RCB: ಆರ್‌ಸಿಬಿ ಸೇರಿದ ವಿಕಿಪೀಡಿಯಾ; ಸಹಾಯ ಮಾಡಿದ್ದು ಯಾರು ಗೊತ್ತಾ?
ತಮ್ಮ ವಿನೂತನ ರೀತಿಯ ಹಾಸ್ಯದ ವಿಡಿಯೋ ಮೂಲಕ ಕನ್ನಡಿಗರ ಮನಗೆದ್ದಿರುವ ವಿಕಿಪಿಡಿಯಾ ಎಂದೇ ಹೆಸರಾಗಿರುವ ವಿಕಾಸ್ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಇನ್ಮುಂದೆ ಆರ್ ಸಿಬಿ ತಂಡದ ಜೊತೆ ಕೆಲಸ ಮಾಡಲಿದ್ದು, ಕನ್ನಡಿಗರನ್ನು ಮತ್ತಷ್ಟು ರಂಜಿಸಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಮವಾರ ತನ್ನ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ವಿಶೇಷ ವಿಡಿಯೋ ಹಂಚಿಕೊಂಡಿದ್ದು, ವಿಕಿಪೀಡಿಯಾ ಆರ್ ಸಿಬಿ ಸೇರಿರುವುದನ್ನು ಖಚಿತಪಡಿಸಿದೆ.

ಸೋಮು ಅಂಕಲ್ ಯಾರು? RCBಗೆ ಹೇಗೆ ಬಂದ್ರು? ಇದು ಯಾವ ಹೊಸ ಅಧ್ಯಾಯ, ಕಣ್ರೀ? ಎನ್ನುವ ಶೀರ್ಷಿಯಕೆಯೊಂದಿಗೆ ವಿಡಿಯೋ ಹಂಚಿಕೊಂಡಿದ್ದು, ಸೋಮು ತಾನು ಆರ್ ಸಿಬಿ ಸೇರಬೇಕು ಎಂದು ಫ್ರಾಂಚೈಸಿ ಜೊತೆ ಮಾತನಾಡುವುದು, ಅವರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟು ತಂಡಕ್ಕೆ ಸೇರಿಕೊಳ್ಳುವುದನ್ನು ತೋರಿಸಲಾಗಿದೆ.
ಇದಕ್ಕೆ ಸೋಮು-ಚಾರ ಎಂದು ಹೆಸರಿಟ್ಟಿದ್ದು ಇದೇ ಹೆಸರಿನಲ್ಲಿ ಇನ್ನು ಮುಂದೆ ಆರ್ ಸಿಬಿ ಜೊತೆಗಿನ ತಮಾಷೆಯ ವಿಡಿಯೋಗಳು ಬರಲಿವೆ ಎಂದು ತಿಳಿಸಿದೆ. ಈಗಾಗಲೇ ಡ್ಯಾನಿಶ್ ಸೇಠ್ ತಂಡದಲ್ಲಿದ್ದು, ಆಟಗಾರರ ಕಾಲೆಳೆಯುವುದು, ತಮಾಷೆ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅವರ ಜೊತೆಗೆ ಇದೀಗ ವಿಕಿಪೀಡಿಯಾ ತಂಡ ಕೂಡ ಸೇರಿಕೊಂಡಿದ್ದು, ಕ್ರೀಡಾಂಗಣದಲ್ಲಿ ಮಾತ್ರವಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕೂಡ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಸಿಗುವುದು ಖಚಿತವಾಗಿದೆ.
ವಿಕಿಪೀಡಿಯಾಗೆ ಸಹಾಯ ಮಾಡಿದ್ದು ಯಾರು?
ಸೋಮು (ವಿಕಿಪೀಡಿಯಾ) ಫ್ರಾಂಚೈಸಿಯ ಸಂದರ್ಶನದಲ್ಲಿ ಆರ್ ಸಿಬಿ ಬಗ್ಗೆ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ. ಇದಕ್ಕೆ ಸಹಾಯ ಮಾಡಿದ್ದು ಎನ್ನುವ ವಿಚಾರವನ್ನು ಕೊನೆಯಲ್ಲಿ ತೋರಿಸಲಾಗಿತ್ತದೆ. ತಂಡದ ಮಾಜಿ ಆಟಗಾರ, ಸದ್ಯ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿರುವ ದಿನೇಶ್ ಕಾರ್ತಿಕ್, ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಲು ಸೋಮುಗೆ ಸಹಾಯ ಮಾಡುತ್ತಾರೆ. ಕೊನೆಗೆ ಆರ್ ಸಿಬಿಗೆ ಸ್ವಾಗತ ಕೋರುತ್ತಾರೆ.












Click it and Unblock the Notifications