ಚಾಂಪಿಯನ್ ಪಟ್ಟಕ್ಕೇರಲು RCB ಮಾಸ್ಟರ್ ಪ್ಲ್ಯಾನ್: ವಿಶ್ವ ವಿಜೇತ ನಾಯಕನಿಗೆ ಗಾಳ?
ಬಾರ್ಬಡೋಸ್ ಅಂಗಳದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಆಗ ಟೀಮ್ ಇಂಡಿಯಾ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭಾರತದ ಫ್ಲ್ಯಾಗ್ ಪೋಟೋಗೆ ಪೋಸ್ ನೀಡಿದರು. ಇವರಿಬ್ಬರ ಈ ಫೋಟೋ ನೋಡಿದ ಅಭಿಮಾನಿಗಳು, ಐಪಿಎಲ್‌ನಲ್ಲಿ ಈ ಜೋಡಿ ಒಟ್ಟಾಗಿ ಆಡಿದರೆ ಹೇಗಿರುತ್ತದೆ ಎಂದು ಲೆಕ್ಕಾಚಾರ ಆರಂಭಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸದ್ಯ ಮುಂಬೈ ಇಂಡಿಯನ್ಸ್ ತಂಡದ ಅನುಭವಿ ಆಟಗಾರ. ಗುಜರಾತ್ ಟೈಟನ್ಸ್ ತಂಡದಿಂದ ಟ್ರೇಡ್ ಮಾಡಿ, ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ತಂಡಕ್ಕೆ ಕರೆಸಿಕೊಂಡು ಅವರಿಗೆ ನಾಯಕತ್ವ ನೀಡಿದ್ದರಿಂದ, ರೋಹಿತ್ ಅವರಿಗೆ ಬೇಸರ ಆಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಟೀಮ್ ಇಂಡಿಯಾ ಕ್ಯಾಪ್ಟನ್ ರೆಡ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಟ್ರೇಡ್ ಮೂಲಕ ಖರೀದಿ?
ಐಪಿಎಲ್ ಮುಗಿದು ತಿಂಗಳೇ ಮುಗಿದಿದೆ. ಅಸಲಿಗೆ ಈಗ ಟ್ರೇಡ್ ವಿಂಡೋ ಈಗ ಓಪನ್ ಆಗುತ್ತದೆ. ಆರ್‌ಸಿಬಿ ತಮ್ಮ ತಂಡದಲ್ಲಿರುವ ಆಟಗಾರರನ್ನು ಕೈ ಬಿಟ್ಟು ರೋಹಿತ್ ಶರ್ಮಾ ಅವರನ್ನು ಟ್ರೇಡ್ ಮಾಡಬಹುದಾಗಿದೆ. ಇನ್ನು ಆರ್‌ಸಿಬಿ 17ನೇ ಆವೃತ್ತಿಗಳಲ್ಲಿ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಬರವನ್ನು ರೋಹಿತ್, ವಿರಾಟ್ ಜೋಡಿ ನೀಗಿಸುತ್ತದೆ ಎಂದು ಅಭಿಮಾನಿಗಳು ವಿಶ್ವಾಸವನ್ನು ಹೊಂದಿದ್ದಾರೆ.
ವಿರಾಟ್‌ಗೆ ನಾಯಕತ್ವ?
ಫಾಫ್ ಡುಪ್ಲೇಸಿಸ್‌ಗೆ ಈಗ 40 ವರ್ಷ ಅವರು ಇನ್ನು ಒಂದು ಸೀಸನ್‌ನಲ್ಲಿ ಆರ್‌ಸಿಬಿ ಪರ ಆಡಬಹುದು. ಹೀಗಾಗಿ ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್ ಬೇರೆ ಕ್ಯಾಪ್ಟನ್ ಹುಡುಕಾಟದಲ್ಲಿದೆ. ಕೈಯಲ್ಲಿಯೇ ಬೆಣ್ಣೆಯನ್ನು ಇಟ್ಟುಕೊಂಡು ಬೇರೆ ಕಡೆ ಹುಡುಕುವ ಮುನ್ನ, ತಮ್ಮ ತಂಡದ ಆಟಗಾರರನ್ನೇ ಮನವೊಲಿಸುವ ಪ್ರಯತ್ನ ನಡಿಸೋಣ ಎಂಬ ಇರಾದೆ ಹೊಂದಿದ್ದಾರೆ. ನಿಜಕ್ಕೂ ಆರ್‌ಸಿಬಿ ಮ್ಯಾನೇಜ್ಮೆಂಟ್‌ನ ಪ್ಲ್ಯಾನ್ A ಇದೇ ಆಗಿದೆ. ಈ ಪ್ಲ್ಯಾನ್ ಕೈ ಹಿಡಿಯದೇ ಇದ್ದಲ್ಲಿ B ಪ್ಲ್ಯಾನ್‌ಗೂ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ.
ರೋಹಿತ್‌ಗೆ ಪಟ್ಟ?
ಮುಂಬೈ ಇಂಡಿಯನ್ಸ್ ತಂಡದಿಂದ ರೋಹಿತ್ ಶರ್ಮಾ ಅವರನ್ನು ಆರ್‌ಸಿಬಿ ತಂಡಕ್ಕೆ ಕರೆ ತಂದು ಅವರಿಗೆ ನಾಯಕತ್ವ ನೀಡುವ ಇರಾದೆ ಆರ್‌ಸಿಬಿ ಮ್ಯಾನೇಜ್ಮೆಂಟ್ ನದ್ದಾಗಿದೆ. ರೋಹಿತ್ ಹಾಗೂ ವಿರಾಟ್ ಇಬ್ಬರೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಇಬ್ಬರೂ ಸ್ಟಾರ್ ಆಟಗಾರರು ಐಪಿಎಲ್‌ನಲ್ಲಿ ಆಡಲಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅವರ ಅನುಭವವನ್ನು ಬಳಸಿಕೊಂಡು ಚಾಂಪಿಯನ್ ಪಟ್ಟಕ್ಕೇರುವ ಕನಸು ಆರ್‌ಸಿಬಿ ತಂಡದ್ದಾಗಿದೆ.

ಒಂದು ವೇಳೆ ಈ ಪ್ಲ್ಯಾನ್ ಸಕ್ಸಸ್ ಆಗಿದ್ದೇ ಆದಲ್ಲಿ ರೋಹಿತ್ ಹೆಗಲಿಗೆ, ಆರ್‌ಸಿಬಿ ಎರಡು ಮಹತ್ವದ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ರೋಹಿತ್ ಆರ್‌ಸಿಬಿ ನಾಯಕತ್ವ ಪಡೆಯುವುದಲ್ಲದೆ, ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಐದು ಬಾರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಚಾಂಪಿಯನ್ ಪಟ್ಟಕ್ಕೇರಿಸಿದ ರೋಹಿತ್ ಶರ್ಮಾ ಅವರಿಗೆ ಆರ್‌ಸಿಬಿ, ತಂಡಕ್ಕೆ ಸೇರಿಸಿಕೊಂಡು ಟಾಸ್ಕ್ ನೀಡಲು ಪ್ಲ್ಯಾನ್ ಹಾಕಿಕೊಂಡಿದೆ.
ಒಂದು ವೇಳೆ ಆರ್‌ಸಿಬಿ ಹಾಕಿಕೊಂಡ ಪ್ಲ್ಯಾನ್ ಸಕ್ಸಸ್ ಆದರೆ ಜೋಡೆತ್ತುಗಳು ಐಪಿಎಲ್‌ನಲ್ಲೂ ಕಮಾಲ್ ಮಾಡಬಹುದಾಗಿದೆ.
ಮೆಗಾ ಹರಾಜು
18ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಈ ವೇಳೆ ಆರ್‌ಸಿಬಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಅದರಂತೆ ಟೀಮ್ ಇಂಡಿಯಾದ ನಾಯಕನಿಗೆ ರೆಡ್ ಕಾರ್ಪೆಟ್ ಹಾಕಲು ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.












Click it and Unblock the Notifications