IPL 2025: ಐಪಿಎಲ್‌ಗೆ ಮುನ್ನ ಇರ್ಫಾನ್ ಪಠಾಣ್‌ಗೆ ಶಾಕ್‌! ಕಾಮೆಂಟೆಟರ್ ಕೆಲಸದಿಂದ ವಜಾ

ಭಾರತ ತಂಡದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಇರ್ಫಾನ್ ಪಠಾಣ್‌ಗೆ ಐಪಿಎಲ್‌ಗೆ ಮುನ್ನ ದೊಡ್ಡ ಆಘಾತ ಎದುರಾಗಿದೆ. ಐಪಿಎಲ್‌ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡಲು ಸಜ್ಜಾಗುತ್ತಿದ್ದ ಅವರಿಗೆ ಶಾಕ್ ಕೊಟ್ಟಿದ್ದು ಅವರನ್ನು ವಜಾಗೊಳಿಸಲಾಗಿದೆ. ಈ ಬಾರಿ ಐಪಿಎಲ್‌ನಲ್ಲಿ ಇರ್ಫಾನ್ ಪಠಾಣ್ ಅವರ ಕಾಮೆಂಟರಿ ಕೇಳುವುದು ಅನುಮಾನವಾಗಿದೆ.

ಮೈಖೇಲ್ ವರದಿ ಮಾಡಿರುವ ಪ್ರಕಾರ, ಭಾರತೀಯ ಆಟಗಾರರ ವಿರುದ್ಧದ ವೈಯಕ್ತಿಕ ದ್ವೇಷದ ಕಾಮೆಂಟ್ ಮಾಡುವುದಕ್ಕಾಗಿ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಇಂದಿನಿಂದ (ಮಾರ್ಚ್ 22 ಶನಿವಾರ) ಐಪಿಎಲ್ 2025ರ ಆವೃತ್ತಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್ ಮತ್ತು ಆರ್ ಸಿಬಿ ಸೆಣೆಸಲು ಸಜ್ಜಾಗಿವೆ.

irfan pathan snubbed from ipl 2025 commentary duties

ಆಟಗಾರರ ದೂರು?

ಮೈಖೇಲ್ ವರದಿ ಮಾಡಿರುವ ಪ್ರಕಾರ, ಕೆಲವು ಆಟಗಾರರು ಇರ್ಫಾನ್ ಪಠಾಣ್ ಅವರ ಬಗ್ಗೆ ದೂರು ನೀಡಿದ್ದಾರೆ, ಇರ್ಫಾನ್ ತಮ್ಮ ವೈಯಕ್ತಿಕ ತೀರ್ಪುಗಳನ್ನು ವೀಕ್ಷಕ ವಿವರಣೆ ಸಂದರ್ಭದಲ್ಲಿ ಪ್ರತಿಪಾದಿಸುತ್ತಾರೆ ಎಂದು ಆರೋಪಿಸಲಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಇರ್ಫಾನ್ ಪಠಾಣ್ ಮಾಡಿದ ಕಾಮೆಂಟ್‌ಗೆ ಅಸಮಾಧಾನಗೊಂಡಿದ್ದ ಭಾರತ ತಂಡದ ಕ್ರಿಕೆಟಿಗರೊಬ್ಬರು ಅವರನ್ನು ತಡೆಯುವ ಹಂತಕ್ಕೂ ಹೋಗಿದ್ದರೂ ಎಂದು ತಿಳಿಸಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ಇರ್ಫಾನ್ ಪಠಾಣ್ ಎಡವಟ್ಟು ಮಾಡಿಕೊಳ್ಳದೇ ಇದ್ದರೆ ಐಪಿಎಲ್‌ನಲ್ಲಿ ಅವರ ಹೆಸರು ಇರುತ್ತಿತ್ತು. ಕಳೆದ ಎರಡು ವರ್ಷಗಳಿಂದ ಅವರು ಕೆಲವು ಆಟಗಾರರ ವಿರುದ್ಧ ತಮ್ಮ ವೈಯಕ್ತಿಕ ಕಾಮೆಂಟ್‌ಗಳನ್ನು ವೀಕ್ಷಕ ವಿವರಣೆ ಸಂದರ್ಭದಲ್ಲಿ ಹಂಚಿಕೊಳ್ಳುತ್ತಿದ್ದರು ಇದರಿಂದ ಆಟಗಾರರು ಬೇಸರಗೊಂಡಿದ್ದರು ಎಂದು ಮೂಲವೊಂದು ತಿಳಿಸಿರುವುದಾಗಿ ಮೈಖೇಲ್ ವರದಿ ಮಾಡಿದೆ.

ಐಪಿಎಲ್ 2025 ರಲ್ಲಿ ಕಾಮೆಂಟರಿ ಕರ್ತವ್ಯದಿಂದ ವಜಾಗೊಂಡ ಬಳಿಕ ಇರ್ಫಾನ್ ಪಠಾಣ್ ಯೂಟ್ಯೂಬ್‌ನತ್ತ ಹೊರಟಿದ್ದಾರೆ. ಸೀದಿ ಬಾತ್ ಹೆಸರಿನಲ್ಲಿ ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸುವುದಾಗಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಹೊಸ ಯೂಟ್ಯೂಬ್ ಚಾನೆಲ್‌ಗೆ ಅಭಿಮಾನಿಗಳು ಪ್ರೀತಿ ಮತ್ತು ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಇಂದಿನಿಂದ ಐಪಿಎಲ್ ಹಬ್ಬ

ಕೊನೆಗೂ ಐಪಿಎಲ್ 2025 ಆವೃತ್ತಿಯ ಆರಂಭದ ದಿನ ಬಂದೇಬಿಟ್ಟಿದೆ, ಇನ್ನು ಎರಡು ತಿಂಗಳು ಅಭಿಮಾನಿಗಳಿಗೆ ಕ್ರಿಕೆಟ್ ರಸದೌತಣ ಸಿಗಲಿದೆ. 10 ಫ್ರಾಂಚೈಸಿಗಳು ಒಂದು ಪ್ರತಿಷ್ಠಿತ ಕಪ್‌ಗಾಗಿ ಸೆಣೆಸಲಾಡಲು ಸಜ್ಜಾಗಿವೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡವು ಆರ್ ಸಿಬಿ ವಿರುದ್ಧ ಸೆಣೆಸಲು ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+