RCB: ಐಪಿಎಲ್ 2026 ಮಿನಿ ಹರಾಜಿಗೂ ಮುನ್ನ ಕನ್ನಡಿಗ ಮಯಾಂಕ್ ಅಗರ್ವಾಲ್ ಸೇರಿ 8 ಆಟಗಾರರನ್ನ ಕೈಬಿಟ್ಟ ಆರ್‌ಸಿಬಿ
IPL 2026 RCB Team: ಆರ್‌ಸಿಬಿ ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಚಾಂಪಿಯನ್ ಆಯಿತು. ಇದೀಗ ಎಲ್ಲರ ಕಣ್ಣು 2026ರ ಸೀಸನ್‌ನತ್ತ ನೆಟ್ಟಿದೆ. ಮುಂದಿನ ಆವೃತ್ತಿ ಮಿನಿ ಹರಾಜಿಗೂ ಮುನ್ನ ಬೆಂಗಳೂರು ರಿಟೈನ್ ಪಟ್ಟಿಯನ್ನು ಪ್ರಟಕ ಮಾಡಿದೆ. ಈ ವೇಳೆ ಕನ್ನಡಿಗ ಮಯಾಂಕ್ ಅಗರ್ವಾಲ್ ಸೇರಿ 8 ಆಟಗಾರರನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ, ಯಾರೆಲ್ಲಾ ಔಟ್ ಹಾಗೂ ಉಳಿದ ಹಣವೆಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹಾಲಿ ಐಪಿಎಲ್ ಚಾಂಪಿಯನ್ ಆರ್‌ಸಿಬಿಯು ಮಿನಿ ಹರಾಜಿಗೆ ಮುನ್ನ ರಿಟೈನ್ ಪಟ್ಟಿಯನ್ನು ಪ್ರಕಟ ಮಾಡಿದೆ. ತಂಡವು ಎಷ್ಟು ಆಟಗಾರರನ್ನು ಉಳಿಸಿಕೊಂಡಿದೆ ಎನ್ನುವುದನ್ನು ತಿಳಿದುಕೊಳ್ಳುವ ಮುಂಚಿತವಾಗಿ ಎಷ್ಟು ಆಟಗಾರರನ್ನು ಕೈಬಿಟ್ಟಿದೆ ಎಂದು ತಿಳಿಯಿರಿ. ಕನ್ನಡಿಗ ಮಯಾಂಕ್ ಅಗರ್ವಾಲ್ ಸೇರಿ ಒಟ್ಟು ಪ್ರಮುಖ 8 ಮಂದಿ ಆಟಗಾರರನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಯಾರೆಲ್ಲಾ ಈ ಪಟ್ಟಿಯಲ್ಲಿ ಇದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿ ನೋಡಿ.

ಕಳೆದ ಬಾರಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರದ ಕಾರಣ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಕೈಬಿಟ್ಟಿದೆ. ಜೊತೆಗೆ ಕನ್ನಡಿಗ ದೇವದತ್ ಪಡಿಕ್ಕಲ್ ಗಾಯಗೊಂಡ ವೇಳೆ ತಂಡಕ್ಕೆ ಬದಲಿ ಆಟಗಾರನಾಗಿ ಎಂಟ್ರಿ ಕೊಟ್ಟಿದ್ದ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಕೂಡ ಬಿಡುಗಡೆ ಮಾಡಿದೆ. ಯಾಕಂದ್ರೆ ನಿಯಮದ ಪ್ರಕಾರ, ಬದಲಿ ಆಟಗಾರನಾಗಿ ತೆಗೆದುಕೊಂಡವರನ್ನು ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ.
ಇವರ ಜೊತೆಗೆ ಯುವ ಆಟಗಾರ ಸ್ವಸ್ತಿಕ್ ಚಿಕಾರಾ ಸೇರಿ ಟಿಮ್ ಸೀಫರ್ಟ್, ಮನೋಜ್ ಭಾಂಡಗೆ, ಲುಂಗಿ ಎನ್‌ಗಿಡಿ, ಬ್ಲೆಸಿಂಗ್ ಮುಜರಾಬಾನಿ ಹಾಗೂ ಮೋಹಿತ್ ರಾಠಿ ಅವರನ್ನು ಕೂಡ ರಾಯಲ್ದ ಚಾಲೆಂಜರ್ಸ್ ಬೆಂಗಳೂರು ತಂಡ ಬಿಡುಗಡೆ ಮಾಡಿದೆ. ಇದೀಗ ಆರ್‌ಸಿಬಿ ಬಳಿ ಹರಾಜಿಗೂ ಮುನ್ನ ಉಳಿದಿರುವುದು 16.4 ಕೋಟಿ ರೂಪಾಯಿ.
* ಲಿಯಾಮ್ ಲಿವಿಂಗ್‌ಸ್ಟೋನ್: ಐಪಿಎಲ್ 2025ರಲ್ಲಿ ಆರ್‌ಸಿಬಿ ಪರ ಆಲ್ರೌಂಡರ್ ಆಗಿ ಕಾಣಿಸಿಕೊಂಡ ಲಿಯಾಮ್ ಲಿವಿಂಗ್‌ಸ್ಟೋನ್ ನಿರೀಕ್ಷಿದಷ್ಟು ಪ್ರದರ್ಶನ ತೋರದೆ, ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಆಡೊದ 10 ಪಂದ್ಯಗಳಲ್ಲಿ ಅವರು ಕೇವಲ 112 ರನ್ ಮಾತ್ರ ಕಲೆಹಾಕಿದ್ದರು. ಜೊತೆಗೆ 5 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು 2 ವಿಕೆಟ್ ಮಾತ್ರ ಪಡೆದುಕೊಂಡಿದ್ದಾರೆ. ಆದ್ದರಿಂದ ಆರ್ಸಿ ಸ್ಟೋನ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ.
* ಮಯಾಂಕ್ ಅಗರ್ವಾಲ್: ಕನ್ನಡಿಗ ದೇವದತ್ ಪಡಿಕ್ಕಲ್ ಗಾಯಗೊಂಡ ವೇಳೆ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಕಳೆದ ಬಾರಿ ಆಡಿದ 4 ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದರು. ಆದರೂ ಅವರನ್ನು ಇದೀಗ ನಿಯಮದಂತೆ ಕೈಬಿಡಲಾಗಿದೆ.
* ಬ್ಲೆಸಿಂಗ್ ಮುಝರಬಾನಿ: ಐಪಿಎಲ್ನ ಕೊನೆಯ ಎರಡು ಪಂದ್ಯಗಳ ವೇಳೆ ಕಾಣಿಸಿಕೊಂಡ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿಯನ್ನು ಕೂಡ ಕೈಬಿಡಲಾಗಿದೆ. ಮುಝರಬಾನಿ ಅವರನ್ನು ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಆದ್ದರಿಂದ ನಿಯಮದಂತೆ ಇವರನ್ನು ಅಹ ಆರ್‌ಸಿಬಿ ರಿಲೀಸ್ ಮಾಡಿದೆ.
* ಟಿಮ್ ಸಿಫರ್ಟ್: ಇವರು ಸಹ ಜೇಕಬ್ ಬೆಥೆಲ್ ತವರಿಗೆ ಹಿಂತಿರುಗಿದ ವೇಳೆ ಆರ್‌ಸಿಬಿ ಬದಲಿಯಾಗಿ ತಾತ್ಕಾಲಿಕ ಆಟಗಾರನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದ್ದರಿಂದ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇವರನ್ನ ಸಹ ಬೊಡುಗಡೆಗೊಳಿಸಿದೆ.
* ಮೋಹಿತ್ ರಾಥಿ: ಆರ್‌ಸಿಬಿ ತಂಡದಲ್ಲಿರುವ ಯುವ ಆಲ್ರೌಂಡರ್ ಮೋಹಿತ್ ರಾಥಿ ಸಹ ಈ ಬಾರಿ ಒಂದು ಪಂದ್ಯದಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ. ಇಂಪ್ಯಾಕ್ಟ್ ಸಬ್ ಪಟ್ಟಿಯಲ್ಲೂ ಮೋಹಿತ್ಗೆ ಸ್ಥಾನ ಸಿಕ್ಕಿರಲಿಲ್ಲ. ಇದನ್ನು ಪರಿಗಣಿಸಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎನ್ನಲಾಗುತ್ತಿದೆ.
* ಮನೋಜ್ ಭಾಂಡಗೆ: ಕರ್ನಾಟಕದ ಯುವ ಆಲ್ರೌಂಡರ್ ಮನೋಜ್ ಭಾಂಡಗೆ ಅವರನ್ನು ಸಹ ಆರ್‌ಸಿಬಿ ಕೈಬಿಟ್ಟಿದೆ. ಕಳೆದ ಬಾರಿ ಆರ್‌ಸಿಬಿ ಪರ ಮೊನೋಜ್ ಒಂದು ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಇದನ್ನು ಬಿಟ್ಟರೆ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ಆದ್ದರಿಂದ ಅವರನ್ನು ಆರ್‌ಸಿಬಿ ಕೈಬಿಟ್ಟಿದೆ ಎನ್ನಲಾಗುತ್ತಿದೆ.
* ಸ್ವಸ್ತಿಕ್ ಚಿಕಾರ: ಐಪಿಎಲ್ 2025ರಲ್ಲಿ ಆರ್‌ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದ ಸ್ವಸ್ತಿಕ್ ಚಿಕಾರ ಅವರನ್ನು ಕೂಡ ರಿಲೀಸ್ ಮಾಡಿದೆ. ಕಳೆದ ಸೀಸನ್ನಲ್ಲಿ ಒಂದು ಪಂದ್ಯದಲ್ಲೂ ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ಆರ್‌ಸಿಬಿ ಈ ನಿರ್ಧಾರ ಮಾಡಿದ ಎನ್ನಲಾಗುತ್ತಿದೆ.
* ಲುಂಗಿ ಎನ್‌ಗಿಡಿ: ಆರ್‌ಸಿಬಿ ಪರ ಕಳೆದ ಆವೃತ್ತಿಯಲ್ಲಿ 2 ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್‌ಗಿಡಿ ಅವರನ್ನು ಕೂಡ ಬಿಡುಗಡೆ ಮಾಡಿದೆ. ಕಳೆದ ಬಾರಿ ಆಡಿದ 2 ಪಂದ್ಯಗಳಿಂದ 4 ವಿಕೆಟ್ ಕಿತ್ತಿದ್ದಾರೆ. ಆದರೂ ಅವರನ್ನು ರಿಲೀಸ್ ಮಾಡಲಾಗಿದೆ.
ಒಟ್ಟಿನಲ್ಲಿ ಹೇಳೋದಾದ್ರೆ, ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ ಅಥವಾ ಹಣ ಉಳಿಸುವ ಉದ್ದೇಶದಿಂದ ತಂಡದಲ್ಲಿ ಕಣಕ್ಕಿಳಿಯಲು ಅವಕಾಶ ಸಿಗದ, ಉತ್ತಮ ಪ್ರದರ್ಶನ ತೋರದ ಹಾಗೂ ಬದಲಿ ಆಟಗಾರರನ್ನು ಆರ್‌ಸಿಬಿ ಬಿಡುಗಡೆಗೊಳಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಷ್ಟರ ಮಟ್ಟಿಗೆ ಬಲಿಷ್ಠ ತಂಡವನ್ನು ಹೊಂದಿದ್ದು, ಹೆಚ್ಚುವರಿ ಆಟಗಾರರನ್ನು ಬಿಡುಗಡೆಗೊಳಿಸಿದೆ ಎನ್ನಲಾಗುತ್ತಿದೆ.
ಆರ್‌ಸಿಬಿ ರಿಲೀಸ್ ಪಟ್ಟಿ
* ಲಿಯಾಮ್ ಲಿವಿಂಗ್‌ಸ್ಟೋನ್
* ಮಯಾಂಕ್ ಅಗರ್ವಾಲ್
* ಬ್ಲೆಸಿಂಗ್ ಮುಝರಬಾನಿ
* ಟಿಮ್ ಸಿಫರ್ಟ್
* ಮೋಹಿತ್ ರಾಥಿ
* ಮನೋಜ್ ಭಾಂಡಗೆ
* ಸ್ವಸ್ತಿಕ್ ಚಿಕಾರ
* ಲುಂಗಿ ಎನ್‌ಗಿಡಿ
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್‌ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
ಐಪಿಎಲ್ನಲ್ಲಿ ಯಾರೂ ಕೊಳ್ಳದಿದ್ದರೂ ಅಯೋಧ್ಯೆಯಲ್ಲಿ ಅಬ್ಬರಿಸಿದ ಆರ್‌ಸಿಬಿ ಮಾಜಿ ಆಟಗಾರ; 195 ರನ್ ಚಚ್ಚಿದ ಸ್ವಸ್ತಿಕ್ ಚಿಕಾರ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್












Click it and Unblock the Notifications