್ಟ ಹಿನ್ನಡೆಯಾಗಿದೆ. ನಿಷೇಧದಿಂದ ಉಂಟಾಗಿರುವ ಅನಿಶ್ಚಿತತೆಯಿಂದಾಗಿ ಪ್ರಾಯೋಜಕತ್ವಗಳಿಗೆ ಅಡ್ಡಿಯಾಗಿದೆ.

"ಗೌರವಾನ್ವಿತ ಕರ್ನಾಟಕ ಸರ್ಕಾರ ಕಾನೂನಿನಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ಮತ್ತು ರಾಜ್ಯ ಮತ್ತು ದೇಶದಲ್ಲಿ ಚೆಸ್‍ನಂತಹ ಕೌಶಲ್ಯದ ಆಟಗಳು ಬೆಳೆಯಲು ನೆರವಾಗುವಂತೆ ನಾವು ಮನವಿ ಮಾಡಿಕೊಳ್ಳುತ್ತೇವೆ" ಎಂದು ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಅಧ್ಯಕ್ಷರಾದ ಡಿ.ಪಿ. ಅನಂತ ಕೋರಿದ್ದಾರೆ.

Karnataka chess takes a hit after ban on online-gaming including the “game of skill”: KSCA

ಆನ್‍ಲೈನ್ ಜೂಜು, ಬೆಟ್ಟಿಂಗ್ ಮತ್ತು ಪಣವನ್ನು ನಿಷೇಧಿಸಲು ಕರ್ನಾಟಕ ಪೊಲೀಸ್ ಕಾಯ್ದೆಯು ಇತ್ತೀಚೆಗೆ ತನ್ನ ಗೇಮಿಂಗ್ ಕಾನೂನಿಗೆ ತಿದ್ದುಪಡಿ ತಂದಿದೆ. ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ 2021 ತನ್ನ ಸದಸ್ಯ ಫ್ಯಾಂಟಸಿ ಸ್ಪೋರ್ಟ್ಸ್‌ ಆಪರೇಟರ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿ, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ಅಭಿಪ್ರಾಯ ಹಂಚಿಕೊಂಡಿರುವ ಭಾರತೀಯ ಫ್ಯಾಂಟಸಿ ಕ್ರೀಡೆಗಳ ಒಕ್ಕೂಟ (ಎಫ್‍ಐಎಫ್‍ಎಸ್) ನಮಗೆ ಸಲಹೆ ನೀಡಿದೆ. ಏಕೆಂದರೆ ಫ್ಯಾಂಟಸಿ ಕ್ರೀಡೆಗಳ ಈ ಎಫ್‍ಐಎಫ್‍ಎಸ್ ಫಾರ್ಮ್ಯಾಟ್ ಅನ್ನು ಭಾರತದ ಗೌರವಾನ್ವಿತ ನ್ಯಾಯಾಲಯಗಳು ಜೂಜು, ಬೆಟ್ಟಿಂಗ್ ಅಥವಾ ಪಣ ಎಂದು ಪರಿಗಣಿಸುವುದಿಲ್ಲ.

ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ, 2021 ಆನ್ಲೈನ್ ಜೂಜು, ಬೆಟ್ಟಿಂಗ್ ಮತ್ತು ಬಾಜಿಕಟ್ಟುವ ಎಲ್ಲಾ ವಿಧಗಳನ್ನು ("ಬಿಲ್") ನಿಷೇಧಿಸಲು ಗೇಮಿಂಗ್ ಮತ್ತು ಪೊಲೀಸ್ ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದೆ. ಸದರಿ ಮಸೂದೆಯು, ಸದುದ್ದೇಶದ ಶಾಸನವಾಗಿರುವುದರಿಂದ ಕಾನೂನುಬದ್ಧ ಆನ್ಲೈನ್ ಫ್ಯಾಂಟಸಿ ಕ್ರೀಡಾ ವ್ಯವಹಾರಗಳಿಗೆ ಗೊಂದಲ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿದೆ. ಸರ್ಕಾರದ ಕಾಳಜಿಗಳು ನ್ಯಾಯಸಮ್ಮತವಾಗಿರಬಹುದಾದರೂ, ಕಾನೂನುಬಾಹಿರ ಆನ್ಲೈನ್ ಜೂಜು, ಬೆಟ್ಟಿಂಗ್ ಮತ್ತು ಬಾಜಿಕಟ್ಟುವ ಪ್ಲಾಟ್ ಫಾರ್ಮ್ ಗಳಿಗೆ ಸರಿಸಮಾನವಾಗಿ ವ್ಯವಹರಿಸುವ ಮೂಲಕ ಕಾನೂನುಬದ್ಧ ವ್ಯವಹಾರಗಳಿಗೆ ದಂಡ ವಿಧಿಸುವುದರಿಂದ ಮಸೂದೆ ದಾರಿ ತಪ್ಪಿದಂತೆ ಕಾಣುತ್ತದೆ ಎಂದು ಆಲ್ ಇಂಡಿಯಾ ಗೇಮಿಂಗ್ ಫೇಡರೇಷನ್ (AIGF) ಅಭಿಪ್ರಾಯಪಟ್ಟಿದೆ.

ಆನ್ಲೈನ್ ಫ್ಯಾಂಟಸಿ ಕ್ರೀಡೆಗಳ ಕುರಿತು AIGF ಆಯೋಗದ ವರದಿಯ ಪ್ರಕಾರ, ಈ ವಲಯವು ಮುಂದಿನ ಕೆಲವು ವರ್ಷಗಳಲ್ಲಿ 12,000 ಕ್ಕಿಂತ ಹೆಚ್ಚಿನ ಹೆಚ್ಚುವರಿ ನುರಿತ ಎಂಜಿನಿಯರಿಂಗ್ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ, ರೂ. 10,000 ಕೋಟಿಗೂ ಅಧಿಕ ಎಫ್ಡಿಐಗಳನ್ನು ಆಕರ್ಷಿಸುತ್ತದೆ ಮತ್ತು ರೂ. 13,500 ಕೋಟಿಗೂ ಹೆಚ್ಚು ತೆರಿಗೆಗಳನ್ನು ಸರ್ಕಾರಕ್ಕೆ ಕೊಡುಗೆ ನೀಡುತ್ತದೆ. AIGF ಮತ್ತು ಅದರ ಸದಸ್ಯರು ನಿಶ್ಚಿತತೆಯು ಕಾನೂನಿನ ನಿಯಮಕ್ಕೆ ಅವಿಭಾಜ್ಯವಾಗಿದೆ ಎಂದು ದೃಢವಾಗಿ ನಂಬುತ್ತಾರೆ ಮತ್ತು ಆದ್ದರಿಂದ ಮಸೂದೆಯು ವ್ಯವಹಾರಗಳ, ಹೂಡಿಕೆದಾರರ ಸಮುದಾಯಕ್ಕೆ ಹಾಗೂ ಉದ್ಯಮದ ಕ್ರಮಬದ್ಧ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗ್ರಾಹಕರಿಗೆ ಖಚಿತತೆ ಮತ್ತು ಸ್ಪಷ್ಟತೆಯನ್ನು ಒದಗಿಸಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+