IPL 2025: ಐಪಿಎಲ್ ಹರಾಜು ಒಂದೇ, ಪಾಕಿಸ್ತಾನದ ಜಿಡಿಪಿ ಕೂಡ ಒಂದೇ!
ಪಾಪಿ ಪಾಕಿಸ್ತಾನ ಈಗ ಪರದೇಸಿ ಪಾಕಿಸ್ತಾನ ಆಗೋಗಿದೆ. ಪಾಕಿಸ್ತಾನದ ಸರ್ಕಾರ ಕೈಯಲ್ಲಿ ಕಾಸು ಇಲ್ಲದೆ ಊರೆಲ್ಲಾ ಸಾಲ ಮಾಡಿಕೊಂಡು ಕೂತಿದೆ. ಪರಿಸ್ಥಿತಿ ಹೀಗೆ ಕೈಮೀರಿದ್ದು, ಆ ದೇಶದಲ್ಲಿ ಜನರಿಗೆ ತುತ್ತು ಅನ್ನ ಸಿಗುವುದೇ ದೊಡ್ಡ ವಿಷಯವಾಗಿದೆ. ಇಂತಹ ಸಮಯದಲ್ಲೇ 2025ರ ಐಪಿಎಲ್ ಟೂರ್ನಿಗಾಗಿ ಭಾರತದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಈ ವೇಳೆ ಪಾಕಿಸ್ತಾನದ ಜಿಡಿಪಿ ಟ್ರೋಲ್ ಮಾಡಲಾಗುತ್ತಿದೆ!
ಭಾರತದ 'ಐಪಿಎಲ್' ಕ್ರೀಡಾಕೂಟ ಮೀರಿಸುವ ಮತ್ತೊಂದು ಕ್ರಿಕೆಟ್ ಲೀಗ್ ಹುಟ್ಟಿಕೊಂಡೇ ಇಲ್ಲ. ಅದರಲ್ಲೂ ಫುಟ್‌ಬಾಲ್ ನಂತರ ಅತಿದೊಡ್ಡ ಲೀಗ್ ಆಯೋಜನೆ ಮಾಡುತ್ತಿರುವ & ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿರುವ ಕ್ರೀಡೆ ಅಂದ್ರೆ ಅದು ಕ್ರಿಕೆಟ್. ಇದೇ ಕಾರಣಕ್ಕೆ ಭಾರತದಲ್ಲಿ ನಡೆಯುವ ಐಪಿಎಲ್ ಟೂರ್ನಿಗೆ ಸಾಕಷ್ಟು ಡಿಮ್ಯಾಂಡ್ ಇದ್ದು, ಈ ಒಂದು ಟೂರ್ನಿಗೆ ಆಯ್ಕೆ ಆಗಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಕನಸು. ಆದ್ರೆ ಪಾಕಿಸ್ತಾನದ ಆಟಗಾರರನ್ನು 'ಐಪಿಎಲ್' ಕ್ರೀಡಾಕೂಟಕ್ಕೆ ಸೇರಿಸುವುದಿಲ್ಲ, ಹೀಗಿದ್ದಾಗ ಪಾಕ್ ಆರ್ಥಿಕತೆ & ಮೈತುಂಬಾ ಸಾಲ ಮಾಡಿಕೊಂಡಿರುವ ವಿಚಾರ ಫುಲ್ ಟ್ರೋಲ್ ಆಗುತ್ತಿದೆ!

ಪಾಕಿಸ್ತಾನದ ಮಾನ ಮತ್ತೆ ಹರಾಜು!
ಕ್ರಿಕೆಟ್ ಜಗತ್ತಿಗೆ ದೊಡ್ಡ ತಿರುವು ನೀಡಿದ್ದೇ 'ಐಪಿಎಲ್' ಅಥವಾ 'ಇಂಡಿಯನ್ ಪ್ರಿಮಿಯರ್ ಲೀಗ್'. ಹೀಗೆ 'ಐಪಿಎಲ್' ಮಾಯಾ ಲೋಕದಲ್ಲಿ ಲಕ್ಷಗಳಿಗೆ ಬೆಲೆಯೇ ಇಲ್ಲ, ಏನಿದ್ದರೂ ಇಲ್ಲಿ ಕೋಟಿಯದ್ದೇ ಮಾತು. ಹೀಗೆ 2023ರ ಐಪಿಎಲ್ ಟೂರ್ನಿಯಲ್ಲಿ ಬಂದ ಒಟ್ಟು ಆದಾಯವೇ 11,769 ಕೋಟಿ ರೂಪಾಯಿ ಆಗಿತ್ತು. ಆದರೆ ಪಾಕಿಸ್ತಾನದ ಜಿಡಿಪಿಯೇ ಇಷ್ಟು ಇಲ್ಲ, ಇನ್ನು ಇಂತಹ ಪಾಕಿಸ್ತಾನ ಭಾರತದ ಬಗ್ಗೆ ಮಾತನಾಡುತ್ತೆ ಅಂತಾ ಟ್ರೋಲ್ ಮಾಡುತ್ತಿದ್ದಾರೆ ಜನ & ಭಾರತ ಕ್ರಿಕೆಟ್ ಟೀಂ ಬೆಂಬಲಿಗರು.
₹120 ಕೋಟಿ ರೂಪಾಯಿ ಪ್ರತಿ ತಂಡಕ್ಕೆ!
ಹೌದು, ಯಾವುದೇ ಒಂದು ತಂಡಕ್ಕೆ ಐಪಿಎಲ್ ಟೂರ್ನಿಯಲ್ಲಿ ಆಟಗಾರರ ಖರೀದಿಗೆ ₹120 ಕೋಟಿ ರೂಪಾಯಿ ಗರಿಷ್ಠ ಮಿತಿ ಇರುತ್ತದೆ. ಹಾಗೇ 18 ರಿಂದ 25 ಆಟಗಾರರನ್ನು ಒಂದು ತಂಡ ಖರೀದಿ ಮಾಡಲು ಅವಕಾಶ ಇರುತ್ತದೆ. ಹೀಗೆ 18 ರಿಂದ 25 ಆಟಗಾರರನ್ನು ಒಟ್ಟು ₹120 ಕೋಟಿ ರೂಪಾಯಿ ಒಳಗೆ ಖರೀದಿ ಮಾಡಬೇಕು. ಆದರೆ ಪಾಕಿಸ್ತಾನದಲ್ಲಿ ಇದು ಲಕ್ಷ ಲಕ್ಷದ ಲೆಕ್ಕದಲ್ಲಿ ಇರುತ್ತೆ, ಇಂತಹ ಪಾಕಿಸ್ತಾನಕ್ಕೆ ಭಾರತದ ಬಗ್ಗೆ ಮಾತನಾಡುವ ಹಕ್ಕೇ ಇಲ್ಲ ಅಂತಿದ್ದಾರೆ ಕ್ರಿಕೆಟ್ ಅಭಿಮಾನಿಗಳು.
ಮೈತುಂಬಾ ಸಾಲ ಮಾಡಿರುವ ಪಾಕ್!
ಪಾಕಿಸ್ತಾನ ಸರ್ಕಾರ ಮಾತ್ರವಲ್ಲ, ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ಕೂಡ ಮೈತುಂಬಾ ಸಾಲ ಮಾಡಿಕೊಂಡು ನರಳಾಡುತ್ತಿದೆ. ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ಆಗಿರುವ ಪಿಸಿಬಿ ಕೈಯಲ್ಲಿ ಕಾಸು ಇಲ್ಲದೆ ಸರಿಯಾಗಿ ಕ್ರಿಕೆಟ್ ಟೂರ್ನಿಗಳನ್ನ ಆಯೋಜನೆ ಮಾಡುವುದು ಕೂಡ ಕಷ್ಟ, ಕಷ್ಟ ಎನ್ನಲಾಗುತ್ತಿದೆ. ಪರಿಸ್ಥಿತಿ ಹೀಗಿದ್ದಾಗ, ಭಾರತದ ಐಪಿಎಲ್ ಟೂರ್ನಿ ತನ್ನ ಹರಾಜು ಪ್ರಕ್ರಿಯೆ ಮೂಲಕವೇ ಮಿರ ಮಿರ ಮಿಂಚಿ ಹೆಸರು ಮಾಡುತ್ತಿದೆ.












Click it and Unblock the Notifications