IPL 2027 Mini Auction: ಐಪಿಎಲ್‌ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ

IPL 2027 Mini Auction: ವಿಶ್ವದ ಅತಿದೊಡ್ಡ ಪ್ರಸಿದ್ಧ ಲೀಗ್‌ಗಳಲ್ಲಿ ಒಂದಾದ ಐಪಿಎಲ್‌ ಅಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್ ಸಿಕ್ಕಿದ್ದು, 2027ರ ಆವೃತ್ತಿಯ ಮಿನಿ ಹರಾಜು ಪ್ರಕ್ರಿಯೆ ಭಾರತದಲ್ಲೇ ನಡೆಯಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಹಾಗಾದ್ರೆ ಎಲ್ಲಿ ಹಾಗೂ ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿನ ನೀಡಲಾಗಿದೆ ತಿಳಿಯಿರಿ.

ವಿಶ್ವದ ಪ್ರಸಿದ್ಧ ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂಬರುವ ಆವೃತ್ತಿಯ ಹರಾಜು ಪ್ರಕ್ರಿಯೆಯು ನಾಲ್ಕು ವರ್ಷಗಳ ಸುದೀರ್ಘ ಅವಧಿಯ ನಂತರ ಮತ್ತೆ ಭಾರತದಲ್ಲೇ ನಡೆಯಲು ಸಜ್ಜಾಗಿದೆ. ಮೂಲಗಳ ಪ್ರಕಾರ ಈ ಬಾರಿ ಮಿನಿ ಹರಾಜು ಪ್ರಕ್ರಿಯೆಯು ಗೋವಾದ ಪ್ರಸಿದ್ಧ ಐಟಿಸಿ ಗ್ರಾಂಡ್ ಹೋಟೆಲ್‌ನಲ್ಲಿ ಡಿಸೆಂಬರ್ 16ರಂದು ನಡೆಯುವ ಸಾಧ್ಯತೆಯಿದೆ ಎಂಬ ಬಿಗ್ ಅಪ್ಡೇಟ್ ಹೊರಬಿದ್ದಿದೆ.

IPL 2027 Mini Auction Date Venue India s Goa Hotel and Latest Updates Know Complete details

ಭಾರತದಲ್ಲೇ ಮಿನಿ ಹರಾಜು ಆಯೋಜನೆಗೆ ಬಿಸಿಸಿಐ ನಿರ್ಧಾರ

ಕಳೆದ ಮೂರು-ನಾಲ್ಕು ಆವೃತ್ತಿಗಳಲ್ಲಿ ವಿವಿಧ ಕಾರಣಗಳಿಂದಾಗಿ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ವಿದೇಶಗಳಲ್ಲಿ ನಡೆಸಲಾಗಿತ್ತು. ದುಬೈ, ಜೆಡ್ಡಾ (ಮೆಗಾ ಹರಾಜು) ಮತ್ತು ಅಬುಧಾಬಿಯಲ್ಲಿ ಹರಾಜುಗಳು ಯಶಸ್ವಿಯಾಗಿ ನಡೆದಿದ್ದವು. ಪ್ರತಿ ಬಾರಿಯೂ ಈ ಪ್ರಕ್ರಿಯೆಯನ್ನು ಭಾರತದಲ್ಲೇ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಯಸುತ್ತಿತ್ತು. ದೇಶದಲ್ಲಿ ಆ ಸಮಯದಲ್ಲಿ ಮದುವೆಗಳ ಸೀಸನ್ ಹೆಚ್ಚಿರುವುದರಿಂದ ಸೂಕ್ತ ಹೋಟೆಲ್‌ಗಳು ಮತ್ತು ಇತರ ಮೂಲಸೌಕರ್ಯಗಳ ಲಭ್ಯತೆಯ ಸಮಸ್ಯೆ ಎದುರಾಗಿತ್ತು. ಆದರೆ, ಈ ಬಾರಿ ಇದು ಮಿನಿ ಹರಾಜಾಗಿರುವುದರಿಂದ ಭಾರತದಲ್ಲೇ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಫ್ರಾಂಚೈಸಿಗಳಿಗೆ ಮಹತ್ವದ ಸೂಚನೆ

ಬಿಸಿಸಿಐನ ಸಾರಿಗೆ ಮತ್ತು ಲೇಔಟ್ ನಿರ್ವಹಣಾ ತಂಡವು ಈಗಾಗಲೇ ಎಲ್ಲಾ ಐಪಿಎಲ್ ಫ್ರಾಂಚೈಸಿಗಳಿಗೆ ಪ್ರಯಾಣ ಯೋಜನೆ ಮತ್ತು ಹೋಟೆಲ್ ಬುಕಿಂಗ್‌ಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ದಿನಾಂಕ ಮತ್ತು ಸ್ಥಳದ ಸುಳಿವು ನೀಡಿದೆ. ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ. ಡಿಸೆಂಬರ್ 16ರಂದೇ ಭಾರತ ಮತ್ತು ಶ್ರೀಲಂಕಾ ನಡುವೆ ಬೆಂಗಳೂರಿನಲ್ಲಿ ಏಕದಿನ ಪಂದ್ಯ ಕೂಡ ನಿಗದಿಯಾಗಿದೆ.

ಆಟಗಾರರ ಪ್ರಮುಖ ಟ್ರೇಡಿಂಗ್

ಹರಾಜು ಪ್ರಕ್ರಿಯೆಗೆ ಮುನ್ನವೇ ಹಲವು ಪ್ರಮುಖ ಫ್ರಾಂಚೈಸಿಗಳು ಆಟಗಾರರ ವಿನಿಮಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ. ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದಲ್ಲಿದ್ದ ರಿಷಭ್ ಪಂತ್ ₹15 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಕ್ಕೆ ಮರಳಿದ್ದರೆ, ಕುಲದೀಪ್ ಯಾದವ್ ₹13.5 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ.

ವೇಗದ ಬೌಲರ್ ಟಿ.ನಟರಾಜನ್ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಮರಳಿದ್ದು, ಸ್ಪಿನ್ನರ್ ಜೀಶನ್ ಅನ್ಸಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಇನ್ನೂ ಈ ಬಾರಿಯ ಮಿನಿ ಹರಾಜು ಪ್ರಕ್ರಿಯೆಯು ದೇಶದ ಪ್ರಮುಖ ಪ್ರವಾಸಿ ತಾಣವಾದ ಗೋವಾದಲ್ಲಿ ನಡೆಯುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಹಾಗೂ ಫ್ರಾಂಚೈಸಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ ಅಂತಲೇ ಹೇಳಬಹುದು.

ಹರಾಜಿನ ಕುರಿತಾದ ಮಾಹಿತಿ ಸಭೆ ಡಿಸೆಂಬರ್ 15ರಂದು ನಡೆಯಲಿದೆ ಎಂದು ತಿಳಿದುಬಂದಿದೆ. ಆದರೆ ಈ ಸಂದೇಶ ಪ್ರಯಾಣ ಮತ್ತು ಇತರ ವ್ಯವಸ್ಥೆಗಳನ್ನು ಮುಂಚಿತವಾಗಿ ಯೋಜಿಸಲು ಮಾತ್ರ ಕಳುಹಿಸಲಾಗಿದೆ. ಹರಾಜಿನ ದಿನಾಂಕ ಬದಲಾಗುವ ಸಾಧ್ಯತೆಯೂ ಇದೆ. ಐಪಿಎಲ್ ತಂಡಗಳ ಮಾಲೀಕರು ಮತ್ತು ಸಿಇಒಗಳುಗೆ ಈ ಕುರಿತು ಅಧಿಕೃತ ಮಾಹಿತಿ ಇನ್ನೂ ತಲುಪಿಲ್ಲ ಎಂದು ವರದಿ ತಿಳಿಸಿದೆ.

ಡಿಸೆಂಬರ್ 16ರಂದು ಶ್ರೀಲಂಕಾ-ಭಾರತ ನಡುವೆ ಏಕದಿನ ಪಂದ್ಯ

ಇದೇ ವೇಳೆ ಡಿಸೆಂಬರ್ 16ರಂದು ಬೆಂಗಳೂರಿನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಏಕದಿನ ಪಂದ್ಯ ನಡೆಯುವ ವೇಳಾಪಟ್ಟಿ ಇದೆ. ಇದೇ ದಿನ ಐಪಿಎಲ್ ಹರಾಜು ನಡೆಯುವ ಸಾಧ್ಯತೆ ಇರುವುದರಿಂದ, ಪಂದ್ಯ ಅಥವಾ ಹರಾಜಿನ ದಿನಾಂಕದಲ್ಲಿ ಬದಲಾವಣೆಯಾಗುತ್ತದೆಯೇ ಎಂಬ ಇನ್ನೂ ಸ್ಪಷ್ಟವಾದ ಮಾಹಿತಿ ಹೊರಬೀಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+