ಇರಾನಿ ಕಪ್ 2022: ಶೇಷ ಭಾರತ ತಂಡಕ್ಕೆ ಹನುಮ ವಿಹಾರಿ ನಾಯಕ
ಮುಂಬೈ, ಸೆ. 29: ಇರಾನಿ ಕಪ್ ಆಡಲಿರುವ ಶೇಷ ಭಾರತ (Rest of India) ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ರಣಜಿ ವಿಜೇತ ತಂಡದ ವಿರುದ್ಧ ಶೇಷ ಭಾರತ ತಂಡವು ಅಕ್ಟೋಬರ್ 1 ರಿಂದ 5ರ ತನಕ ಸೆಣೆಸಲಿದೆ. ಕೋವಿಡ್ 19 ಸಾಂಕ್ರಾಮಿಕದಿಂದ ಕಳೆದ ಮೂರು ವರ್ಷಗಳಿಂದ ಇರಾನಿ ಕಪ್ ಆಯೋಜನೆ ಮಾಡಲು ಸಾಧ್ಯವಾಗಿರಲಿಲ್ಲ.
16 ಸದಸ್ಯರ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಹನುಮ ವಿಹಾರಿ ತಂಡದ ನಾಯಕರಾಗಿರುತ್ತಾರೆ. ಕರ್ನಾಟಕದಿಂದ ಮಯಾಂಕ್ ಅಗರವಾಲ್ ಮಾತ್ರ ಆಯ್ಕೆಯಾಗಿದ್ದಾರೆ. ಪಶ್ಚಿಮ ವಲಯಕ್ಕೆ ಆಡಿದ್ದ ಪ್ರಿಯಾಂಕ್ ಪಾಂಚಾಲ್ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ವೇಳೆ ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಪ್ರಿಯಾಂಕ್ ಪಾಂಚಾಲ್ ತಂಡಕ್ಕೆ ಆಯ್ಕೆಯಾಗಿದ್ದರು.
ವೇಗಿ ಉಮ್ರಾನ್ ಮಲೀಕ್, ಮುಂಬೈ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಕೂಡಾ ತಂಡದಲ್ಲಿ ಸ್ಥಾನದಲ್ಲಿದ್ದಾರೆ.

ಶೇಷ ಭಾರತ ತಂಡ:
ಹನುಮ ವಿಹಾರಿ(ನಾಯಕ), ಮಯಾಂಕ್ ಅಗರವಾಲ್, ಪ್ರಿಯಾಂಕ್ ಪಾಂಚಲ್, ಅಭಿಮನ್ಯು ಈಶ್ವರನ್, ಯಶ್ ಧುಲ್, ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್, ಕೆಎಸ್ ಭರತ್, ಉಪೇಂದ್ರ ಯಾದವ್, ಜಯಂತ್ ಯಾದವ್, ಸೌರಭ್ ಕುಮಾರ್, ಆರ್ ಸಾಯಿ ಕಿಶೋರ್, ಮುಕೇಶ್ ಕುಮಾರ್, ಉಮ್ರಾನ್ ಮಲೀಕ್, ಕುಲದೀಪ್ ಸೇನ್ ಹಾಗೂ ಅರ್ಝಾನ್ ನಾಗಸ್ವಲ್ಲ.












Click it and Unblock the Notifications