RCB VS CSK: ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಭೀತಿ: 10 ಓವರ್‌ಗಳ ಪಂದ್ಯ ನಡೆದರೆ ಲೆಕ್ಕಾಚಾರ ಏನು? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಹೈ ವೋಲ್ಟೇಜ್ ಪಂದ್ಯವ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಶನಿವಾರ ನಡೆಯುವ ಪಂದ್ಯಕ್ಕೆ ಮಳೆ ಕಾಟ ನೀಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.
ಆರ್‌ಸಿಬಿ ಅಭಿಮಾನಿಗಳು ಶನಿವಾರ ಪಂದ್ಯ ಬರದೆ ಇದ್ದರೆ ಸಾಕಪ್ಪ ಎಂದು ದೇವರಲ್ಲಿ ಹರಿಕೆ ಕಟ್ಟಿಕೊಳ್ಳುತ್ತಿದ್ದಾರೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಸಿಎಸ್‌ಕೆ ಬಲಿಷ್ಠವಾಗಿದೆ. ಆದರೆ ಪ್ರಸಕ್ತ ಋತುವಿನ ಎರಡನೇ ಅವಧಿಯಲ್ಲಿ ಬೆಂಗಳೂರು ತಂಡ ನೀಡಿರುವ ಪ್ರದರ್ಶನ ಅಮೋಘವಾಗಿದೆ. ಆರಂಭದಲ್ಲಿ ಪಂದ್ಯಗಳನ್ನು ಸೋತು ಕೈ ಚೆಲ್ಲಿದ್ದ ಬೆಂಗಳೂರು ತಂಡ, ನಂತರ ಸತತ ಪಂದ್ಯಗಳನ್ನು ಗೆದ್ದು ಗೆಲುವಿನ ಟ್ರ್ಯಾಕ್‌ಗೆ ಮರಳಿದ್ದಾರೆ.

ಇಂದು ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಜಯ ಸಾಧಿಸಿ, ಪ್ಲೇ ಆಫ್‌ಗೆ ಪ್ರವೇಶಿಸಬೇಕು ಎಂದು ಅಭಿಮಾನಿಗಳ ಆಶಯವಾಗಿದೆ. ಆದರೆ ವರುಣ ಈ ಪಂದ್ಯಕ್ಕೆ ಕಾಟ ನೀಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಅಭಿಮಾನಿಗಳು ಈಗಾಗಲೇ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ. ಒಂದು ವೇಳೆ ಮಳೆ ಬಂದು ಓವರ್‌ಗಳಿಗೆ ಕತ್ತರಿ ಬಿದ್ದರೆ ಏನು ಕಥೆ ಎಂಬ ಆತಂಕ ಮನೆ ಮಾಡಿದೆ.
20 ಓವರ್ ಪಂದ್ಯ ನಡೆದರೆ ಸಮೀಕರಣ ಏನು?
ಒಂದು ವೇಳೆ ಶನಿವಾರ ಮಳೆರಾಯ ತನ್ನ ಕೆಲಸವನ್ನು ನಿಲ್ಲಿಸಿದ್ದೇ ಆದಲ್ಲಿ, 20 ಓವರ್‌ಗಳ ಸಂಪೂರ್ಣ ಪಂದ್ಯ ನಡೆಯುವ ಸಾಧ್ಯತೆ ಇದೆ. ಹೀಗೆ ಆದಲ್ಲಿ ಆರ್‌ಸಿಬಿ ಮೊದಲು ಬ್ಯಾಟ್ ಮಾಡಿದರೆ, ಸಿಎಸ್‌ಕೆ ತಂಡವನ್ನು 18 ರನ್‌ಗಳಿಂದ ಸೋಲಿಸಬೇಕು. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ ಮೊತ್ತವನ್ನು ಚೇಸ್ ಮಾಡಬೇಕಾದಲ್ಲಿ ಬೆಂಗಳೂರು ತಂಡ 18.1 ಓವರ್‌ಗಳಲ್ಲಿ ಗುರಿ ಮುಟ್ಟುವ ಅನಿವಾರ್ಯತೆ ಇದೆ. ಅಂದಗಾ ಮಾತ್ರ ಬೆಂಗಳೂರು ತಂಡದ ರನ್ ರೇಟ್ ಸಿಎಸ್‌ಕೆ ಗಿಂತಲೂ ಬಲಾಢ್ಯವಾಗುತ್ತದೆ.

ಮಳೆ ಕಾಟ ನೀಡಿ ಓವರ್‌ಗಳಿಗೆ ಕತ್ತರಿ ಬಿದ್ದರೆ?
ಶನಿವಾರ ಪಂದ್ಯ ಆರಂಭಕ್ಕೂ ಮುನ್ನ ಅಥವಾ ಪಂದ್ಯದ ಸಮಯದಲ್ಲಿ ಮಳೆ ಸುರಿದಿದ್ದೇ ಆದರೆ ಓವರ್‌ಗಳಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಹೀಗೆ ಆದರೂ ಇದಕ್ಕೆ ಪರಿಹಾರವಿದೆ. ಆರ್‌ಸಿಬಿ ಒಂದು ವೇಳೆ 16 ಓವರ್‌ಗಳಲ್ಲಿ 171 ರನ್‌ಗಳ ಗುರಿಯನ್ನು ನೀಡಿದರೆ, ಸಿಎಸ್‌ಕೆ ತಂಡವನ್ನು ಆರ್‌ಸಿಬಿ 152 ರನ್‌ಗಳಿಗೆ ಕಟ್ಟಿ ಹಾಕುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಪ್ಲೇ ಆಫ್ ಆಸೆ ಫಲಿಸುತ್ತದೆ.
ಪಂದ್ಯ ಹತ್ತು ಓವರ್ ನಡೆದರೆ?
ಮಳೆ ಹೆಚ್ಚು ಸಮಯ ಬಿದ್ದ ಪರಿಣಾಮ ಕೇವಲ 10 ಓವರ್‌ಗಳ ಪಂದ್ಯವನ್ನು ಆಡಿಸಲು ಅವಕಾಶವಾದರೆ, ಆಗಲೂ ಇದೇ ಸಮೀಕರಣ ಅಪೈ ಆಗುತ್ತದೆ. ಅಂದರೆ ಸಿಂಪಲ್ ಆರ್‌ಸಿಬಿ ಚೇಸ್ ಮಾಡಿದರೆ, 11 ಎಸೆತ ಇರುವಾಗಲೇ ಗೆಲ್ಲಬೇಕು. ಡಿಫೆಂಡ್ ಮಾಡಿಕೊಳ್ಳುವುದಿದ್ದರೆ 18 ರನ್ ಜಯ ಸಾಧಿಸಬೇಕು. ಅಂದಾಗ ಮಾತ್ರ ಪ್ಲೇ ಆಫ್ ಕನಸು ನನಸಾಗುತ್ತದೆ. ಇಲ್ಲದಿದ್ದರೆ ಈ ಬಾರಿಯೂ. ನಿರಾಸೆ ಕಟ್ಟಿಟ್ಟ ಬುತ್ತಿತ್ತು.
ಕಳೆದ ಕೆಲವು ಪಂದ್ಯಗಳಲ್ಲಿ ಆರ್‌ಸಿಬಿ ನೀಡಿದ ಪ್ರದರ್ಶನವನ್ನು ಸಿಎಸ್‌ಕೆ ವಿರುದ್ಧವೂ ನೀಡಿದ್ದೇ ಆದಲ್ಲಿ ಗೆಲುವಿನ ನಗೆ ಬೀರಬಹುದು.












Click it and Unblock the Notifications