RCB: ಆರ್‌ಸಿಬಿ ಇದೇ ಕಾರಣಕ್ಕೆ ಐಪಿಎಲ್ 2026 ಟ್ರೋಫಿ ಗೆಲ್ಲುವುದು ಖಚಿತ..
IPL 2026 RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಬಲಿಷ್ಠ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿತು. ಇದೀಗ ಎಲ್ಲರ ಚಿತ್ತ 2026ರ ಆವೃತ್ತಿಯತ್ತ ನೆಟ್ಟಿದೆ. ಮಿನಿ ಹರಾಜಿಗೂ ಮುನ್ನೆವೇ ಇತ್ತೀಚೆಗಷ್ಟೇ ಎಲ್ಲಾ ತಂಡಗಳು ರಿಟೈನ್ ಪಟ್ಟಿಯನ್ನು ಪ್ರಕಟ ಮಾಡಿವೆ. ಇದರ ಬೆನ್ನಲ್ಲೇ ಇದೀಗ ಮುಂದಿನ ಬಾರಿಯೂ ಟ್ರೋಫಿ ಗೆಲ್ಲುವುದು ಬೆಂಗಳೂರು ಫಿಕ್ಸ್ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ.
ರಿಟೈನ್ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ದೊಡ್ಡ ಬದಲಾವಣೆಗಳು ಏನು ಆಗಿಲ್ಲ. ಬಹುತೇಕ ಕಳೆದ ಆವೃತ್ತಿಯಲ್ಲಿ ಆಡಿದ ದಾಂಡಿಗರನ್ನೇ ಉಳಿಸಿಕೊಂಡಿದೆ. 17 ಮಂದಿ ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, 8 ಮಂದಿಯನ್ನು ಕೈಬಿಟ್ಟಿದೆ. ಇದೀಗ ಆರ್‌ಸಿಬಿ ಪ್ರಾಂಚೈಸಿ ಮಿನಿ ಹರಾಜಿನಲ್ಲಿ ಉಳಿದ ಹಣದಲ್ಲಿ ಉತ್ತಮ ಆಲ್‌ರೌಂಡರ್ ಅನ್ನು ಖರೀದಿ ಮಾಡುವ ಪ್ಲ್ಯಾನ್‌ನಲ್ಲಿದೆ.

ಹೌದು.. ಆರ್‌ಸಿಬಿ ಆಡಿದ 17 ಸೀಸನ್‌ಗಳಲ್ಲೂ ಒಂದೇ ಒಂದು ಬಾರಿಯೂ ಟ್ರೋಫಿ ಗೆದ್ದಿರಲ್ಲಿ. ಆದರೆ, 18ನ ಆವೃತ್ತಿಯಲ್ಲಿ ಈ ಕೊರಗನ್ನು ಮರೆಸಿತು. ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ನಲ್ಲಿ ಬಗ್ಗು ಬಡಿಯುವ ಮೂಲಕ ಟ್ರೋಫಿ ಕನಸನ್ನು ಕೊನೆಗೂ ನನಸು ಮಾಡಿಕೊಂಡು ವನವಾಸಕ್ಕೆ ಅಂತ್ಯವಾಡಿತು. ಇದಕ್ಕೆ ಕಾರಣ ಈ ಬಾರಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದು.
ಆರಂಭದಿಂದಲೂ ಎಲ್ಲಾ ಬಲಿಷ್ಠ ತಂಡಗಳನ್ನು ಬಗ್ಗುಬಡಿಯುವ ಮೂಲಕ ಆರ್‌ಸಿಬಿ ಈ ಸಾಧನೆ ಮಾಡಿತು. ಎಲ್ಲಾ ಬಾರಿಯೂ ಯಾವ ಸ್ಥಾನದಲ್ಲಿ ಯಾರನ್ನು ಆಡಿಸಬೇಕು ಎನ್ನುವ ಚಿಂತನೆಯಲ್ಲಿತ್ತು. ಆದರೆ, ಇದಕ್ಕೂ ಕೂಡ 2025ರಲ್ಲಿ ಉತ್ತರ ಸಿಕ್ಕಾಯಿತು. ಆಗಲೇ ಇದೇ ತಂಡ ಫಿಕ್ಸ್ ಎಂದಾಯಿತು. ಅದರಂತೆಯೇ ಮುಂದಿನ ಬಾರಿಗೆ ಕಳೆದ ಬಾರಿಯ ಆಟಗಾರರನ್ನೇ ಉಳಿಸಿಕೊಂಡಿದೆ. ಮತ್ತೊಂದೆಡೆ ಕಳಪೆ ಪ್ರದರ್ಶನ ತೋರಿದ, ಒಂದು ಪಂದ್ಯದಲ್ಲೂ ಕಾಣಿಸಿಕೊಳ್ಳದ ಹಾಗೂ ಬದಲಿಯಾಗಿ ತೆಗೆದುಕೊಂಡ ಆಟಗಾರರನ್ನು ಕೈಬಿಟ್ಟಿದೆ.
ಬಹುತೇಕ ಕಳೆದ ಬಾರಿಯ ದಾಂಡಿಗರನ್ನೇ ಉಳಿಸಿಕೊಂಡಿದ್ದು, ಇದೇ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇದರಿಂದ ಮುಂದಿನ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಮತ್ತೆ ಟ್ರೋಫಿ ಎತ್ತಲಿದೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಅಲ್ಲದೆ, ಹಲವು ಕ್ರಿಕೆಟ್ ದಿಗ್ಗಜರು ಸಹ ಇದೇ ಭವಿಷ್ಯವನ್ನು ನುಡಿದಿದ್ದಾರೆ. ಅಷ್ಟರ ಮಟ್ಟಿಗೆ ಎಲ್ಲಾ ತಂಡಗಳನ್ನು ಸುಲಭವಾಗಿ ಬುಗ್ಗುಬಡಿಯುವಂತಹ ಆಟಗಾರರು ಆರ್‌ಸಿಬಿಯಲ್ಲಿ ಇದ್ದಾರೆ.
ಈ ನಡುವೆಯೇ ಆರ್‌ಸಿಬಿಗೆ ಆಘಾತವೊಂದು ಎದುರಾಗಿದೆ. ಕಳೆದ ಬಾರಿ ಟ್ರೋಫಿ ಗೆಲುವಿಗೆ ಕಾರಣರಾದ ಮಾರಕ ಬೌಲರ್ ಮೇಲೆ ಅತ್ಯಾಚಾರ ಆರೋಪದಲ್ಲಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆದ್ದರಿಂದ ಅವರು ರಿಟೈನ್ ಆದರೂ ಸಹ ಮುಂದಿನ ಬಾರಿ ಆಡುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಆಗಂತ ಆರ್‌ಸಿಬಿಯಲ್ಲಿ ಉತ್ತಮವಾಗಿ ಆಡುವ ಆಟಗಾರರು ಇದ್ದಾರೆ. ಆದರೂ ಇದೀಗ ಆರ್‌ಸಿಬಿ ಮಿನಿ ಹರಾಜಿನ ವೇಳೆ ಆಲ್‌ರೌಂಡರ್ ಅನ್ನು ಕೊಂಡುಕೊಳ್ಳುವತ್ತ ಗಮನಹರಿಸಿದೆ. ಒಟ್ಟಿನಲ್ಲಿ ಬಲಿಷ್ಠ ಆಟಗಾರರನ್ನು ಹೊಂದಿರುವ ಕಾರಣ ಮುಂದಿನ ಬಾರಿಯೂ ಟ್ರೋಫಿ ಗೆಲ್ಲುವ ಸಾಧ್ಯತೆಯಿದೆ.












Click it and Unblock the Notifications