ಎಐಎಫ್‌ಎಫ್: ಕಲ್ಯಾಣ್ ಚೌಬೆ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಹ್ಯಾರಿಸ್ ಉಪಾಧ್ಯಕ್ಷ

ನವದೆಹಲಿ, ಸೆ. 2: ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ನೂತನ ಅಧ್ಯಕ್ಷರಾಗಿ ಮಾಜಿ ಆಟಗಾರ ಕಲ್ಯಾಣ್ ಚೌಬೆ ಆಯ್ಕೆಯಾಗಿದ್ದಾರೆ. ಇಂದು ಶುಕರವಾರ ನಡೆದ ಚುನಾವಣೆಯಲ್ಲಿ ಅವರು ಜಯಿಸಿದರು. ಎಐಎಫ್‌ಎಫ್್ನ 85 ವರ್ಷಗಳ ಇತಿಹಾಸದಲ್ಲಿ ಆಟಗಾರರೊಬ್ಬರು ಅಧ್ಯಕ್ಷರಾಗಿದ್ದು ಇದೇ ಮೊದಲು.

ಕಾಂಗ್ರೆಸ್ ಶಾಸಕ ಹಾಗು ಕರ್ನಾಟಕ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಎನ್ ಎ ಹ್ಯಾರಿಸ್ ಅವರು ಎಐಎಫ್‌ಎಫ್್ನ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಹ್ಯಾರಿಸ್ ಅವರು ಉಪಾಧ್ಯಕ್ಷ ಚುನಾವಣೆಯಲ್ಲಿ ರಾಜಸ್ಥಾನ್ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಮನ್ವೇಂದ್ರ ಸಿಂಗ್ ಅವರನ್ನು ಸೋಲಿಸಿದರು. ಅರುಣಾಚಲದ ಕಿಪಾ ಅಜಯ್ ಅವರು ಎಐಎಫ್‌ಎಫ್‌ನ ಕೋಶಾಧಿಕಾರಿ ಸ್ಥಾನವನ್ನು ಗೆದ್ದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರತದ ಸರ್ವಶ್ರೇಷ್ಠ ಫುಟ್ಬಾಲ್ ಆಟಗಾರ ಎನಿಸಿದ ಬೈಚುಂಗ್ ಭುಟಿಯಾ ಹೀನಾಯ ಸೋಲನುಭವಿಸಿದರು. ಭುಟಿಯಾ ವಿರುದ್ಧ ಕಲ್ಯಾಣ್ ಚೌಬೆ 33-1 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

Kalyan Chaubey Becomes AIFF President, Karnataka NA Haris Vice-president, Bhaichung Bhutia Shocked

ಕಲ್ಯಾಣ್ ಚೌಬೆ ಬಿಜೆಪಿ ಮುಖಂಡರಾಗಿದ್ದು, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಕೃಷ್ಣಾನಗರ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಎಐಎಫ್‌ಎಫ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಕಲ್ಯಾಣ್ ಚೌಬೆ ಹೆಸರನ್ನು ಗುಜರಾತ್ ಫುಟ್ಬಾಲ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮುಲ್ರಾಜ್‌ಸಿಂಗ್ ಚುಡಾಸಮ ಪ್ರಸ್ತಾಪಿಸಿದರು. ಅರುಣಾಚಲಪ್ರದೇಶ ಫುಟ್ಬಾಲ್ ಸಂಸ್ಥೆ ಕಾರ್ಯದರ್ಶಿ ಕಿಪಾ ಅಜಯ್ ಅನುಮೋದಿಸಿದರು.

ಇನ್ನೊಂದೆಡೆ ಬೈಚುಂಗ್ ಭುಟಿಯಾ ಹೆಸರನ್ನು ಒಬ್ಬರೂ ಪ್ರಸ್ತಾಪಿಸಲಿಲ್ಲ. ಅವರು ಪ್ರತಿನಿಧಿಸುವ ಸಿಕ್ಕಿಂ ಫುಟ್ಬಾಲ್ ಸಂಸ್ಥೆಯಿಂದಲೂ ಯಾರೂ ಹೆಸರು ಪ್ರಸ್ತಾಪಿಸಲಿಲ್ಲ.

ಒಂದೇ ತಂಡದಲ್ಲಿ ಅಡಿದವರು
ಕಲ್ಯಾಣ್ ಚೌಬೆ ಮತ್ತು ಬೈಚುಂಗ್ ಭುಟಿಯಾ ಇಬ್ಬರೂ ಒಂದೇ ತಂಡದಲ್ಲಿ ಆಡಿದವರು. ಬೈಚುಂಗ್ ಭುಟಿಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದವರು. ಕಲ್ಯಾಣ್ ಚೌಬೆ ಭಾರತ ರಾಷ್ಟ್ರೀಯ ತಂಡದಲ್ಲಿ ಹೆಚ್ಚು ಆಡಿದವರಲ್ಲ. ಆದರೆ, ಚೌಬೆ ಮತ್ತು ಭುಟಿಯಾ ಇಬ್ಬರೂ ಈಸ್ಟ್ ಬೆಂಗಾಳ್ ಕ್ಲಬ್‌ನಲ್ಲಿ ಒಟ್ಟಿಗೆ ಆಡಿದ್ದಾರೆ. ಭಾರತ ತಂಡದಲ್ಲೂ ಒಟ್ಟಿಗೆ ಆಡಿದ್ದಾರೆ.

ಕಲ್ಯಾಣ್ ಚೌಬೆ ಗೋಲ್ ಕೀಪರ್ ಆದರೆ, ಭುಟಿಯಾ ಸ್ಟ್ರೈಕರ್ ಆಗಿದ್ದವರು. ಚೌಬೆ 1997 ಮತ್ತು 2001, ಎರಡು ಬಾರಿ ವರ್ಷದ ಗೋಲ್‌ಕೀಪರ್ ಪ್ರಶಸ್ತಿ ಪಡೆದಿದ್ದರು. ಬೈಚುಂಗ್ ಭುಟಿಯಾ 1995, 2008ರಲ್ಲಿ ವರ್ಷದ ಅಟಗಾರ ಪ್ರಶಸ್ತಿ ಗೌರವ ಪಡೆದಿದ್ದರು.

Kalyan Chaubey Becomes AIFF President, Karnataka NA Haris Vice-president, Bhaichung Bhutia Shocked

ಕಲ್ಯಾಣ್ ಚೌಬೆ ವೃತ್ತಿಜೀವನ
1976 ಡಿಸೆಂಬರ್ 16ರಂದು ಕೋಲ್ಕತಾದಲ್ಲಿ ಜನಿಸಿದ ಕಲ್ಯಾಣ್ ಚೌಬೆ ಟಾಟಾ ಫುಟ್ಬಾಲ್ ಅಕಾಡೆಮಿಯ ಆಟಗಾರನಾಗಿದ್ದು, 1995ರಿಂದ ವೃತ್ತಿಜೀವನಕ್ಕೆ ಕಾಲಿಟ್ಟಿದ್ದರು. ಭಾರತದ ವಿವಿಧ ಮಟ್ಟದ ಕಿರಿಯರ ತಂಡಗಳಲ್ಲಿ ಸ್ಥಾನ ಪಡೆದು ರಾನ್, ಸೌತ್ ಕೊರಿಯಾ ಮೊದಲಾದ ದೇಶಗಳಲ್ಲಿ ಆಡಿದ್ದಾರೆ. ಭಾರತ ರಾಷ್ಟ್ರೀಯ ತಂಡದಲ್ಲಿ 1999-2006ರವರೆಗೂ ಹಲವು ಪಂದ್ಯಗಳಲ್ಲಿ ಆಡಿದ್ದಾರೆ.

ಐ-ಲೀಗ್‌ನಲ್ಲಿ ಅವರು ಮೋಹನ್ ಬಗಾನ್, ಈಸ್ಟ್ ಬೆಂಗಾಳ್, ಸಲ್ಗಾಂವ್ಕರ್, ಮಹೀಂದ್ರ ಉನೈಟೆಡ್, ಜೆಸಿಟಿ ಫಗವಾರ ಮತ್ತು ಮುಂಬೈ ಎಫ್‌ಸಿ ತಂಡಗಳ ಪರ ಆಡಿದ್ದಾರೆ. ಬಾಂಗ್ಲಾದೇಶದ ಮುಕ್ತಿಯೋಧ ಫುಟ್ಬಾಲ್ ತಂಡದಲ್ಲೂ ಅವರು ಆಡಿದ್ದಾರೆ.

ಜರ್ಮನಿಯ ಫುಟ್ಬಾಲ್ ತಂಡಗಳ ಆಯ್ಕೆ ಟ್ರಯಲ್‌ನಲ್ಲಿ ಪಾಲ್ಗೊಂಡಿದ್ದರು. ಆದರೆ, ತಂಡದಲ್ಲಿ ಸ್ಥಾನ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ.

ಆಟಗಾರನಾಗಿ ನಿವೃತ್ತನಾದ ಬಳಿಕ ಕಲ್ಯಾಣ್ ಚೌಬೆ ಮಾಡೆಲಿಂಗ್ ವೃತ್ತಿಗೆ ಇಳಿದರು. ಬಳಿಕ ಮೋಹನ್ ಬಗಾನ್ ಅಕಾಡೆಮಿಗೆ 2010ರಿಂದ 2013ರವರೆಗೆ ಸಿಇಒ ಆಗಿ ಕೆಲಸ ಮಾಡಿದರು. 2015ರಲ್ಲಿ ಅವರು ರಾಜಕೀಯ ಪ್ರವೇಶ ಮಾಡಿ ಬಿಜೆಪಿ ಸೇರ್ಪಡೆಯಾದರು. 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದರು.

Kalyan Chaubey Becomes AIFF President, Karnataka NA Haris Vice-president, Bhaichung Bhutia Shocked

ಇನ್ನೊಂದೆಡೆ, ಬೈಚುಂಗ್ ಭುಟಿಯಾ ಕೂಡ ಆಟಗಾರನಾಗಿ ನಿವೃತ್ತಿಯಾದ ಬಳಿಕ ರಾಜಕೀಯಕ್ಕೆ ಕಾಲಿಟ್ಟು ಕೈಸುಟ್ಟುಕೊಂಡವರೇ. ಈಗ ಎಐಎಫ್‌ಎಫ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡು ಆಘಾತ ಅನುಭವಿಸಿದ್ಧಾರೆ.

ಎಐಎಫ್‌ನ ಹಿಂದಿನ ಅಧ್ಯಕ್ಷರು
ಪ್ರಫುಲ್ ಪಟೇಲ್, ಪ್ರಿಯ ರಂಜನ್ ದಾಸ್ ಮುನ್ಷಿ, ಖಲೀಪಾ ಜಿಯಾವುದ್ದೀನ್, ನೂರುಲ್ ಅಮಿನ್, ಮನೀಂದ್ರ ನಾಥ್ ದತ್ತ ರೇ, ಮೊಯಿನ್ ಉಲ್ ಹಕ್, ಪಂಕಜ್ ಗುಪ್ತಾ, ಡಿ ಮೋಯಿರ್, ಬ್ರಿಗೇಡಿಯರ್ ಡಾರ್ಮನ್ ಸ್ಮಿತ್, ಬ್ರಿಗೇಡಿಯರ್ ವಿಎಚ್‌ಬಿ ಮೆಜೆಂಡೈನ್.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+